Author: Vijaya Subrahmanya
‘ದಾನ’ ಎಂಬುದು ಜೀವನ ಮೌಲ್ಯಗಳಲ್ಲಿ ಒಂದು. ‘ಇದ್ದಾಗ ದಾನವನು ಮಾಡದವ ಹೊಲೆಯ’ ಎಂದು ಸರ್ವಜ್ಞ ವಚನವಿದೆ. ದಾನಗಳಲ್ಲಿ ಹಲವು ವಿಧ. ಅಶನ,ವಸನ, ವಸತಿ,ಭೂಮಿ,ಧನ, ಕನಕ, ವಿದ್ಯೆ ಹೀಗೆ ಅವರವರ ಶಕ್ತಿ ಭಕ್ತ್ಯಾನುಸಾರ ದಾನ ಮಾಡಬಹುದು. ಆದರೆ ಎಲ್ಲಾ ದಾನಗಳಿಂದಲೂ ಅನ್ನದಾನವೇ ಶ್ರೇಷ್ಠವೂ ಸರಳವೂ ಆಗಿದೆ. ಯಾಕೆಂದರೆ ಹಸಿದು...
ಯಾವುದೇ ಒಂದು ಕೆಲಸವನ್ನು ಗುರಿಯಿಟ್ಟು ಆಸ್ಥೆ ವಹಿಸಿ ಪೂರೈಸಿದಾಗ ಅದನ್ನು ಸಾಧಿಸಿದ ಸಾರ್ಥಕ ಭಾವ ನಮ್ಮದಾಗುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ಅದು ಕೂಡಲೇ ನಾಶವಾದರೆ …ಹೇಗಾಗಬೇಡ?. ನಾಶವಾಗಲು ಕಾರಣರಾದವರ ಮೇಲೆ ಅಸಾಧ್ಯ ಸಿಟ್ಟು ಬರುತ್ತದೆ. ಹಾಗೆಯೇ ನಾವು ಇಷ್ಟಪಟ್ಟು ಒಂದು ವಿದ್ಯೆಯನ್ನು ಗುರುಮುಖೇನ ಕಲಿಯುತ್ತೇವೆ ಎಂದಿಟ್ಟುಕೊಳ್ಳಿ....
ಸಮಾಜದಲ್ಲಿ ಯಾವುದೇ ಯೋಗ್ಯ ಸ್ಥಾನಮಾನ, ಐಶ್ವರ್ಯ, ಸತ್ಕೀರ್ತಿ ದೊರಕಲು ನಾವು ಪಡೆದುಕೊಂಡು ಬಂದಿರಬೇಕು ಎಂದು ಮಾತಿದೆ. ಅರ್ಥಾತ್ ಅದು ಪೂರ್ವಯೋಜಿತ ಕರ್ಮಫಲಗಳೊಂದಿಗೆ ದೈವಾನುಗ್ರಹ ಎಂಬ ನಂಬಿಕೆಯಲ್ಲಿ ಆ ನುಡಿ ಬಂದಿದೆ. ನಾವು ಅನುಭವಿಸುವ ನಿರೀಕ್ಷಿಸುವ ಸಕಲ ಕಾಮನೆಗಳೂ ಅಷ್ಟೇ. ಹಿಂದಿನ ಅರಸರ ಆಳ್ವಿಕೆಯಲ್ಲಿ ರಾಜನಮಂತ್ರಿ, ರಾಜಪುರೋಹಿತ, ರಾಜವೈದ್ಯ...
ಮನುಜನಿಗೆ ಭೂಮಿಯಲ್ಲಿ ಆಗುವ ಮದುವೆಗೆ ; ಗಂಡಿಗೆ ಹೆಣ್ಣು ಯಾರು, ಹೆಣ್ಣಿಗೆ ಗಂಡು ಯಾರು? ಎಂಬುದಾಗಿ ಭೂಮಿಗೆ ಬರುವ ಮೊದಲೇ ನಿರ್ಣಯಿಸಲ್ಪಡುತ್ತದೆಯಂತೆ. ಹಾಗೆಂದು ಪ್ರಾಯ ಬಂದ ಮಕ್ಕಳಿಗೆ ಹಿರಿಯರು ನೋಡಿ ಮಾಡುವುದನ್ನು ಕಾಣುತ್ತೇವೆ. ಮಕ್ಕಳಿಗೆ ಸಂಗಾತಿ ಯಾರೆಂದು ಅನ್ವೇಷಣೆ ಮಾಡಿ ಕುಲಗೋತ್ರ ವಿಚಾರಿಸಿ ಕೂಡಿ ಬಂದರೆ ವಿವಾಹ...
