ಸುತ್ತಲೂ ಕವಿದ ತಮವ ಸರಿಸಿ
ಎಲ್ಲೆಡೆ ಬೆಳ್ಳನೆಯ ಬೆಳಕು ಮೂಡಿಬರಲಿ
ಜೀವನದಿ ನೊಂದು ಬೆಂದ ಮನಸಿಗೆ
ಖುಷಿ ಲವಲವಿಕೆಯನ್ನು ಹೊತ್ತುತರಲಿ
ಹಿಂಸಿಸುವ ಮನದೊಳಗಿನ ದ್ವೇಷವ ತಣಿಸಿ
ಬೇಡದ ಕಹಿ ನೆನಪುಗಳ ಅಳಿಸಿಹಾಕಲಿ
ನನ್ನದು ನನ್ಮದೆಂಬ ಇಲ್ಲ ಸಲ್ಲದ ಸ್ವಾರ್ಥ
ಭಾವನೆಗಳ ಸಂಪೂರ್ಣ ನಶಿಸಿಹೋಗಲಿ
ನಾಲ್ಕು ದಿನದ ಜೀವನವ ನಮ್ಮವರೊಂದಿಗೆ
ನೆಮ್ಮದಿಯಲಿ ಆನಂದಿಸಿ ಹೋಗುವಂತಾಗಲಿ
ಬೇಕಿಲ್ಲ ಶ್ರೀಮಂತಿಕೆ ಇರುವುದನ್ನೇ ಹಂಚಿಕೊಂಡು
ಪ್ರೀತಿಯಿಂದ ಎಲ್ಲರೂ ತಿನ್ನುವಗುಣ ಬೆಳೆಯಲಿ
ಮೇಲು ಕೀಳು ಭಾವನೆಗಳು ಅಳಿದು
ಸಮಾನತೆಯಿಂದ ಬಾಳುವಂತಾಗಲಿ
ಮಾನವೀಯ ಮೌಲ್ಯಗಳ ಬಾಂಧವ್ಯದ
ಒಳಿತನ್ನು ಅರಿತು ಎಲ್ಲರೂ ಬಾಳುವಂತಾಗಲಿ

ನಾಗರಾಜ ಜಿ. ಎನ್. ಬಾಡ, ಕುಮಟ




ಸಕಾರಾತ್ಮಕ ಸಂದೇಶ ಹೊತ್ತ ಕವನ ಚೆನ್ನಾಗಿದೆ ಸಾರ್.
ಚಂದದ ಕವಿತೆ
ಕೆಟ್ಟದೆಂಬ ತಮವು ಕಳೆದು ಒಳ್ಳೆಯದೆಂಬ ಬೆಳಕು ಮೂಡಲಿ ಎಂಬ ಸಕಾರಾತ್ಮಕ ಭಾವವನ್ನು ಹೊತ್ತ ಸಕಾಲಿಕ ಕವನ ಚೆನ್ನಾಗಿದೆ.