ಮರೆಯದಿರಿ
ಮರೆಯದಿರಿ
ಹಣದಿಂದ ಗಳಿಸಲಾಗದ್ದು
ಇಹುದು ನೂರಾರು;
ಹಣದ ಸದ್ದು ಕೇಳಿಸಿ
ಕೋಗಿಲೆಗಳ ಹಾಡಿಸಬಲ್ಲಿರಾ?
ದುಡ್ಡಿನ ಸೂಜಿಯಿಂದ
ಮುರಿದ ಮನಸುಗಳ ಹೊಲಿಯಬಲ್ಲಿರಾ?
ನಿಮ್ಮ ಹಣದಿಂದ ಕೊಳ್ಳಲಾಗದು
ಕೋಗಿಲೆಯ ಹಾಡ
ಹಣದಿಂದ ಸುರಿಸಲಾಗದು
ಮೋಡದಿಂದ ಮಳೆಯ
ನಿಮ್ಮ ಹಣದಿಂದ ಕಟ್ಟಲಾಗದು
ಹೃದಯದಗಳ ನಡುವೆ ಸೇತುವೆಯಾ
ನಮ್ಮ ಹಣದಿಂದ ಪಡೆಯಲಾಗದು
ನಿಸ್ವಾರ್ಥ ನೈಜ ಪ್ರೀತಿಯಾ
ಮರೆಯದಿರಿ
ನಮ್ಮ ಹಿಂದೆ ಹಣವಿರಬೇಕು
ಹಣದ ಹಿಂದೆ ನಾವಿರಬಾರದು
-ವಿದ್ಯಾ ವೆಂಕಟೇಶ, ಮೈಸೂರು
ನಿಜ, ಹಣವೇ ಎಲ್ಲವೂ ಅಲ್ಲ.
ಹೌದು ಹಣದ ಹಿಂದೆ ನಾವು ಹೋಗಬಾರದು ನಿಜ.ಆದರೆ ಹಣವೇ ಎಲ್ಲಾ ಚಿಂತನೆ ಚೆನ್ನಾಗಿದೆ ವಾಸ್ತವ… ಯೋಚಿಸುವುದು ಎಷ್ಟು ಜನ.. ಚೆನ್ನಾಗಿ ಮೂಡಿ ಬಂದಿದೆ ಕವಿತೆ ಅಭಿನಂದನೆಗಳು ಸೋದರಿ ವಿದ್ಯಾ
ಬಹಳ ಅರ್ಥಪೂರ್ಣ ಕವಿತೆ
ವಂದನೆಗಳು ಸರ್
ಕವನದ ಧ್ವನಿ ಮತ್ತು ಆಶಯ ತುಂಬ ಸಮರ್ಥವಾಗಿ ಹೊರಹೊಮ್ಮಿದೆ .
ಸುಜಾತಾ ರವೀಶ್
“ಹಣದಿಂದ ಗಳಿಸಲಾಗದ್ದು ಇಹುದು ನೂರಾರು”!
ಜೀವನದಲ್ಲಿ ಹಣದ ಪ್ರಾಮುಖ್ಯತೆ ಎಷ್ಟೆಂಬುದನ್ನು ಬಹಳ ಚೆನ್ನಾಗಿ ಮನದಟ್ಟು ಮಾಡಿಸಿದೆ ತಮ್ಮ ಸೊಗಸಾದ ಕವನ.
ಹಣವೊಂದಿದ್ದರೆ ಎಲ್ಲವನ್ನೂ ಹೊಂದಬಹುದು ಎಂಬ ಹುಂಬ ಭಾವವಿದ್ದವರಿಗೆ ಉತ್ತರವಾಗಿದೆ ನಿಮ್ಮ ಚಂದದ, ಸುಂದರ ಕವಿತೆ.