ಪೂರ್ವ ಕರಾವಳಿಯಲ್ಲಿ ಹೊಸ ವರುಷಕೆ ಸ್ವಾಗತ
ಡಿಸೆಂಬರ್ 2016 ಕೊನೆಯ ವಾರದಿಂದ ನಿನ್ನೆಯ ವರೆಗೂ ಪೂರ್ವ ಕರಾವಳಿಯ ಒಡಿಶಾದ ಪುರಿ ಮತ್ತು ಸುತ್ತುಮುತ್ತಲಿನ ಜಾಗಗಳಲ್ಲಿ ಸಮುದ್ರ ತೀರದ ಚಾರಣ ( Beach trek) ಮತ್ತು ಪ್ರವಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ್ದೆ. ಈ ಕಾರ್ಯಕ್ರಮವನ್ನು ಒಡಿಶಾದ ‘ಪುರಿ’ಯಲ್ಲಿರುವ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ನವರು ಹಮ್ಮಿಕೊಂಡಿದ್ದರು.
ನಮ್ಮ ಚಾರಣಿಗರ ತಂಡವು, ಒಡಿಶಾದ “ಮೈನಸಾ” ಎಂಬ ಬಂಗಾಳ ಕೊಲ್ಲಿ ಕಡಲ ಕಿನಾರೆಯ ಪುಟ್ಟ ಹಳ್ಳಿಯಲ್ಲಿ, ಒಡಿಶಾ ಸರಕಾರವು ತ್ಸುನಾಮಿ ಸಂತ್ರಸ್ತರಿಗಾಗಿ ಹಿಂದೆ ಕಟ್ಟಿಸಿದ್ದ ಆಶ್ರಯತಾಣದಲ್ಲಿ, ವಿನೂತನವಾಗಿ ಹೊಸವರುಷವನ್ನು ಸ್ವಾಗತಿಸಿತು.
ಜನವಸತಿಯಿಂದ ದೂರವಾದ,ಕನಿಷ್ಟ ಅನುಕೂಲತೆಗಳು ಮಾತ್ರ ಸಿಗುವ ಈ ಜಾಗದಲ್ಲಿ, ಸಮುದ್ರದ ಅಲೆಗಳ ಸಂಗೀತದ ಹಿನ್ನೆಲೆಯಲ್ಲಿ, ಊಟದ ತಟ್ಟೆಯನ್ನು ತಾಳವಾದ್ಯದಂತೆ ಬಡಿಯುತ್ತಾ, ಸೊಗಸಾಗಿ ಹಾಡುತ್ತಿದ್ದ ಸಹಚಾರಣಿಗರ ನಡುವೆ ಹೊಸ ವರುಷವನ್ನು ಸ್ವಾಗತಿಸಿದ ಸಡಗರ ನಮ್ಮದಾಯಿತು. ಕೆಲವು ಉತ್ಸಾಹಿ ಯುವತಿಯರು, ಆಯೋಜಕರು ಕೊಟ್ಟಿದ್ದ ಟೋಪಿ, ಹೊದೆಯುವ ಬಟ್ಟೆ ಮತ್ತು ದೋಣಿಪ್ರಯಾಣದ ಸಂದರ್ಭದಲ್ಲಿ ಧರಿಸಲು ಕೊಟ್ಟಿದ್ದ ಜೀವರಕ್ಷಕ ಸಾಧನವನ್ನೇ ಕಾಸ್ಟೂಮ್ ಮಾಡಿಕೊಂಡು ಧರಿಸಿ, ನರ್ತಿಸಿ , ಹೊಸವರುಷಕ್ಕೆ ಹೊಸಕಳೆ ತಂದರು! ಇವರ ಸಮಯಸ್ಪೂರ್ತಿ ಗೆ ಶರಣು. ಆಯೋಜಕರು ರಸಗುಲ್ಲಾ ಮತ್ತು ಸಮೋಸವನ್ನು ಒದಗಿಸಿದ್ದರು.
ಇದುವರೆಗೆ ಯಾವುದೇ ಚಾರಣದಲ್ಲಿ ಭಾಗವಹಿಸದ ನನ್ನ ತಾಯಿಯೂ ಈ ಬಾರಿ ಉತ್ಸಾಹದಿಂದ ಪಾಲ್ಗೊಂಡುದುದು ಈ ಚಾರಣದ ವಿಶೇಷವಾಗಿತ್ತು.
ಅಲ್ಲಿ ಅಂತರ್ಜಾಲ ಸಂಪರ್ಕ ಸಮರ್ಪಕವಾಗಿ ಸಿಗದ ಕಾರಣ ತಡವಾಗಿ ” ಎಲ್ಲರಿಗೂ ಹೊಸವರುಷದ ಶುಭಾಶಯಗಳು” !
– ಹೇಮಮಾಲಾ.ಬಿ
ಎಲ್ಲರ ಮುಖದಲ್ಲೂ ನಗುವಿದೆ .ನಮಗೆ ನಿಮ್ಮನ್ನು ನೋಡಿ ಹೊಟ್ಟೆಕಿಚ್ಚಾಗುತ್ತಿದೆ
ಅಂದ್ರೆ ಚಾರಣ ನಿಮ್ಮಲ್ಲಿ ಸಾಂಕ್ರಾಮಿಕ `ಹುಚ್ಚು’ , ಭಲೆ!
ಬೀಚ್ ಚಾರಣ ಬಹಳ ಕುಷಿ ಕೊಟ್ಟಂತೆ ಇದೆ