Author: Dr.Gayathri Devi Sajjan
ಯೋಗಶಾಸ್ತ್ರವು ವಿಶ್ವಕ್ಕೆ ಭಾರತವು ನೀಡಿರುವ ಒಂದು ಅಮೂಲ್ಯವಾದ ಪ್ರಾಚೀನ ಕೊಡುಗೆ. ಮಾನವನ ಸರ್ವತೋಮುಖ ಬೆಳವಣಿಗೆಗೆ, ಅಂದರೆ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಬಾರತವು ನೀಡಿರುವ ಮಹಾವಿದ್ಯೆ.. ಯೋಗಶಾಸ್ತ್ರವು ಭಾರತದ ಪುರಾತನವಾದ ಆಧ್ಯಾತ್ಮಿಕ ವಿಜ್ಞಾನ. ಯೋಗವು ಕೇವಲ ಒಂದು ದೈಹಿಕ ವ್ಯಾಯಾಮವಾಗಿರದೆ, ಉತ್ತಮ ಜೀವನ...
‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’, ಅಕ್ಕಾ, ಈ ನುಡಿಗಟ್ಟನ್ನು ಕೇಳದವರಾರು? ಆದರೆ ಸಂಪ್ರದಾಯಗಳ ಸಂಕೋಲೆಗಳಲ್ಲಿ ಹೆಣ್ಣನ್ನು ಬಂಧಿಸಿರುವ ಸಮಾಜ, ಅವಳನ್ನು ಪ್ರಗತಿ ಪಥದತ್ತ ಸಾಗಲು ಬಿಡುವುದೇ? ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತ ಹೆಣ್ಣು, ತನ್ನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಹರಸಾಹಸ ಪಡಬೇಕಾದಿತು ಅಲ್ಲವೇ? ಉನ್ನತ ಪದವಿ ಪಡೆದ...
-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು… ಮನಸ್ಸು ಇಂದ್ರಿಯಗಳ ಒಡೆಯಪ್ರಾಣವು ಮನಸ್ಸಿನ ಒಡೆಯಲಯವು ಪ್ರಾಣದ ಒಡೆಯನಾದವು ಲಯದ ಒಡೆಯಈ ನಾದವೇ ಮೋಕ್ಷ ಸಾಧನೆಯ ಪಥ ಧ್ಯಾನಲಿಂಗದ ನಾದಾರಾಧನೆಯ ಸಮಯ. ಸಾಧಕರು ಭಕ್ತಿಭಾವದಿಂದ ದೇಗುಲವನ್ನು ಪ್ರವೇಶಿಸುತ್ತಿರುವರು. ದೇಗುಲದ ಶಿಖರ ಅಂಡಾಕಾರದ ಗುಮ್ಮಟದ ಆಕಾರದಲ್ಲಿದ್ದು, ಸುಮಾರು 72′ x 4′ ಸುತ್ತಳತೆ...
-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…ಅತ್ಯಂತ ರಮಣೀಯವಾದ ವೆಲ್ಲಿಯಂಗಿರಿ ಪರ್ವತ ಸಾಲಿನ ತಪ್ಪಲಿನಲ್ಲಿ ಸುಮಾರು ನೂರೈವತ್ತು ಎಕರೆ ಪ್ರದೇಶದಲ್ಲಿ ನೆಲೆಸಿತ್ತು ಈಶ ಯೋಗ ಕೇಂದ್ರ. ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಝುಳು ಝುಳು ಹರಿಯುವ ನದಿಗಳು, ಕೋಡುಗಲ್ಲುಗಳ ಮೇಲಿನಿಂದ ಧುಮ್ಮಿಕ್ಕುವ ಜಲಪಾತಗಳು ಯಾತ್ರಿಗಳ ಮನ ಸೆಳೆಯುವುವು. ಈಶ ಕೇಂದ್ರದ...
-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…ಮಾರನೆಯ ದಿನ ಮುಂಜಾನೆ ಐದು ಗಂಟೆಗೇ ಎದ್ದು, ಸ್ನಾನಮಾಡಿ, ಗುರುಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿದ್ಧರಾದೆವು. ವಿಶಾಲವಾದ ಸಾಧನ ಹಾಲಿನಲ್ಲಿ, ಸಾಧಕರ ದಂಡೇ ನೆರೆದಿತ್ತು. ಎಲ್ಲರೂ ಪದ್ಮಾಸನದಲ್ಲಿ ಕುಳಿತು ಓಂಕಾರವನ್ನು ಪಠಿಸುತ್ತಿದ್ದರು. ಐದೂವರೆಗೆ ಸರಿಯಾಗಿ ಗುರುಸ್ತುತಿ ಆರಂಭವಾಯಿತು. ನಾವು, ಅವರೊಂದಿಗೆ ಕುಳಿತು ಮಂತ್ರಗಳನ್ನು ಪಠಿಸತೊಡಗಿದೆವು....
