ಗಜ಼ಲ್-2
ಈ ರಾತ್ರಿ ನಾವೆಲ್ಲ ಉಂಡು ಬೆಚ್ಚಗೆ ಮಲಗಲೂ ಬಹುದು
ಯಾರಿಗೆ ಗೊತ್ತು ಬರೀ ಚಡಪಡಿಕೆಯಲ್ಲದು ಕಳೆದುಹೋಗಬಹುದು
ಅಲ್ಲೆಲ್ಲೋ ಗಡಿಯ ಹಿಮದಲ್ಲಿ ಕಾವಲು ನಿಂತ ಯೋಧ
ಈ ರಾತ್ರಿ ಅವನ ಮೇಲೆ ಬೆಂಕಿಯ ಮಳೆ ಸುರಿಯಬಹುದು
ದೇಶಕ್ಕಾಗಿ ಏನೆಲ್ಲ ದೌರ್ಜನ್ಯಗಳ ಸಹಿಸಿದ್ದಾರೆ ‘ವೀರ’ರು
‘ಸಿದ್ಧ’ ಸೂತ್ರಗಳಲ್ಲಿ ಅವರ ಬಗ್ಗೆ ವಿಷವನ್ನೇ ಕಾರಬಹುದು
ಬೆಚ್ಚಗೆ ಕೂತು ಕಣ್ಮುಚ್ಚಿ ತೀರ್ಪು ನೀಡುವುದು ಎಷ್ಟು ಸುಲಭ!
ಯಾರನ್ನು ಕುರಿತೂ ಬಾಯಿಗೆ ಬಂದದ್ದನ್ನು ಬೊಗಳಬಹುದು
ಕಾಲನ ಪರೀಕ್ಷೆಯಲ್ಲಿ ಹಾಲು ಹಾಲೇ ಕೊಚ್ಚೆ ಕೊಚ್ಚೆಯೇ ಗೆಳೆಯ
ಎಚ್ಚರ!ಆಡಿದ್ದೆಲ್ಲ ತಿರುಗು ಬಾಣವಾಗಿ ಎದೆಗೆ ಬಡಿಯಬಹುದು
• ಡಾ. ಗೋವಿಂದ ಹೆಗಡೆ
ಚೆನ್ನಾಗಿದೆ…
ಅಹಾ !ಸೊಗಾಸಾದಬರಹ .
ಬ್ಯೂಟಿಫುಲ್. ಬಹಳ ಅರ್ಥಪೂರ್ಣ ಸಾಲುಗಳು , ನಮ್ಮ ರಕ್ಷಕರನ್ನು ನೆನೆದ ರೀತಿ ಬಹಳ ಇಷ್ಟವಾಯಿತು .
ವೀರ ಯೋಧರ ಕೆಚ್ಚೆದೆಯ ಶೌರ್ಯ ಸಾಹಸಗಳು ಯಾವಾಗಲೂ ಸ್ಫೂರ್ತಿದಾಯಕ..ಚೆಂದದ ಗಝಲ್.