Author: Nagarekha Gaonkar, nagarekhagaonkar@gmail.com
ಶತಶತಮಾನಗಳ ತಲೆಬರಹ
ತಪ್ಪುವ ಹಾದಿಗಳ ಗುಂಟ ಅರಿವಿನ ಸೂಡಿ ಸಿಗಬಹುದೇ ಎಂದುಕಾಯುತ್ತಲೇಇದ್ದಾರೆ ಜನ ದಂಧುಗಗಳ ಸಾಲೇ ಸಾಲು ಎದುರಾಗುತ್ತ ಬೇಸತ್ತ ಮನಸ್ಸುಗಳು ಒಂದನ್ನೊಂದು ಹದತಪ್ಪುತ್ತಲೇ ಬದುಕ ಹದಕ್ಕೆ ಕಾಯಿಸಿಕೊಳ್ಳುವ ಕನಸು ನನಸಾಗದ ಹಾದಿಯ ಮೇಲೆ ಸೌಧಕಟ್ಟುತ್ತಿದ್ದಾರೆ ಶತಶತಮಾನಗಳಿಂದ ಜನ ಹಾವಿನ ಹಾದಿಯನ್ನು ಹೂವೆಂದುಕೊಂಡು ನಂಜಿಗೆ ಬಲಿಯಾಗುತ್ತಿದ್ದಾರೆ ಜನ ಮಧ್ಯದಕಡಲಿಗೆ ಮುಗಿಬಿದ್ದು...
ಎಚ್ಚರ ಗೋಪಿ
ಎಚ್ಚರ ಗೋಪಿ ಎಚ್ಚರ ಗೊಲ್ಲ ಗೋಪ ಕದ್ದು ಬರುವ ಮೆಲ್ಲ ಸೆರಗ ಸೆಳೆದು ಬಿಡುವ ಎಚ್ಚರ ಗೋಪಿ ಎಚ್ಚರ ಸದ್ದು ಹರಡದಂತೆ ಹೊರಗೆ ಕಡೆವ ಕೋಲ ಮೆಲ್ಲ ಮಥಿಸು ಬೆಣ್ಣೆ ಬೆರಳು ಮೂಸಿ ಬರುವ ಮುರಳಿಯಾಡಿ ಮರುಳುಮಾಡಿ ನವನೀತ ಮೆದ್ದು ಬಿಡುವ ಗಡಿಗೆಯಂಚು ಬಿಡದೆಕುಡಿವ ಎಚ್ಚರ ಗೋಪಿ...
ಕಾವ್ಯ ಮೋಹಿಗೆ
ನಿದ್ದೆಯಿಂದೇಳು ಗದ್ದುಗೆಯನಾಳು ಗುದ್ದು ಆಲಸಿಗಳ ಬೆನ್ನ ಮೇಲೊಂದು ಎದ್ದು ಮದ್ದಾನೆಗಳ ಹಿಂಡ ಮುನ್ನೆಡಸು ಎತ್ತ ಹೋಗಿವೆ ಇಂದು ಚಿತ್ತ ಬಿಟ್ಟಿಲ್ಲಿ ಬಟ್ಟಬಯಲಿನ ತುಂಬಾ ಚಿಟ್ಟೆ ಹಿಡಿಯುತಲಿಹರೇ ಅಟ್ಟ ಹತ್ತಿರಿ ಎಂದು ಅಲವತ್ತುಕೊಂಡರೂ ಉಟ್ಟ ಪತ್ತಲದಲ್ಲೆ ಬೆಟ್ಟ ಏರುವ ತವಕ ಮನವ ಬಾಧಿಸುತಿಹುದೇ ಬುಟ್ಟಿ ಹಣ್ಣುಗಳೇನು ತಟ್ಟನೇ ದಕ್ಕುವವೇ?...
ಭ್ರಾಮಕ ಬಿಂಬಿ
ಗೋರಿಯಲ್ಲಡಗಿ ಕೂತರೂ ಎಲುಬಿನ ಚೂರುಗಳು ಪೂರ್ತಿ ಮಣ್ಣಾಗಿಲ್ಲ. ನಡುವಯಸ್ಸಿನ ಬಿಳಿಗೂದಲುಗಳು ಮೊಳೆತು ಚಿಗುರುತ್ತಿದ್ದರೂ ಭೂಮಿಯಾಳದ ಒಲ್ಮೆ ಮರಿದುಂಬಿಯೇ… ಜರಿನೂಲು, ರೇಷ್ಮೆಯ ನುಣುಪು ಎಳೆಗಳು, ಹೂ ಪಕಳೆಗಳು ತಿಂಗಳನ ತಂಪು ಬುಟ್ಟಿಯ ಅಲಂಕರಿಸುತ್ತವೆ. ಹೃದ್ಗೋಚರ ದೀರ್ಘಕದಲ್ಲಿ ಪಡಿಮೂಡಿದ ಮಂಜಿಷ್ಠ ಪದೇ ಪದೇ ಸೆಳೆಯುತ್ತದೆ ಕೊರೆಯುತ್ತದೆ, ಬಸವಳಿಸುತ್ತದೆ. ನಯನ ದ್ವಯಗಳ...
ನಿಮ್ಮ ಅನಿಸಿಕೆಗಳು…