ಬೆಳಕು-ಬಳ್ಳಿ

ಬದಲು

Share Button

ನಮ್ಮ ಪಾಪದ ಹಾಗೆ
ಲೋಕದ ಲೆಕ್ಕವೂ
ಅದಲು ಬದಲು
ಆಟಕ್ಕೆ ಕಣವ ಕಟ್ಟುವುದು

ಈಗೀಗ ಮಳೆ ಬರುವುದೆಂದರೆ
ಆನಂದ ಸ್ಪಂದಜೀವ
ಸಂವಾದವಲ್ಲ
ಜೀವ ಜೋಪಾನದ ಜಂಜಾಟ.
ಬರಲಾರದು ಮತ್ತೆ
ಮಳೆಯ ಮುತ್ತಿಗೆ
ತೊಗಲಬಟ್ಟೆಯಲ್ಲೇ
ಹೊರಗೋಡಿ ಬೆನ್ನುಬಾಗಿಸಿ
ನಿಲ್ಲುತ್ತ ಕನಸಿದ ಕಾಲ.

ಎಷ್ಟೋ ಬಾರಿಕಣ್ಣಿಗೆ
ಎಣ್ಣೆ ಬಿಟ್ಟುಕೊಂಡೇ
ಕಾಣದಕಾರದ ಹನಿಗಾಗಿ
ಕಾಯುತ್ತ
ಕಾಲವಾದರೂ ಕರಗುವುದಿಲ್ಲ
ಮಾಯಾವಿ.

ಕೆಲವೊಮ್ಮೆ ಶಿವರಾತ್ರಿಯ
ಜಾಗರಣೆ
ತಲೆ‌ ಎತ್ತರಕ್ಕೂ‌ ಏರಿ‌ ಇಲ್ಲ
ಒಳ ಕೋಣೆಯವರೆಗೂ ನುಗ್ಗಿ,
ಚತುಷ್ಪಥದ ಹೆದ್ದಾರಿಯ ಗುಂಟ
ಐಶಾರಾಮಿ ಕಾರಿನ ಮಾಲೀಕರನ್ನು
ಬಿಡದೇ ಕಾಡುತ್ತದೆ.
ಕೈಯಲ್ಲಿ ಹಿಡಿದುಕೊಂಡೇ ಜೀವಗಳು
ಚಡಪಡಿಸುತ್ತವೆ.

ಹೊತ್ತ ಗೂಡಿಗೆ‌ ಅಂಬುನೆಡುವವನ
ಕಂಡು ಹೆತ್ತವ್ವ ಹೆಮ್ಮಾರಿಯಾದಳೇ?

-ನಾಗರೇಖಾ ಗಾಂವ್ಕರ್ 

7 Comments on “ಬದಲು

  1. ವಾಸ್ತವದ ಚಿತ್ರಣ. ಮಾಡಿದ್ದುಣ್ಣೋ ಮಹಾರಾಯ ಅನ್ನುವ ಹಾಗೆ ನಾವು ಮಾಡಿದ ಕರ್ಮಗಳೇ ಹೀಗೆ ಅತಿವೃಷ್ಟಿಯಾಗಿ ನಮ್ಮನ್ನು ಸುತ್ತುತ್ತಿವೆ . Nice one

    1. ಧನ್ಯವಾದಗಳು.
      ಪ್ರತಿಕ್ರಿಯೆಗೆ.
      Life is sweet.but
      We making it bitter.

  2. ಮಾಯಿ ಮಳೆಯನ್ನೇ ‘ಮಾರಿ’ ಮಾಡಿಕೊಂಡ ಅಭಾಗ್ಯರು ನಾವು… ನಿಮ್ಮ ಕವನ ಮಳೆಯ ಅನಾಹುತಗಳ ಚಿತ್ರಣವಾಗಿದೆ…

  3. ಪ್ರಕೃತಿ ವಿಕೋಪ..ಮಾನವ ನಿರ್ಮಿತ‌..
    ಯೋಚನೆಗೆ ಹಚ್ಚುವ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *