ಒಮ್ಮೆ ಗಣಿತದ ಸಂಖ್ಯೆಗಳಲ್ಲಿ ಜಗಳವುಂಟಾಯಿತು. ಒಂದಂಕಿಯಲ್ಲಿ 9 ನಾನೇ ದೊಡ್ಡವನೆಂದು ಬೀಗುತ್ತಾ 8 ಅನ್ನು ಹೊಡೆಯಿತು. ಏಕೆ ಹೊಡೆದಿದ್ದು ಎಂದುದಕ್ಕೆ ನಾನು ನಿನಗಿಂತ ದೊಡ್ಡವನು. ಆದ್ದರಿಂದ ನನಗೆ ನಿನ್ನನ್ನು ಹೊಡೆಯಲು ಹಕ್ಕಿದೆ ಎಂದಿತು. ಮರುಕ್ಷಣ 8 ಆಲೋಚಿಸಿತು. ನನಗಿಂತ ಚಿಕ್ಕದಾದ ಸಂಖ್ಯೆಯನ್ನು ನಾನೂ ಹೊಡೆಯಬಹುದು ಎಂದು 7 ಅನ್ನು ಹೊಡೆಯಿತು. ಇವರಿಬ್ಬರ ಮಾತುಗಳನ್ನು ಕೇಳಿಸಿಕೊಂಡಿದ್ದ 7 ಸಂಖ್ಯೆ 6 ಅನ್ನು ಹೊಡೆಯಿತು. ಈ ವರ್ತನೆ ಮುಂದುವರೆಯಿತು. 6 ಸಂಖ್ಯೆ 5 ಅನ್ನು ಹೊಡೆಯಿತು. ಹಾಗೇ 5 ಸಂಖ್ಯೆ 4 ಅನ್ನು ಹೊಡೆಯಿತು. 4 ಸಂಖ್ಯೆ 3 ಅನ್ನು ಹೊಡೆಯಿತು. 3 ಸಂಖ್ಯೆ 2 ಅನ್ನು ಹೊಡೆಯಿತು. 2 ಸಂಖ್ಯೆ 1 ಅನ್ನು ಹೊಡೆಯಿತು. 1 ಸಂಖ್ಯೆ 0 ಅನ್ನು ಹೊಡೆಯಲು ಸಿದ್ಧವಾಗಿತ್ತು. ಆದರೆ ಸ್ವಲ್ಪ ಹೊತ್ತು ಆಲೋಚಿಸಿತು. 1 ಸಂಖ್ಯೆ 0 ಯೊಡನೆ ಸ್ನೇಹ ಮಾಡಿಕೊಂಡು ಅದನ್ನು ತನ್ನ ಮುಂದೆ ದಾಖಲಿಸಿಕೊಂಡು 10 ಆಯಿತು. ಇದರಿಂದ ಅದು ಎಲ್ಲರಿಗಿಂತಲೂ ದೊಡ್ಡ ಸಂಖ್ಯೆಯಾಗಿ ಮಾರ್ಪಟ್ಟಿತು.
ಸ್ನೇಹಿತರೆ, ಒಬ್ಬರನ್ನೊಬ್ಬರು ಸ್ನೇಹದಿಂದ ಬೆರೆತರೆ ವಿಶ್ವಾಸದಿಂದ ದೊಡ್ಡತನವನ್ನು ಗಳಿಸಬಹುದು. ಒಬ್ಬರಿನ್ನೊಬ್ಬರನ್ನು ಹೊಡೆದು ಬಡಿಯುವುದರಿಂದ ಯಾವ ದೊಡ್ಡತನವನ್ನೂ ಗಳಿಸಲು ಅಥವಾ ಉಳಿಸಿಕೊಳ್ಳಲು ಸಾಧ್ಯವಿಲ್ಲ.
ಸಂಗ್ರಹ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು





ಪ್ರಕಟಣೆಗಾಗಿ ಅನಂತ ಧನ್ಯವಾದಗಳು ಸುರಹೊನ್ನೆ ಪತ್ರಿಕೆ ಸಂಪಾದಕರಿಗೆ.
ಒಂದು ಒಳ್ಳೆಯ ಸಂದೇಶದಿಂದ ಕೂಡಿದ ಕಥೆ. ಪೂರಕವಾಗಿ ರುವ ರೇಖಾಚಿತ್ರ ಕಥೆಯ ಸೊಬಗು ಹೆಚ್ಚಿಸಿದೆ.
ತಮ್ಮ ಓದು ಪ್ರತಿ ಕ್ರಿಯೆಗಾಗಿ ಧನ್ಯವಾದಗಳು ಮೇಡಂ
ಉತ್ತಮ ಸಂದೇಶವಿದೆ ಕತೆಯಲ್ಲಿ
ಧನ್ಯವಾದಗಳು ನಯನ ಮೇಡಂ
ಸ್ನೇಹ, ವಿಶ್ವಾಸದಿಂದ ಲಭಿಸುವ ಲಾಭ, ಸ್ಥಾನಗಳನ್ನು ಅಚ್ಚುಕಟ್ಟಾಗಿ ಮನದಟ್ಟು ಮಾಡಿಸುವ ಅರ್ಥವತ್ತಾದ ಕಥೆ, ಪೂರಕ ಚಿತ್ರದಿಂದ ಕಳೆಗಟ್ಟಿದೆ…ನಾಗರತ್ನ ಮೇಡಂ.