“ಮಹಿಳೆ”
ಸಹನೆಯಲ್ಲಿ ಇವಳು ಇಳೆ
ತವರಲ್ಲಾಗಲಿ ಪತಿಯ ಮನೆಯಲ್ಲಾಗಲಿ ಇವಳೆ ಆಧಾರ ಶಿಲೆ
ಇವಳಿದ್ದರೆ ಮನೆಗೊಂದು ಕಳೆ
ಪ್ರತಿ ಯಶಸ್ವಿ ಪುರುಷನ ಹಿಂದಿರುವವಳು ಇವಳೆ
ಎಲ್ಲ ಕ್ಷೇತ್ರದಲ್ಲಿ ಇವಳು ಸಾಧನೆಗೈದಿದ್ದು ಬಹಳೆ
ಪುರುಷಪ್ತರಧಾನ ಸಮಾಜದಲ್ಲೂ ತನ್ನ
ಪರಿಶ್ರಮದಿಂದ ಕಂಡುಕೊಳ್ಳುತ್ತಿದ್ದಾಳೆ ನೆಲೆ
ಪರಿಶ್ರಮದಿಂದ ಕಂಡುಕೊಳ್ಳುತ್ತಿದ್ದಾಳೆ ನೆಲೆ
ಇವಳು ಈಗ ಅಬಲೆಯಲ್ಲ ಸಬಲೆ
ಇವಳೆ ಈ ಶತಮಾನದ ಭಾರತೀಯ ಮಹಿಳೆ
ಭಲೆ ಮಹಿಳೆ ಭಲೆ
ಮಹಿಳಾ ದಿನಾಚರಣೆಯ ಈ ಶುಭದಿನದಂದು ಎಲ್ಲ ಮಹಿಳೆಯರಿಗಾಗಿ ತಟ್ಟೋಣಾ ಒಂದು ಜೋರಾದ ಚಪ್ಪಾಳೆ….
ಸಮಸ್ತ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು…
.
– ಮಾಲತೇಶ ಹುಬ್ಬಳ್ಳಿ
.