ಅಧಿಕಾರ ಮತ್ತು ಸದವಕಾಶಗಳು ಸಿಕ್ಕಿದಾಗ ಹೆಣ್ಣು ಮಕ್ಕಳನ್ನು ಸತ್ವ ಪರೀಕ್ಷೆಗೊಡ್ಡುವುದು, ಪಾತಿವ್ರತ್ಯ ಪರೀಕ್ಷಿಸುವುದು ಮೊದಲಾದ ದೃಷ್ಟಾಂತಗಳು ನಮ್ಮ ಪುರಾಣದಲ್ಲಿ ಸಾಕಷ್ಟು ಸಿಗುತ್ತದೆ. ಈ ನಿಟ್ಟಿನಲ್ಲಿ ಅಗ್ನಿಪರೀಕ್ಷೆಗೊಳಗಾದವರಲ್ಲಿ ಸೀತೆ ಮೊದಲಿನವಳಾದರೆ; ಅತ್ರಿ ಮುನಿಯ ಪತ್ನಿ ಅನಸೂಯಾ, ಹರಿಶ್ಚಂದ್ರನ ಹೆಂಡತಿ ಚಂದ್ರಮತಿ ಮೊದಲಾದವರು ನೆನಪಿಗೆ ಬರುತ್ತಾರೆ. ಕೆಲವೊಮ್ಮೆ ಹೀಗೆ ಪರೀಕ್ಷೆ...
ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿಯಬೇಕು . ಹಾಗೆಯೇ ವಿದ್ಯಾರ್ಜನೆ ಮಾಡಿದ ಮೇಲೆ ಗುರುದಕ್ಷಿಣೆಯನ್ನೂ ಕೊಡಬೇಕು. ಗುರುವಿಲ್ಲದೆ ಅಥವಾ ಗುರುದಕ್ಷಿಣೆ ಇಲ್ಲದೆ ಕಲಿತ ವಿದ್ಯೆ ಸಿದ್ಧಿಸಲಾರದು. ಅಥವಾ ಪ್ರಯೋಜನಕ್ಕೆ ಬಾರದು. ಇದು ಸನಾತನದಿಂದಲೇ ಬಂದ ಅನುಭವ. ಇಂತಹ ಗುರುದಕ್ಷಿಣೆಯನ್ನು ಯಾವ ರೂಪದಿಂದಲೂ ಕೊಡುತ್ತಿದ್ದರು. ಧನ, ಕನಕ, ಭೂಮಿ, ವಸ್ತ್ರ...
ಮಹಾ ಮಹಾ ಋಷಿಮುನಿಗಳು ನಮ್ಮ ಪುರಾಣ ಲೋಕದಲ್ಲಿ ಬೆಳಗಿದ ರತ್ನಗಳು.ಅವರು ಯಾವುದೋ ಮಹತ್ವದ ಗುರಿಯಿಟ್ಟುಕೊಂಡು ತಪಸ್ಸು ಮಾಡಬಲ್ಲರು.ಆದರೆ ಪರೀಕ್ಷೆಗೆ ಒಳಪಡುವವರೋ ನಮ್ಮ ನಿಮ್ಮಂತವರಲ್ಲ!.ದೇವಾದಿ ದೇವತೆಗಳು!. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು!. ಇಷ್ಟೊಂದು ಶಕ್ತಿ ಪರೀಕ್ಷೆಗೆ ಒಡ್ಡುವ ಶಕ್ತಿ ಇವರಿಗಿದೆಯೇ ಎಂದು ಮೂಗಿನ ಮೇಲೆಬೆರಳಿಡುವಂತಾಗುತ್ತದೆ!. ನಂಬಲಸಾಧ್ಯವೆನಿಸುತ್ತದೆ. ಆದರೆ ಅದು...
