ಮುಳ್ಳ ಬೇಲಿಯ ಹೂವು
ಮುಳ್ಳ ಬೇಲಿಯ ಮೇಲೆ
ಬಳ್ಳಿ ಹೂವದು ಹರಡಿ
ಘಮಿಸುತಿದೆ ಪರಿಮಳವ ಒಲವು ಹೆಚ್ಚಿ….
ಅಂತರಂಗದ ತಮವ
ಕಳೆಯಲೆಂದೇ ನಾನು
ಹೊರಟಿಹೆನು ಕತ್ತಲಲಿ ದೀಪ ಹಚ್ಚಿ….
ಘಮವ ಬೀರುವ ಹೂವು
ಉಳಿಯುವುದೇ ಗಿಡದಲ್ಲಿ
ಬಗೆ ಬಗೆಯ ಕಾರಣಕೆ ಬಲಿಯದಾಗಿ
ನನ್ನಿರವು ನನ್ನುಳಿವು
ನನ್ನದಾಗುಳಿಯುವುದೇ?
ಹೋರಾಡುತಿರುವೆ ನಾನಲ್ಲಿ ಏಕಾಂಗಿ…
ಹೂವ ಬಂಧಿಸಬಹುದು
ಬಗೆ ಬಗೆಯ ರೀತಿಯಲಿ
ಗಾಳಿ ಗಂಧದ ಜತೆಯ ಬಿಡಿಸಬಹುದೇ….
ಕುಗ್ಗಿಸಿಯು ಬಗ್ಗಿಸಿಯು
ಜಗ್ಗಲಾರೆನು ನಾನು
ಹಿಗ್ಗಿ ಬೆಳೆಯುವ ಇಚ್ಛೆ ನೂರ್ಮಡಿಸಿದೇ….
–ವಿದ್ಯಾಶ್ರೀ ಅಡೂರ್, ಮುಂಡಾಜೆ
ತುಂಬಾ ಚೆನ್ನಾಗಿದೆ ಕವನ.
ಸೂಪರ್ ಕವನ
ತನ್ನಿರುವಿಕೆಗಾಗಿ ಹೋರಾಟದ ಮೂಲಕ ಬದಕಲಾಷಿಸುವ ಮುಳ್ಳು ಬೇಲಿ ಯ ಹೂವಿನ ಕವನ.ಅರ್ಥಪೂರ್ಣವಾಗಿ ಮೂಡಿ ಬಂದಿದೆ ಅಭಿನಂದನೆಗಳು.
ಚಂದದ ಲಹರಿ. ನಿಮ್ಮ ಕವನಗಳಲ್ಲಿ ಪ್ರೌಢಿಮೆಯಿದೆ.ಅಭಿನಂದನೆಗಳು ಮೇಡಂ
ಗಾಳಿ ಗಂಧದ ಜತೆಯ ಬಿಡಿಸ ಬಹುದೇ! – ಅರ್ಥಪೂರ್ಣ ಚಿಂತನೆ
ಸೊಗಸಾಗಿ ಮೂಡಿ ಬಂದ ಕವನ
ಬೇಲಿ ಹೂವಿನ ಸ್ವಗತ ಬಹಳ ಚೆನ್ನಾಗಿ ಮೂಡಿಬಂದಿದೆ…ತಮ್ಮ ಕವನದಲ್ಲಿ.
ತುಂಬಾ ಚೆನ್ನಾಗಿದೆ ಕವನ..ಕೊನೆಯ ಸಾಲಂತೂ ಅಧ್ಬುತವಾಗಿ,
ಸಾಧನೆ ಮಾಡಲು ಪ್ರೇರೇಪಿಸಿದಂತಿದೆ..
ಸುಂದರ ಅರ್ಥಗರ್ಭಿತ ಕವಿತೆ. ಜೀವನವನ್ನೂಸಹ, ಹೂವಿನಂತೆ ಸೂಕ್ಷ್ಮವಾದರೂ ಸುಗಂಧ ಪಸರಿಸಿ ಸಾರ್ಥಕಗೊಳಿಸಿಕೊಳ್ಳಬಹುದು ಎಂಬ ಅಭಿಲಾಷೆ ಮೆಚ್ಚುಗೆಯಾಯಿತು.
ಮುಳ್ಳ ಬೇಲಿಯ ಹೂವಿನ ಬಗ್ಗೆ ಕವನ ಬೇಲಿ ಇಲ್ಲದೆ ಚೆನ್ನಾಗಿ ಓದಿದೆ. ಚೆನ್ನಾಗಿ ಮೂಡಿ ಬಂದಿದೆ ಸೋದರಿಗೆ ಅಭಿನಂದನೆಗಳು.
ಚೆನ್ನಾಗಿ ಮೂಡಿ ಬಂದಿದೆ ಕವನ .ಅಭಿನಂದನೆಗಳು.