ಅಮ್ಮ
ಬಂಗಾರದಂತ ಅವಳು,
ತನ್ನ ಬತ್ತಳಿಕೆಯ ಬಾಣಗಳೆಲ್ಲಾ,
ಖಾಲಿ ಮಾಡಿ,
ಸೋಗು ಹಾಕಿ ಸುಮ್ಮನೆ,
ಒಮ್ಮೊಮ್ಮೆ ಗುಮ್ಮನೆ,
ಸಾಗಿಸಿಹಳು ಜೀವದಾರಿ,
ಸಂಸಾರದ ಕತ್ತಲೆಯಲಿ
ದೀಪದಾರಿ,
ನೆರಳು ಬೆಳಕಿನಾಟಕೆ
ಮಡಿಲು ತುಂಬಿದ ಮಗಳು,
ಕನಸು ಹೊಡೆದು ಕಣ್ಡೆರೆಯುವುದರೊಳಗೆ,
ಮಗಳು ಮೈನೆರೆದು,
ಮದುವೆಯು ಮುಗಿಯಲು,
ತನ್ನಂತೆ ಬಿರುಸಾಗಿ
ಮತ್ತೊಬ್ಬಳು ದೀಪದಾರಿ,
ಮೊದಲ ದೀಪಾವಳಿಗೆ ಮನೆಗೆ ಬರಲು
ಉತ್ಸವದಲಿ ಊರ ಮುಂದೆ ನೂರಾರು
ದೀಪದಾರಿಯರು,
ನಗುತಾ ಆರತಿಗೆ ಕಣ್ಣರಳಿಸಿಹರು
ಊರ ಕಲ್ಯಾಣಿಯ ಸುತ್ತಾ,
ನಕ್ಷತ್ರಗಳ ಹೊತ್ತ ದೀಪದಾರಿಯರು,
ಬೆನ್ನ ಹಿಂದೆ ಹೋರಾಟದ ಮುಗಿಲು,
ಮೊಗದಿ ಬಿದಿಗೆ ಚಂದ್ರ ನಗಲು,
ಸಾಗುತಿಹುದು ಏಳಿಗೆ,
ಸಾಸಿರ ದೀವಿಗೆಯ ಕಣ್ಣು ಬಾಳಿಗೆ
-ನಳಿನ ಡಿ
ಅರ್ಥಪೂರ್ಣವಾದ ಸಾಲುಗಳು.ಉತ್ತಮ ಕವನ. ಧನ್ಯವಾದಗಳು
ಸುಂದರವಾದ ಸಾಲುಗಳು. ಅಮ್ಮನ ಕುರಿತಾಗಿ ಬರೆದಷ್ಟೂ ಮುಗಿಯದು
ಅಮ್ಮನ ಮಗಳೂ ಅಮ್ಮನಾಗಿ ದೀಪದಾರಿಯಾಗುವ ಪರಿ ಬಹಳ ಸೊಗಸಾಗಿ ಮೂಡಿಬಂದಿದೆ ಈ ಚಂದದ ಕವನದಲ್ಲಿ..
ಮಗಳು ಅಮ್ಮನಾಗುವ ಪರಿ ಸೊಗಸು..ಚೆಂದದ ಕವನ.