ಹೊರಹಾಕಬೇಕು ವೇದನೆ
ಬಿಟ್ಟು ಬಿಡಬೇಕು ರೋದನೆ
ಮನದೊಳಗಿರಲಿ ಪ್ರಾರ್ಥನೆ
ಇಲ್ಲದಿರೆ ಸುಮ್ಮನೆ ಯಾತನೆ
ನೋವುಂಟು ಎಲ್ಲರಿಗಿಲ್ಲಿ
ನಲಿವ ಕಂಡುಕೊಳ್ಳಬೇಕಿಲ್ಲಿ
ಮಜವು ತುಂಬಿದೆ ಇಲ್ಲಿ
ತಮಾಷೆಯಾಗಿ ತೆಗೆದುಕೊಂಡಲ್ಲಿ
ಬೇಕೆಂದಾಗ ಎಲ್ಲವೂ ಸಿಗುವುದಿಲ್ಲಿ
ಅವಕಾಶವ ಉಪಯೋಗಿಸಿ
ಸಾಧನೆಯ ಹಾದಿಯಲ್ಲಿ
ಜಿಗಿದು ಮೇಲೆ ಬರಬೇಕಿಲ್ಲಿ
ಕಷ್ಟ ಎಂದರೆ ಎಲ್ಲವೂ ಕಷ್ಟ
ಸುಮ್ಮನುಳಿದರೆ ನಮಗೆ ನಷ್ಟ
ಅರಿತಾಗ ಆಗುವುದು ಸ್ಪಷ್ಟ
ಕೈಹಿಡಿದು ನಡೆಸಲು ಅದೃಷ್ಟ
ನಮ್ಮೊಳಗೆ ಇರಲು ಸದ್ಭಾವನೆ
ಬಾಧಿಸದು ಬೇಡದ ಯೋಚನೆ
ಕೈಹಿಡಿದು ನಡೆಸಲು ವಿವೇಚನೆ
ಸಾಧ್ಯವಾಗುವುದಿಲ್ಲಿ ಸಾಧನೆ

ನಾಗರಾಜ ಜಿ. ಎನ್. ಬಾಡ, ಕುಮಟ

