ದಶಮ ಸ್ಕಂದ – ಅಧ್ಯಾಯ -1
ಶ್ರೀ ಕೃಷ್ಣ ಕಥೆ – 3
ಪರೀಕ್ಷಿತರಾಜನಾಗ್ರಹಕೆ ಶುಕ ಮುನೀಂದ್ರರು ಅರುಹಿದ
ಶ್ರೀ ಕೃಷ್ಣ ಲೀಲಾವತಾರ ಕಥೆ ಅನನ್ಯ, ಪುಣ್ಯದಾಯಕ
ಭೂಲೋಕದಿ ದೈತ್ಯ ಸಂಖ್ಯೆಯು ಅಧಿಕರಿಸಿ
ದೈವ ಧರ್ಮ ಭಾವನೆಗಳಿಗೆ ಲಕ್ಷ್ಯವಿಲ್ಲದೆ
ಭೂಮಿಗೆ ಭಾರವಾಗಿರೆ ಭೂದೇವತೆ ಗೋರೂಪಧಾರಣೆ ಮಾಡಿ
ಬ್ರಹ್ಮದೇವಗೆ ಮೊರೆ ಹೋಗಿ ದೈತ್ಯ ದಾನವ ಸಮೂಹ
ದುಷ್ಟ ಕ್ಷತ್ರಿಯ ರೂಪ ಧಾರಣ ಮಾಡಿ
ವಿವಿಧ ವರ್ಣಾಶ್ರಮ ಧರ್ಮವ ಮೀರಿ
ಭೂ ಭಾರವನೂ ದುಷ್ಟರ ಅಸಹನೆಯ ಬಾಧೆಗಳನೂ
ಸಹಿಸಲಾಗದೆ ಕಾಪಾಡೆಂದು ಪ್ರಾರ್ಥಿಸಲು
ಬ್ರಹ್ಮ ದೇವ ಸಕಲ ದೇವಾದಿದೇವತೆಗಳನೊಡಗೂಡಿ
ಭೂಮಿಯೊಂದಿಗೆ ಕ್ಷೀರ ಸಮುದ್ರದ ದಂಡೆಯನು ಸೇರಿ
ಭೂ ಭಾರವನ್ನಿಳಿಸಿ ಜಗವನ್ನುದ್ಧರಿಸಬೇಕೆಂದು
ಮಹಾಮಹಿಮ ವಿಷ್ಣುವನು ಪ್ರಾರ್ಥಿಸೆ
ಒಂದು ನಭೋವಾಣಿ ಮೊಳಗಿ
ತನಗೆ ಭೂದೇವಿಯ ವಿಷಮ ಸ್ಥಿತಿಯ ಅರಿವಿದೆಯೆಂದೂ
ಈ ಬಾಧಾ ಪರಿಹಾರ್ಥನವಾಗಿ ಲಕ್ಷ್ಮೀ ಸಹಿತನಾಗಿಯೂ
ಶೇಷದೇವನೊಂದಿಗೂ ಯದುಕುಲದಲಿ
ವಸುದೇವ ದೇವಕಿಯರೆಂಬ ದಂಪತಿಗಳ
ಕುಮಾರನಾಗಿ ಅವತರಿಸಿ ಭೂ ಭಾರ ನೀಗಿಸುವ
ಭರವಸೆಗೆ ಸಂತಸಗೊಂಡು ಬ್ರಹ್ಮಾದಿ ದೇವತೆಗಳು
ಭೂದೇವಿ ಸಹಿತ ತಮ್ಮ ಸ್ವಸ್ಥಾನಕ್ಕೆ ಮರಳಿದರು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43771

-ಎಂ. ಆರ್. ಆನಂದ, ಮೈಸೂರು





ಕಾವ್ಯ ಭಾಗವತ ಓದಿಸಿಕೊಂಡುಹೋಯಿತು.. ಸಾರ್ ಕೃಷ್ಣನ ಜನನ ಮುಂದಿನ ಕಥೆಗೆ ತೋರಣ..
Nice
ಭಗವಂತನ ಅವತಾರಕ್ಕೆ ಭೂಮಿಕೆ ನಿರ್ಮಿಸಿದ ಸರಳ, ಸುಂದರ ಕಾವ್ಯ ಭಾಗವತ.