ನನ್ನ ಪ್ರೀತಿಯ ಕವನ
ನಾಲ್ಕು ಗೋಡೆಗಳ ಮಧ್ಯೆಯೂ ಇದೆ
ಜೀವನ!
ಕೊಡಬೇಕೆ ಸಾಕ್ಷಿ?
ಇದೋ ನನ್ನ ಕವನ!
ಉಮೇದಿಗೆ ಬಿದ್ದಂತೆ
ಒಂದೇ ಸಮನೆ ಮನ ಹೊಕ್ಕು
ಪದಗಳ ಹೆಕ್ಕಿ ಹೆಕ್ಕಿ
ಸ್ಪುರಿಸುತ ಸ್ವಗತದಲಿ..
ಮನದ ಭಾವಗಳಿಗೆಲ್ಲ
ಬಣ್ಣ ಹಚ್ಚುತಲಿ….
ಒಳಗೇ ಇದ್ದರೂ
ಪದಗಳ ಪವಾಡ ಸೃಷ್ಟಿಸುತಿಹುದು
ಈ ನನ್ನ ಕವನವೇ…
ಹೌದು,
ಇದು ಹೊರಗಲ್ಲ
ಮನದೊಳಗಣ ನಡೆಯುತಿರುವ ಕದನವೇ!
ಅದ್ಯಾರ ಮೇಲಿನ ಸಿಟ್ಟು ಸೆಡವುಗಳೋ?
ಬಿಟ್ಟುಬಿಡು,ನಿನ್ನಿಂದಾಗದು,
ನಿನಗ್ಯಾಕಿವೆಲ್ಲ? ವೆಂದು
ರೇಖೆಯನಿಟ್ಟ ಜನಗಳ ನೆನಪೇ
ಕುದಿ ಕುದಿದು ಕವನವಾಗಿ
ಹೊರಹೊಮ್ಮುತಿಹುದು..
ಕೊರಳಸೆರೆ ಉಬ್ಬಿ ಹರಿದರಿದು
ಮನವಿಂದು ಹಗುರಾಗುತಿಹುದು…
ನನ್ನ ಅಸ್ಮಿತೆ
ಈ ನನ್ನ ಪ್ರೀತಿಯ ಕವಿತೆ..
ಹಾಳು ಕಟ್ಟಳೆಗೆ ಕೊನೆಯಿಂದು..
ಹೊಸ ಯುಗವೇ ಆರಂಭವಿಂದು..
ಕಾಣುವ ಜೀವಿಗಳಿಗೊಂದೇ ಅಲ್ಲ,
ಹೊರಹೊಂಟರೆ ಕಾಡುವ ಕಾಣದ
ಜೀವಿ ಕರೋನಾಕ್ಕೂ ಹೇಳಬಲ್ಲೆ ನಾನೀಗ,
ನಾಲ್ಕು ಗೋಡೆಗಳ ಮಧ್ಯೆಯೂ ಇದೆ
ಜೀವನ!
ಕೊಡಬೇಕೆ ಸಾಕ್ಷಿ
ಇದೋ ನನ್ನ ಕವನ!
-ಆಶಾ ಹೆಗಡೆ, ಬೆಂಗಳೂರು.
Beautiful
ಧನ್ಯವಾದಗಳು
ಸರಳ ಸುಂದರ ಕವನ ಚೆನ್ನಾಗಿದೆ ಅಭಿನಂದನೆಗಳು
ಧನ್ಯವಾದಗಳು..
ಧನ್ಯವಾದಗಳು
ಕವನದ ಸಾಲುಗಳು ಸಮನಾಗಿರುವಂತೆ ರಚಿಸಿದರೆ ಬಹಳ ಸುಂದರವಾಗಿ ಕಾಣುತ್ತದೆ. ಅದ್ಭುತ ಕವನ
ಧನ್ಯವಾದಗಳು..
ಭಾವಾಭಿವ್ಯಕ್ತಿ ತುಂಬಾ ಚೆನ್ನಾಗಿದೆ.
ಸುಜಾತಾ ರವೀಶ್
ಧನ್ಯವಾದಗಳು
ನಾಲ್ಕು ಗೋಡೆಗಳ ಮಧ್ಯೆಯೂ ಇದೆ ಜೀವನ! – ಆಶಾದಾಯಕ ಚಿಂತನೆ
ಧನ್ಯವಾದಗಳು
ತುಂಬಾ ಚೆನ್ನಾಗಿಮೂಡಿ ಬಂದಿದೆ ಕವನ,ಹೀಗೆ ಮುಂದೆಯೂ ಕವನಗಳು ಬರುತಿರಲಿ
ಖಂಡಿತ …ಧನ್ಯವಾದಗಳು.
ನಾಲ್ಕು ಗೋಡೆಗಳ ಮಧ್ಯೆಯೂ ಜೀವನ ಸ್ಫುರಿಸಬಲ್ಲುದು ಎಂಬ ಆಶಾದಾಯಕ ಭಾವನೆಗಳೊಂದಿಗೆ ಹೊಸೆದ ಸೊಗಸಾದ ಕವನ.
ತುಂಬಾ ಧನ್ಯವಾದಗಳು
ಮನದ ಮಿಡಿತಗಳನ್ನೆಲ್ಲಾ ಹೊಸೆದು ಹೊರಹಾಕಿದಾಗ ಮೂಡಿ ಬರಬಹುದಾದ ಭಾವಪೂರ್ಣ ಪದಪುಂಜಗಳೇ ಕವನವಾದ ಸುಂದರ ಕವನಕ್ಕಾಗಿ ಅಭಿನಂದನೆಗಳು.
ತುಂಬಾ ಧನ್ಯವಾದಗಳು ಮೇಡಂ