ನಮ್ಮ ಪೂರ್ವಿಕ ಚರಿತ್ರೆಯನ್ನು ನಾವೊಮ್ಮೆ ಅವಲೋಕನ ಮಾಡಬೇಕು. ನಮ್ಮ ಹಿರಿಯರೆಲ್ಲ ಹೇಗಿದ್ದರು? ಯಾರು ಪರೋಪಕಾರ ಮಾಡಿದರು! ಸಮಾಜ ಮುಖಿಯಾದ ಕೆಲಸ ಯಾರಿಂದ ಮಾಡಲ್ಪಟ್ಟಿತು? ಯಾರಿಂದ ಕೆಟ್ಟ ಕೆಲಸಗಳಾಗಿ ಹೋಯಿತು? ಹೇಗೆ ಅದರ ದುಷ್ಪರಿಣಾಮಗಳೇನು? ಎಂದೆಲ್ಲ ನಾವು ತಿಳಿಯಬೇಕು. ಹಿರಿಯರ ಜೀವನದಲ್ಲೊಮ್ಮೆ ಕಣ್ಣಾಡಿಸಿದಾಗ ನಮಗೆ ಒಳ್ಳೆಯದು ಯಾವುದು? ಕೆಟ್ಟದು...
ಸಂಯಮ ಶೀಲತೆಯನ್ನು ಅಷ್ಟಾವಕ್ರನ ಕತೆಯಿಂದ ಕಲಿಯಬೇಕು. ಅಷ್ಟಾವಕ್ರನ ಕತೆ ಹೇಗೆ?. ಆತನು ಎಲ್ಲಿ ಸಂಯಮಶೀಲತೆಯನ್ನು ಕಾಪಾಡಿಕೊಂಡ ಎಂಬುದನ್ನು ನೋಡೋಣ. ‘ಕಹೋಳ’ ಋಷಿ ಹಾಗೂ ಸುಜಾತೆಯರ ಮಗ ಅಷ್ಟಾವಕ್ರ.ಈತನು ಅಷ್ಟಾವಕ್ರನಾಗಿ ಜನಿಸುವುದಕ್ಕೂ ಒಂದು ಕಾರಣವಿದೆ.ಒಮ್ಮೆ ಕಹೋಳ ಮುನಿಯು ವೇದಾಧ್ಯಯನ ಮಾಡುತ್ತಿದ್ದಾಗ ಆತನ ಪತ್ನಿ ಸುಜಾತೆಯು ಬಳಿಯಲ್ಲಿ ಕುಳಿತು ಕೇಳುತ್ತಿದ್ದಳು.ಆಗ...
ಒಬ್ಬ ತಂದೆ-ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಎಲ್ಲರೂ ಒಂದೇ ತೆರನಾಗಿರುವುದಿಲ್ಲ. ಒಬ್ಬ ಧಾರಾಳಿಯಿರಬಹುದು. ಮತ್ತೊಬ್ಬ ಪಿಟ್ಟಾಸಿಯಿರಬಹುದು.ಇನ್ನೊಬ್ಬ ಸ್ವಾರ್ಥಿಯಿರಬಹುದು.ಮಗದೊಬ್ಬ ನಿಸ್ವಾರ್ಥಿಯಿರಬಹುದು. ಹೀಗೆ ವಿಭಿನ್ನ ಗುಣದವರು ಪರಸ್ಪರ ಕಚ್ಚಾಡುವವರೂ ಇರಬಹುದು. ಹಾಗೆಯೇ ಕೆಲವರು ತಂದೆ-ತಾಯಿಯರ ಇಷ್ಟದಂತೆ ವರ್ತಿಸುತ್ತಾ ಅವರಿಗೆ ಸಂತೋಷವನ್ನುಂಟು ಮಾಡಿದರೆ ಇನ್ನು ಕೆಲವರು ಅವರಿಗೆ ವಿರೋಧವನ್ನೆಸಗುತ್ತಾ ಹೆತ್ತವರಿಗೆ ವೃದ್ಧಾಪ್ಯದಲ್ಲಿ...
ನಿಮ್ಮ ಅನಿಸಿಕೆಗಳು…