ಸಿಂಗರಿಸಿ ಕೋರುತಿಹುದು ಬಣ್ಣದ ಹೂಗಳು ಸ್ವಾಗತ,
ಉದುರಿದರೂ ಮತ್ತೆ ಹುಟ್ಟುವ ಹೂಗಳಲ್ಲಿಹುದು ನೋಡು ಜೀವನ ಪ್ರೀತಿಯು ಅನವರತ.
ಎಲ್ಲೋ ಗೂಡು, ಎಲ್ಲೋ ಹೊಟ್ಟೆ ಪಾಡು, ಇದೇ ತಾನೇ ಚಿಲಿಪಿಲಿ ಹಕ್ಕಿಗಳ ಬದುಕು?
ಕತ್ತಲು ಸರಿದು, ಮಸುಕು ಹರಿದು, ಮೂಡುವುದು ಬಾಳಲ್ಲೂ ಬೆಳಕು.
ಕಟ್ಟಿದಂತಿದೆ ರವಿಯ ಆಗಮಕೆ ಪ್ರಕೃತಿಯು ತೋರಣ,
ಭೂಮಿ ಆಕಾಶದ ತುಂಬಾ ಬಳಿದವರಾರೋ ಈ ಸುಂದರ ಬಣ್ಣ?
ಹಕ್ಕಿಗಳ ಚಿಲಿಪಿಲಿ, ಹರಿವ ಬೆಳಕು, ತಂಪು ತಂಗಾಳಿಯ ತಿಲ್ಲಾನ,
ಬಾಳಲ್ಲೂ ಮೂಡುವುದು ಹೊಳಪು, ಸರಿದು ಕತ್ತಲ ಛಾಪು,
ಪ್ರಕೃತಿಯಂತೆಯೇ ರಂಗು ರಂಗು ಈ ಬದುಕಿನ ಬಣ್ಣ.

– ನಯನ ಬಜಕೂಡ್ಲು


ನಿಸರ್ಗದ ರಮ್ಯತೆಯನ್ನು ಬದುಕಿನಲ್ಲೂ ಕಂಡುಕೊಂಡ ಸುಂದರ ಕವನ
ಧನ್ಯವಾದಗಳು ಮೇಡಂ
ಹಬ್ಬ ಸ್ವರ್ಗದಂತಿರುವ ನಿಸರ್ಗವನ್ನು ಚಿತ್ರಿಸಿರುವ ಕವನದ ಸೊಬಗು ಚಂದವೋ ಚಂದ
ಧನ್ಯವಾದಗಳು ಮೇಡಂ
ಪ್ರಕೃತಿ ಯನ್ನು ತಾವು ನೋಡಿದ ನೋಟದಲ್ಲಿ ಬದುಕಿನ ಒಳತಿರುಳಿನ ಮೂಡಿಸಿರುವುದು ಚೆನ್ನಾಗಿ ಬಂದಿದೆ..ಮೇಡಂ
ಧನ್ಯವಾದಗಳು ಮೇಡಂ
ಸರಳ ಸುಂದರ ಕವನ ಗೆಳತಿ. ಬರಹ ಮುಂದುವರಿಯಲಿ
ಬಾಳ ಕತ್ತಲೆಯು ಹರಿದು ಬೆಳಕು ಮೂಡಿದ ಅನುಭವ… ನಿತ್ಯವೂ ಪ್ರಕೃತಿಯು ಕಟ್ಟುವ ಸುಂದರ ತೋರಣ…
ಬಾಳಿನ ತುಂಬಾ ರಂಗು ತುಂಬಿದ ಭಾವ ಹೊತ್ತ ಸುಂದರ ಕವನ!