Category: ಒಡಿಶಾ ಚಾರಣ 2016
ಪ್ರೌಢಶಾಲಾ ದಿನಗಳಲ್ಲಿ ‘ಚರಿತ್ರೆ’ ಪಾಠವನ್ನು ನಾನು ಇಷ್ಟಪಡುತ್ತಿರಲಿಲ್ಲ. ಪ್ರಶ್ನೆಗಳಿಗೆ ಉದ್ದುದ್ದ ಉತ್ತರ ಬರೆಯಬೇಕಾದ ಅನಿವಾರ್ಯತೆ ಜೊತೆಗೆ ಹಲವಾರು ಇಸವಿಗಳನ್ನೂ, ದೇಶ-ವಿದೇಶವನ್ನಾಳಿದ ರಾಜರುಗಳ ಹೆಸರನ್ನೂ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಈ ರಾಜರುಗಳು ತಮ್ಮ ಪಾಡಿಗೆ ನೆಮ್ಮದಿಯಿಂದ ರಾಜ್ಯವಾಳುತ್ತಿದ್ದರೆ, ಚರಿತ್ರೆಯಲ್ಲಿ ವಿವಿಧ ಯುದ್ದಗಳು ಸಂಭವಿಸುತ್ತಿರಲಿಲ್ಲ, ನಮಗೆ ಇಸವಿಯನ್ನು ನೆನಪಿಟ್ಟಿಕೊಳ್ಳಬೇಕಾದ ಕಷ್ಟವೂ ಇರುತ್ತಿರಲಿಲ್ಲ...
ಸಾಮಾನ್ಯವಾಗಿ ಚಾರಣ/ನಡಿಗೆಯ ಸಮಯದಲ್ಲಿ ಸುಸ್ತಾದರೆ/ಬಾಯಾರಿದರೆ ತಿನ್ನುವುದಕ್ಕಿರಲೆಂದು ಒಂದಿಷ್ಟು ಚಾಕೋಲೇಟ್ಸ್ ಅನ್ನು ನನ್ನ ಕೈಚೀಲದಲ್ಲಿ ಇಟ್ಟುಕೊಳ್ಳುವುದು ನನ್ನ ಅಭ್ಯಾಸ. ಡಿಸೆಂಬರ್ 31,2016 ದಂದು ಒಡಿಶಾದ ಲೂನಾಪಾನಿಯ ಹಳ್ಳಿಯನ್ನು ದಾಟಿ, ‘ಚಿಲಿಕಾ ಸರೋವರ’ದ ಕಡೆಗೆ ನಡೆಯುತ್ತಿದ್ದೆವು. ಅಲ್ಲಿ ಕನಿಷ್ಟ 30 ವರ್ಷಗಳ ಹಿಂದಿನ ಅಪ್ಪಟ ಹಳ್ಳಿಯ ಚಿತ್ರಣವಿತ್ತು. ಗಲ್ಲಿಗಳಲ್ಲಿ ಆಟವಾಡುತ್ತಿದ್ದ...
ಚಾರಣದ ಉದ್ದೇಶದಿಂದ ತಿರುಗಾಡುವಾಗ ಅನಿರೀಕ್ಷಿತವಾಗಿ ಲಭಿಸುವ ಅನುಭವಗಳು ಸಾಕಷ್ಟು. 30 ಡಿಸೆಂಬರ್ 2016 ರಂದು, ಒಡಿಶಾದ ‘ಚಿಲಿಕಾ ಸರೋವರ’ದ ಪರಿಸರದಲ್ಲಿ 7 ಕಿ.ಮೀ ದೂರ ನಡೆಯುತ್ತಾ ‘ಮಾಲಿಂಗಪಟ್ಣ’ ಎಂಬ ಪುಟ್ಟ ಊರು ಸೇರಿದ ಮೇಲೆ, ಅಲ್ಲಿ ಚಹಾ ಕೇಳಿ ಪಡೆದ ಕಥೆಯಿದು.. ಮಧ್ಯಾಹ್ನ ಒಂದು ಗಂಟೆಗೆ ಮಾಲಿಂಗಪಟ್ಣ...
ಭಾರತದ ಪೂರ್ವದಲ್ಲಿರುವ ಒಡಿಶಾ ರಾಜ್ಯದ ರಾಜಧಾನಿಯಾದ ಭುವನೇಶ್ವರದಿಂದ 60 ಕಿ.ಮೀ ದೂರದಲ್ಲಿ ಬಂಗಾಳ ಕೊಲ್ಲಿಯ ಸಮುದ್ರ ತೀರದಲ್ಲಿರುವ ಪುಟ್ಟ ನಗರ ‘ಪುರಿ’ . ಇದು ಅತ್ಯಂತ ಪ್ರಾಚೀನ ನಗರಗಳ ಪೈಕಿ ಒಂದು. ಇಲ್ಲಿ ವೈಷ್ಣವರ ಪ್ರಸಿದ್ಧ ಜಗನ್ನಾಥ ಮಂದಿರವಿದೆ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ಚತುರ್ಧಾಮಗಳಲ್ಲಿ ಪುರಿಯೂ ಒಂದು....
ಒಡಿಶಾದ ನೃಸಿಂಗಪಟ್ಟಣ ಎಂಬ ಪುಟ್ಟ ಹಳ್ಳಿಯ ಮಾರ್ಗದುದ್ದಕ್ಕೂ ಕಾಣಿಸಿದ ಹುಲ್ಲಿನ ಮನೆಗಳಿವು. ಸಗಣಿ ಸಾರಿಸಿದ ಗೋಡೆಗಳ ಮೇಲಿನ ಕಲಾವಂತಿಕೆ ಮತ್ತು ಸುತ್ತುಮುತ್ತಲಿನ ಸ್ವಚ್ಛತೆ ಇಷ್ಟವಾಯಿತು. ಕಾಲುದಾರಿ ರಸ್ತೆಯ ಮಧ್ಯದಲ್ಲಿ ಮನೆಯಾಕೆ ಕುಟ್ಟಿದ ಅವಲಕ್ಕಿಯನ್ನು ಜರಡಿಯಲ್ಲಿ ಶೋಧಿಸಿ ಭತ್ತದ ಹೊಟ್ಟನ್ನು ಬೇರ್ಪಡಿಸುತ್ತಿದ್ದಳು. ಇನ್ನೊಂದು ಕಡೆ ಭತ್ತದ ತೆನೆಯನ್ನು ಕಲ್ಲಿಗೆ...
ಡಿಸೆಂಬರ್ 2016 ಕೊನೆಯ ವಾರದಿಂದ ನಿನ್ನೆಯ ವರೆಗೂ ಪೂರ್ವ ಕರಾವಳಿಯ ಒಡಿಶಾದ ಪುರಿ ಮತ್ತು ಸುತ್ತುಮುತ್ತಲಿನ ಜಾಗಗಳಲ್ಲಿ ಸಮುದ್ರ ತೀರದ ಚಾರಣ ( Beach trek) ಮತ್ತು ಪ್ರವಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ್ದೆ. ಈ ಕಾರ್ಯಕ್ರಮವನ್ನು ಒಡಿಶಾದ ‘ಪುರಿ’ಯಲ್ಲಿರುವ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ನವರು ಹಮ್ಮಿಕೊಂಡಿದ್ದರು. ನಮ್ಮ...
ನಿಮ್ಮ ಅನಿಸಿಕೆಗಳು…