ಗಜ಼ಲ್ : ಅವಕಾಶವೆಲ್ಲಿ ?
ಹೊಳೆಯಾಗಿ ಹರಿಯವುದಿತ್ತು ಅವಕಾಶವೆಲ್ಲಿ
ಕಡಲಾಗಿ ಕೂಡುವುದಿತ್ತು ಅವಕಾಶವೆಲ್ಲಿ
ಹಕ್ಕಿಯ ರೆಕ್ಕೆ ಮನಸು ಎರಡೂ ಇತ್ತಲ್ಲ
ಹಾರಿ ಚುಕ್ಕಿ ಸೇರುವುದಿತ್ತು ಅವಕಾಶವೆಲ್ಲಿ
ಅದೆಷ್ಟು ಬಣ್ಣಗಳು ಕಣ್ಣ ಪರದೆಯ ಮೇಲೆ
ತೊಡೆದು ನಿಜವಾಗುವುದಿತ್ತು ಅವಕಾಶವೆಲ್ಲಿ
ಮಾನಿಟರ್ರಲ್ಲಿ ಅರ್ಥರಹಿತ ಅಂಕಿಗಳ ಸಂತೆ
ಕಿತ್ತೆಸೆದು ನಡೆಯುವುದಿತ್ತು ಅವಕಾಶವೆಲ್ಲಿ
ಬೇಲಿಗಳು ಗೋಡೆಗಳು ಸಖಾ ಎಲ್ಲೆಲ್ಲೂ
ಬಯಲಾಗಿ ಬೆರೆಯುವುದಿತ್ತು ಅವಕಾಶವೆಲ್ಲಿ
-ಡಾ ಗೋವಿಂದ ಹೆಗಡೆ
ನನಸಾಗದ ಕನಸುಗಳೆಲ್ಲ .
ಚೆನ್ನಾಗಿದೆ.
ಅರ್ಥಪೂರ್ಣ ಗಜಲ್.. ಚೆನ್ನಾಗಿದೆ.