ಆಸೆ ಆಗಸಕ್ಕೆ
ಕನಸು ನೆಲಕ್ಕೆ
ಪಾದ ಪಾದಾಳಕ್ಕೆ
ನಡುವೆ ತಲೆಕೆಳಗಾಗಿ ಬಿದ್ದು ನಡ ಮುರಿದುಕೊಂಡವರು,
ಬೀಸೋ ಧೂಳಿಗೆ,
ಎಂಜಲ ಉಗುಳಿಗೆ,
ಮೈಮೇಲಿನ ಬಣ್ಣಕ್ಕೆ ರೋಸಿ,
ವೇಷ ಮರೆತು ನೇಪಥ್ಯದೊಳಗೆ ನೂಕಾಟದಲಿ ಮರೆಯಾದರು.
ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರು
ಗುಜರಿ ಕಾವ್ಯದೊಳಗೆ ಬಡವ ಬಲ್ಲಿದ ಬೇಧವೆಲ್ಲಿಯದು,
ಸರ್ಕಾರ ಇಲ್ಲಿಲ್ಲ,
ಸರ್ಕಸ್ಸು ಬೇಕಿಲ್ಲ,
ಆ ಊರು ಈ ಊರು ಯಾರೂ ಕೇಳಲ್ಲ, ಇದ್ದವರೇ ಸ್ಫೂರ್ತಿ ಇದ್ದವರಿಗೆ,
ನಾಳೆಯ ನಾಕ ನಮಗೇಕೆ?
ಇಂದಿನ ದಿನವೇ ಹೊಸ ಹುರುಪು,
ಚಿತ್ತ ಹೋಗಲೇ ಬೇಡ ನೆನ್ನೆಯೆಡೆಗೆ.
ಪತಂಗದೆಜ್ಜೆಗಳ ಮಾತೇಕೆ?
ಮೌನವಾಗಿದ್ದರೂ ರಿಂಗಣವಿದೆ,
ಸೂರ್ಯ ಇರುವವರೆಗೂ ನೆರಳು ಬೆಂಬಿಡದ ಹಾಗೆಯೇ,
ನನ್ನ ಬೆಂಬಿಡದೆ ಸಾಗುತಲೇ ಇದೆ ಗುಜರಿ ಕಾವ್ಯ ಸದ್ದಿಲ್ಲದೆ .
– ನಳಿನ ಡಿ.
ಉತ್ತಮ ಕವಿತೆ..
ಈ ಹೊತ್ತಿಗೆಯಲ್ಲಿ ಎಲ್ಲ ಬರಹಗಳು ಉತ್ತಮವಾಗಿ ಬರುತ್ತಿವೆ..
ಅರ್ಥಪೂರ್ಣ ವಾಗಿದೆ ಕವಿತೆ.ಅಭಿನಂದನೆಗಳು ಮೇಡಂ.
ಚಂದದ ಕವನ
ಚಂದದ ಕವನ.
ಕವಿತೆಯನ್ನು ಒದಿ ಪ್ರತಿಕ್ರಿಯಿಸಿದ ತಮಗೆಲ್ರಿಗೂ ಹೃದಯಪೂರ್ವಕ ಧನ್ಯವಾದಗಳು.
ನಳಿನ ಡಿ