ಸೂಪರ್ ಪಾಕ

‘ಕಟ್ ಮಂಡಿಗೆ’

Share Button

Katmandige sweet

ಜೈನಕಾಶಿಯೆಂದು ಪ್ರಸಿದ್ಧವಾದ ಮೂಡುಬಿದಿರೆಯಿಂದ, ನನ್ನ ತಂಗಿ ತಂದ ಸ್ಪೆಷಲ್ ಸ್ವೀಟ್ ಇದು. ಇದರ ಹೆಸರು ‘ಕಟ್ ಮಂಡಿಗೆ’ಯಂತೆ. ಬಿಳಿ ಬಣ್ಣದ ಕರವಸ್ತ್ರವನ್ನು ಚೌಕಾಕಾರದಲ್ಲಿ ಮಡಚಿ ಇಟ್ಟಂತೆ ಕಾಣಿಸುತ್ತಿದ್ದ ಈ ಸಿಹಿ ತಿನಿಸು, ಬಹಳ ತೆಳುವಾದ ಪದರಗಳನ್ನು ಹೊಂದಿತ್ತು. ತುಪ್ಪದ ಪರಿಮಳ ಢಾಳಾಗಿದ್ದು, ಬೂರಾ ಸಕ್ಕರೆಯ ಲೇಪವಿತ್ತು.

ಹಾಗೆಯೇ ತಿಂದರೆ ಸಿಹಿ ಸ್ವಲ್ಪ ‘ಅತಿ’ ಎನ್ನಿಸುವಷ್ಟಿತ್ತು. ಸ್ವಲ್ಪ ಹಾಲು ಸೇರಿಸಿ ತಿಂದರೆ ಸಿಹಿ ಸರಿಯಾಗುತ್ತದೆ. ರುಚಿ ಸುಮಾರಾಗಿ ಚಿರೋಟಿ-ಹಾಲು-ಸಕ್ಕರೆಯಂತೆ.

ಮೂಡುಬಿದಿರೆಯ ಆಸುಪಾಸಿನಲ್ಲಿರುವ ಜೈನ ಸಮುದಾಯದವರಿಗೆ ಶುಭ ಸಂದರ್ಭಗಳಲ್ಲಿ ‘ಕಟ್ ಮಂಡಿಗೆ’ ಸಿಹಿ ಇದ್ದರೆ ಬಹಳ ಶ್ರೇಷ್ಠವಂತೆ. ಅಕ್ಕಿಯನ್ನು ನೀರಲ್ಲಿ ರುಬ್ಬಿ, ತೆಳ್ಳಗೆ ಮಾಡಿ, ಕಾದ ಹೆಂಚಿನಲ್ಲಿ ನಾಜೂಕಿನಿಂದ ಸವರಿದಾಗ , ವೇಫರ್ ನಂತಹ ತೆಳು ಪದರ ಸೃಷ್ಟಿಯಾಗುತ್ತದೆ. ಇದನ್ನು ತೆಗೆದು, ಅದರ ಮೇಲೆ ತುಪ್ಪ-ಪುಡಿ ಮಾಡಿದ ಸಕ್ಕರೆ ಸವರುತ್ತಾರೆ. ಇದರ ಮೇಲೆ ಇನ್ನೊಂದು ಪದರ…ಇನ್ನೊಮ್ಮೆ ತುಪ್ಪ-ಸಕ್ಕರೆ….ಮತ್ತೊಂದು ಪದರ….ಮತ್ತೊಮ್ಮೆ ತುಪ್ಪ-ಸಕ್ಕರೆ….ಹೀಗೆ ಪುನರಾವರ್ತನೆಗೊಂಡಾಗ ‘ಕಟ್ ಮಂಡಿಗೆ’ ಸಿದ್ಧವಾಗುತ್ತದೆ ( ಮಾಹಿತಿ : ಅಂತರ್ಜಾಲ)

 

 – ಹೇಮಮಾಲಾ.ಬಿ

6 Comments on “‘ಕಟ್ ಮಂಡಿಗೆ’

  1. ಮೇಡಮ್ ಇದು ಆಂಧ್ರ ಸ್ಪೆಷಲ್ ಸ್ವೀಟ್, ಪುಟರೇಕು ಅಂತ ಇದರ ಹೆಸರು.

    1. ಇಲ್ಲ ಇದು ನಮ್ಮ ಜೈನ ಕಾಶಿ ಮೂಡಬಿದ್ರೆಯ ಸಿಹಿತಿನಿಸು. ಜೈನರ ಶುಭ ಸಮಾರಂಭಗಳಲ್ಲಿ ಇದನ್ನು ತಯಾರಿಸುತ್ತಾರೆ.

  2. ಮೊನ್ನೆ ತಾನೇ ಮೂಡಬಿದಿರೆಯ ಪಡಿವಾಳ್ ಜೈನ್ ಹೊಟೇಲ್ನಲ್ಲಿ ಖರೀದಿಸಿ ಆಸ್ವಾದಿಸಿದೆವು. ನಿಜವಾಗಿಯೂ ವಿಶಿಷ್ಟ ತಿನಿಸು. ನಮ್ಮ ಮಲೆನಾಡಿನ ತೊಡೆದೀವನ್ನು ಹೋಲುತ್ತದಾದರೂ ಅದಕ್ಕಿಂತ ಶ್ರೀಮಂತ ಹಾಗೂ ಸ್ವಾದಿಷ್ಟ. ಒಂದು ಕರವಸ್ತ್ರದಂತಹ ಹಲವು ಮಡಿಕೆಗಳ ಸಿಹಿಗೆ 135 ರೂ ದರ. ಆದರೂ ಓ ಕೆ !

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *