ಕವಿತೆ
ಬರೆಯುವ ಮೊದಲು
ಕವಿತೆ
ಮನಸುಖರಾಯ ಮಗು
ಮಿಸುಕುತ್ತ ಒದೆಯುತ್ತ
ಒಡಲ ಜಗ್ಗಿಸಿ ಹಿತನೋವು
ತರುತ್ತ ಹೊತ್ತವಳಿಗೆ
ಅಷ್ಟಷ್ಟೇ ಕಣಗಳು ಕೂಡಿ
ಕೂಡುತ್ತ ತುಂಬುತ್ತ ಭಾರ
ವಾಗುತ್ತ ಮೋಡ
ಮಿಂಚು ಕಣ- ಕ್ಷಣಗಳಿಗೆ
ಕಾದು ತಪಿಸುತ್ತ ಕಾತರಿಸುತ್ತ
ತೆಕ್ಕಾಮುಕ್ಕಿಗೆ
ಮಿಲನ ಫಲಿಸಿ ಮಳೆಯಾಗಿ
ಸುರಿವ ಹದಕ್ಕೆ
ಬರೆದ ಎದೆ ಸುರಿದ ನಂತರದ
ಮನಸು- ಖಾಲಿ ಮುಗಿಲು
ಹಾಗೂ ಸಂತೃಪ್ತ
ಹಗೇವು ಮತ್ತೆ ತೆರೆದು
ಒಡಲು ಕೂಡಲು
ಸಿದ್ಧ-ಸನ್ನದ್ಧ
• ಡಾ.ಗೋವಿಂದ ಹೆಗಡೆ
ಕವಿತೆಯಾಗುವುದೆಂದರೆ ಸುಲಭವಾ ಮತ್ತ?, ಚೆನ್ನಾಗಿ ಕಟ್ಟಿ ಕೊಟ್ಟಿರುವಿರಿ.
ಬಹಳ ಚೆನ್ನಾಗಿದೆ ಕವಿತೆ…
ಸೊಗಸಾಗಿದೆ.
“ಮನದ ಕಡಲಲ್ಲಿ ಬತ್ತದ ಒರತೆ, ಮೊಗೆದಷ್ಟು ತುಂಬೋ ಸಾಲುಗಳು ಮತ್ತೆ ಮತ್ತೆ ,
ಮನಸುಗಳ ಸಿಂಗರಿಸೋ ಈ ಬಣ್ಣದ ಸಂತೆ ,
ಗೆ ನೀವಿಟ್ಟ ಹೆಸರೇ ಕವಿತೆ “.
ಚೆನ್ನಾಗಿದೆ ಸರ್
ಚೆಂದದ ಕವನ
ಕವಿತೆ ಬರೆಯುವ ಕಷ್ಟ…ಚೆನ್ನಾಗಿದೆ ಕವನ.
Super