ಸಂಜೆಯಾಗಿತ್ತು. ವಿಶಾಲವಾದ ಬಯಲು. ವೆಲ್ಲಂಗಿರಿ ಬೆಟ್ಟದ ತಪ್ಪಲಿನಲ್ಲಿ, ಮುಗಿಲೆತ್ತರಕ್ಕೆ ನಿಂತ ಭವ್ಯವಾದ ಮನೋಹರವಾದ ಆದಿಯೋಗಿ ಶಿವನ ವಿಗ್ರಹ. ನಕ್ಷತ್ರದಂತೆ ಹೊಳೆಯುತ್ತಿದ್ದ ಕಂಗಳು, ಜ್ಯೋತಿಯಂತೆ ಬೆಳಗುತ್ತಿದ್ದ ಹಣೆಗಣ್ಣು, ಅಲೆಅಲೆಯಾಗಿ ಬೆನ್ನಿನ ತುಂಬಾ ಹರಡಿದ್ದ ಜಟೆಗಳು, ಮುಡಿಯಲ್ಲಿ ಶೋಭಿಸುತ್ತಿದ್ದ ಅರ್ಧ ಚಂದ್ರ, ಅರೆ ನಿಮೀಲಿತ ನೇತ್ರಗಳು, ತುಟಿಗಳಲ್ಲಿ ಮಿನುಗುತ್ತಿದ್ದ ಮಂದಹಾಸ,...
ಹದಿನಾರು ವರ್ಷದ ಮೊಮ್ಮಗಳು, ದಿಶಾ, ನನ್ನ ಮುಂದೆ ಬಾಬ್ಬಿಯ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಕಣ್ಣೀರು ಹಾಕುತ್ತಿದ್ದಳು. ಸ್ಕಾಟ್‌ಲ್ಯಾಂಡಿನಲ್ಲಿ ನೆಲೆಸಿದ್ದ ಮಗನ ಕುಟುಂಬದ ಜೊತೆ, ಅಲ್ಲಿನ ರಾಜಧಾನಿಯಾದ ಎಡಿನ್‌ಬರೋಗೆ ಭೇಟಿಯಿತ್ತಾಗ ನಡೆದ ಘಟನೆಯಿದು. ದಿಶಾ -ಅಜ್ಜಿ, ಎಡಿನ್‌ಬರೋನಲ್ಲಿ ನೀನು ಮೊದಲಿಗೆ ನೋಡಬೇಕಾದ ಸ್ಥಳ ಬಾಬ್ಬಿಯ ಸ್ಮಾರಕ. ಪ್ರಾಣಿಪ್ರಿಯಳಾದ...
ಯೋಗ ತರಗತಿಯಿಂದ ಹಿಂತಿರುಗಿ ಬಂದವಳು, ಚಹಾ ತಯಾರಿಸಿ, ಒಂದು ಕೈಲಿ ಅಂದಿನ ಪೇಪರ್ ಹಿಡಿದು, ಮತ್ತೊಂದು ಕೈಲಿ ಚಹಾ ಕಪ್ಪನ್ನು ಹಿಡಿದು ನಿಧಾನವಾಗಿ ಚಹಾ ಗುಟುಕರಿಸುತ್ತಾ ಇದ್ದೆ. ಏಕೋ ಏನೋ, ಕೈಲಿದ್ದ ಬಿಸಿ ಬಿಸಿ ಚಹಾ ಲೋಟ ಥಟ್ಟನೆ ಕೆಳಗೆ ಬಿತ್ತು. ನೆಲದ ಮೇಲೆಲ್ಲಾ ಚೆಲ್ಲಾಡಿದ್ದ ಚಹಾ...
ನಾವು ನ್ಯೂಯಾರ್ಕ್‌ನಿಂದ ವಾಷಿಂಗ್‌ಟನ್‌ಗೆ ಸ್ಥಳೀಯ ಪ್ರವಾಸೀ ಸಂಸ್ಥೆಯೊಂದರ ಬಸ್‌ನಲ್ಲಿ ಎರಡು ದಿನದ ಟೂರ್ ಹೊರಟೆವು. ಜಗತ್ತಿನ ಅತ್ಯಂತ ಪ್ರಭಲ ರಾಷ್ಟ್ರವೆಂದು ಹೆಸರು ಪಡೆದಿರುವ ಅಮೆರಿಕದ ರಾಜಧಾನಿಯನ್ನು ನೋಡುವ ಕುತೂಹಲ ನಮ್ಮಲ್ಲಿ. ದಾರಿಯಲ್ಲಿ ಒಂದೆರಡು ಪ್ರವಾಸಿ ತಾಣಗಳನ್ನು ತೋರಿಸಿದರು. ಅದರಲ್ಲೊಂದು ಜರ್ಮನ್ನರ ಕಾಲೊನಿಯಾಗಿತ್ತು. ಈ ಗ್ರಾಮದ ವಿಶೇಷತೆ ಏನೆಂದರೆ...
ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ. ಪುರಾಣಗಳಲ್ಲಿ ಪ್ರಸ್ತುತ ಪಡಿಸಿರುವ ದಶಾವತಾರಗಳಲ್ಲೊಂದಾದ ವರಾಹಾವತಾರ ಎಲ್ಲರಿಗೂ ಚಿರಪರಿಚಿತವೇ. ಅಸುರರಿಂದ ಭೂದೇವಿಯನ್ನು ರಕ್ಷಿಸಲು ವಿಷ್ಣುವು ವರಾಹವತಾರ ತಾಳಿದನೆಂದು ಐತಿಹ್ಯ. ವರಾಹನ ಸಹಧರ್ಮಿಣಿ ವರಾಹಿ ಎಂಬ ಪೌರಾಣಿಕ...
ನಿಮ್ಮ ಅನಿಸಿಕೆಗಳು…