ನವಮ ಸ್ಕಂದ – ಅಧ್ಯಾಯ – 5
ಶ್ರೀ ಕೃಷ್ಣ ಕಥೆ – 2
ದ್ವಾಪರ ಯುಗಾಂತ್ಯದಲಿ ದುಷ್ಟ ಕ್ಷತ್ರಿಯರು
ಧನಮದ ಅಧಿಕಾರಮದದಿಂ ಕೊಬ್ಬಿ
ಸಾಧುಜನ ಪೀಡಿತರಾಗಿ ಭೂಮಿ ಬಾಧಕರಾಗಿರೆ
ಅವರನ್ನಡಗಿಸಿ ಸಾಧುಜನಗಳ ಅನುಗ್ರಹಿಸಲೆಂದೇ
ಭೂಮಿಗಿಳಿದು ಕೃಷ್ಣಾವತಾರವನ್ನೆತ್ತಿದ
ಸ್ವಾಮಿ ಶ್ರೀಮನ್ನಾರಾಯಣ
ಈ ಅವತಾರದಿ ಅಣ್ಣ ಬಲರಾಮನೊಡಗೂಡಿ
ನಡೆಸಿದ ಲೀಲಾ ವಿನೋದಗಳು
ಪವಾಡಸದೃಶ ಕಾರ್ಯಗಳು
ಬ್ರಹ್ಮಾದಿ ದೇವತೆಗಳಲ್ಲದೆ
ಸಕಲ ಜೀವಕೋಟಿಗಳಿಗೂ
ಕಲ್ಮಶ ಭೂಯಿಷ್ಟವಾದ
ಇಂದಿನ ಕಲಿಗಾಲದಲ್ಲೂ
ಪಾವನಕರ ಪುಣ್ಯತೀರ್ಥಗಳಂತೆ
ನರಜನ್ಮ ಶುದ್ಧೀಕರಿಪ ಸಾಧನಗಳು
ಕಂಸನ ಕಾರಾಗೃಹದಲಿ ಜನಿಸಿ
ನಂದಗೋಪನ ವೃಂದಾವನದಲಿ ಬೆಳೆದು
ಶಿಶುತನ ಬಾಲ್ಯಾವಸ್ಥೆಯಲೇ
ಪೂತನಿ ಶಟಕಾಸುರರ ಸಂಹರಿಸಿ
ಯೌವನದಿ ಕಂಸ ಚಾರೂಣಾದಿ
ದುರುಳ ದಾನವರ ನಿಗ್ರಹಿಸಿ
ಶ್ರೀ ಲಕ್ಷ್ಮೀ ಅವತಾರಳಾದ ರುಕ್ಮಿಣಿಯ ವರಿಸಿ
ಲೋಕಾನುಗ್ರಹಕ್ಕಾಗಿ ಅರ್ಜುನನ ನಿಮಿತ್ತೀಕರಿಸಿ
ದಿವ್ಯ ಗೀತೋಪದೇಶವ ಮಾಡಿ
ವೇದ ಪ್ರಾಮಿಣ್ಯ ಸ್ಥಾಪಿಸಿದ ಶ್ರೀ ಕೃಷ್ಣ ಕಥೆಯ
ಶ್ರೀ ಕೃಷ್ಣ ಲೀಲೆಯ ಅದರೆಲ್ಲ ವಿಸ್ತಾರದಲಿ ಸ್ಪರಿಪ
ಅಕ್ಷರ ರೂಪದಿ ಎಲ್ಲ ಭಗವದ್ಭಕ್ತರಿಗೆ ತಿಳಿಸುವ
ಪುಣ್ಯಕಾರ್ಯ ನನ್ನದಾಗಲಿ ಎಂಬಾಶಯದದೊಂದಿಗೆ
ಶ್ರೀ ಕೃಷ್ಣ ಕಥೆಯ ತಿಳಿಯೋಣ
ಭಗವದ್ಕೃಪೆಗೆ ಪಾತ್ರರಾಗೋಣ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43769

-ಎಂ. ಆರ್. ಆನಂದ, ಮೈಸೂರು