Author: Surekha Bhat Bheemaguli, kssurekha96@gmail.com
“ಚಿಮಣಿ” ಎಂದಾಗ ಬಾಲ್ಯದ ನೆನಪುಗಳು ಸಾಲುಗಟ್ಟಿ ನಿಲ್ಲುತ್ತವೆ. ಚಿಮಣಿದೀಪಕ್ಕೂ ನಮಗೂ ಎಲ್ಲಿಲ್ಲದ ನಂಟು. ಮಳೆಗಾಲದಲ್ಲಿ ಕರೆಂಟು ಇದ್ದರೇ ವಿಶೇಷ ! ಜೋರು ಗುಡುಗು-ಸಿಡಿಲು- ಮಳೆಯಾಯಿತೆಂದರೆ ಇಲಾಖೆಯವರೆ ಸಂಪರ್ಕ ತೆಗೆದುಬಿಡುತ್ತಾರೆ … ಮತ್ತೆ ಅದು ನಮ್ಮ ಒಳ್ಳೆಯದಕ್ಕೆ… ಎಂಬ ನಂಬಿಕೆಯೊಂದು ನಮ್ಮಲ್ಲಿತ್ತು…. ಹಾಗೇ ಮಲೆನಾಡಿನ ಮಳೆಗಾಲದ ರಾತ್ರಿಗಳಿಗೆ ನಾವೆಂದೂ...
ಕಮ್ಮಕ್ಕಿ ಮನೆಯಲ್ಲಿ ಹಲಸಿನ ಹಣ್ಣಿಗಿದ್ದಷ್ಟು ಪ್ರಾಶಸ್ತ್ಯ ಹಲಸಿನ ಇತರ ಪದಾರ್ಥಗಳಿಗಿರಲಿಲ್ಲ. ಹಲಸಿನ ಕಾಯಿ ಎಳೆಯದಿರುವಾಗ ಸಮಾರಂಭಗಳಲ್ಲಿ “ಗುಜ್ಜೆ ಪಲ್ಯ” ಇಷ್ಟಪಟ್ಟು ತಿನ್ನುತ್ತಿದ್ದ ನೆನಪು. ಈಗಲೂ ಇಷ್ಟವೇ… ಅದನ್ನು ಕೊಚ್ಚುವುದು ತ್ರಾಸದಾಯಕವಾದ ಕೆಲಸವಾದ್ದರಿಂದ ನಿತ್ಯ ಅಡುಗೆಯಲ್ಲಿ ಗುಜ್ಜೆ ಪಲ್ಯ ಮಾಡುತ್ತಿದ್ದ ನೆನಪಿಲ್ಲ. ಆಗಾಗ ಹಲಸಿನ ಕಾಯಿ ಹುಳಿ...
ಸೋಮಾರಿ ಭಾನುವಾರದ ಪ್ರಯುಕ್ತ ಮಕ್ಕಳು ಯಥಾನುಶಕ್ತಿ ನಿದ್ದೆ ಮಾಡಿ ಎದ್ದಾಗಲೇ ಬೆಳಗಿನ 9 ದಾಟಿತ್ತು. ತಿಂಡಿ ಮಾಡುವಾಗ ಮಕ್ಕಳಿಗಷ್ಟೇ ಅಲ್ಲ – ನಮಗೂ ಕಳೆದ ವಾರದ ಹೊಗೆನೆಕಲ್ ನ ಕಿರುಪ್ರವಾಸದ ನೆನಪು ! ಇಂದು “ಮೇಕೆದಾಟಿಗೆ ಹೋಗೋಣ” ಎಂಬ ಪ್ರಸ್ತಾಪ ಮಕ್ಕಳ ಕಡೆಯಿಂದ. 31 ಮೇ...
ಮತ್ತೆ ನನ್ನ ಬಾಲ್ಯದ ನೆನಪುಗಳು ಜಾತ್ರೆ ತೇರಿನಂತೆ ಮೆರವಣಿಗೆ ಹೊರಡುತ್ತಾ ಇದ್ದಾವೆ. ನನಗೆ ಆಗ 7 – 8 ವರ್ಷ ಇದ್ದಿರಬೇಕು. ಮನೆಯಲ್ಲಿ ಒಂದು ಮುಂಗುಸಿ ಸಾಕಿದ್ದೆವು. ಗುಡ್ಡದಲ್ಲಿ ಎಮ್ಮೆ ಮೇಯಿಸುವುದಕ್ಕೆ ಹೋದಾಗ, ಗಾಯಗೊಂಡಿದ್ದ ಮುಂಗುಸಿ ಮರಿಯೊಂದು ಪೊದೆಯಲ್ಲಿ ನರಳುತ್ತಾ ಮಲಗಿತ್ತು. ಕರುಣೆ ಉಕ್ಕಿ- ಅದನ್ನು...
ಇದ್ದಕ್ಕಿದ್ದಂತೆ ತೂಕ ಇಳಿಸಬೇಕೆನ್ನಿಸಿತು. ಮನಸ್ಸಿನಲ್ಲಿ ಸ್ವಿಮ್ಮಿಂಗ್ ಸೇರುವ ಯೋಚನೆ ! ಒಂದು ವಿದ್ಯೆ ಕಲಿತ ಹಾಗೂ ಆಗುತ್ತದೆ. ನೀರಿನಲ್ಲಿ ಆಡುವುದು ಯಾರಿಗೆ ಇಷ್ಟ ಆಗುವುದಿಲ್ಲ ? ಹೇಗಾದ್ರು ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ, ಒಂದು ಶಾಲೆಯ ಸ್ವಿಮ್ಮಿಂಗ್ ಪೂಲ್ ಇದೆ. ನೋಡಿಯೇ ಬಿಡುವದು ಎಂದು ನಿರ್ಧರಿಸಿ...
ಮನಸ್ಸೆಲ್ಲ ಆಲೆಮನೆಯಲ್ಲಿ ಅಲೆಯುತ್ತಿದೆ !….. ಇನ್ನೇನು ಬರೆಯುವುದಕ್ಕೆ ಸಾಧ್ಯ ? ನಾನು ನಾಲ್ಕನೆಯ ತರಗತಿಗೆ ಬರುವವರೆಗೆ ನಮ್ಮ ಮನೆಯಲ್ಲಿ ಕಬ್ಬು ಬೆಳೆಯುತ್ತಿದ್ದೆವು ಮತ್ತು ಆಲೆಮನೆ ನಡೆಯುತ್ತಿತ್ತು…. ಮತ್ತೆ ? …. ನರಿಗಳ ಕಾಟ ಅತಿಯಾಯಿತೆಂದೋ ಏನೋ ಕಬ್ಬು ಬೆಳೆಯುವುದನ್ನು ನಿಲ್ಲಿಸಿಬಿಟ್ಟರು ! ಬೆಳೆಯುತ್ತಿದ್ದ ಕಬ್ಬಿನಲ್ಲಿ ನರಿಪಾಲು-ಹಂದಿಪಾಲು-ಮೊಲದ...
ಐದು ವರ್ಷ ಹಿಂದಿನ ಮಾತು. ದೊಡ್ಡ ಮಗ ಆರನೇ ಕ್ಲಾಸ್- ಚಿಕ್ಕ ಮಗ ಒಂದನೇ ಕ್ಲಾಸ್. ಮಕ್ಕಳ ಶಾಲೆ ಬಿಡುವ ಹೊತ್ತಿಗೆ ನಾನು ಶಾಲೆ ಹತ್ತಿರ ಹೋಗಿ, ಅಲ್ಲಿದ್ದ ಶಾಲೆಯ ಈಜುಕೊಳದಲ್ಲಿ ಮೂವರೂ ಈಜಿ ಬರುವ ಕ್ರಮ ಮಾಡಿಕೊಂಡಿದ್ದೆವು. ಅಂದು ಈಜು ಮುಗಿಸಿ ಹೊರಡುವ ಸಮಯದಲ್ಲಿ...
ಓನರ್ ಮನೆಯಲ್ಲಿ ನಾಯಿ ತರುವ ತೀರ್ಮಾನ ಆದಾಗ ನನಗೆ ಭಯಂಕರ ಕಿರಿಕಿರಿ ಆಗಿದ್ದು ಸತ್ಯ. ನನಗೋ ಪ್ರಾಣಿಗಳು ಹೇಳಿದರೆ ಅಲರ್ಜಿ. (6 ನೇ ಕ್ಲಾಸಿನಲ್ಲಿದ್ದಾಗ ನಾಯಿ ಕಚ್ಚಿ- ಹೊಕ್ಕಳ ಸುತ್ತ 7 ಇಂಜಕ್ಷನ್ ಚುಚ್ಚಿಸಿಕೊಂಡ ಮೇಲೆ – ನಾಯಿ ಕಂಡರೆ ಆಗೋಲ್ಲ). ವಿಧಿ ಇಲ್ಲದೆ ಮನುಷ್ಯ ಪ್ರಾಣಿಗಳ...
ಈ “ಮ-ಮಾ” ಭೂತ ನನ್ನ ಜೀವನದಲ್ಲಿ ಎಷ್ಟು (ಅ)ಸಹಕಾರಿ ಆಗಿದೆ ಅಂತ “ಮತ್ತೆ” ಹೇಳ್ತೀನಿ: ಶುರು ಶುರುವಿಗೆ ಬರೀ ಕೆಲಸದ ವಿಷಯದಲ್ಲಿ ಇದ್ದ “ಮ- ಮಾ” ಭೂತದ ಕಾಟ ಮತ್ತೆ ಊಟದ ವಿಷಯದಲ್ಲು ಶುರುವಾಯ್ತು. ಬರ್ತಾ ಬರ್ತಾ ರಾತ್ರಿ ಮಲಗುವ ವಿಷಯದಲ್ಲೂ, ನಿದ್ದೆ ಮಾಡುವ ವಿಷಯದಲ್ಲೂ “ಮ-ಮಾ”...
ನನಗೆ “ತಲೆ ಕೊರೆಯೋದು” ಹೇಳಿದರೆ ಭಯಂಕರ ಇಷ್ಟ ! ನನ್ನ ಈ “ಇಷ್ಟ” ಸಾಕಷ್ಟು ಜನಕ್ಕೆ “ಸಂಕಷ್ಟ” ಅಂತ ನನಗೂ ಗೊತ್ತು. ಆದ್ರೆ ಯಾರಿಗೋ ಕಷ್ಟ ಆಗತ್ತೆ ಹೇಳಿ ನನ್ನ ಇಷ್ಟನ ಬಿಡೋದಕ್ಕೆ ಆಗುತ್ತಾ ? ಚಿಕ್ಕವಳಿರುವಾಗ ಅಮ್ಮನ ತಲೆ ಕೊರೆದುಕೊಂಡಿದ್ದೆ. ಪಾಪದ ಅಮ್ಮ ನನ್ನ ಪ್ರಶ್ನೆಗಳಿಗೆಲ್ಲ...
ನಿಮ್ಮ ಅನಿಸಿಕೆಗಳು…