Author: Shruthi Sharma M, shruthi.sharma.m@gmail.com
ಬೆಂಗಳೂರಿನ ಮಧ್ಯಭಾಗದ ಹಾಗೂ ಸುತ್ತಮುತ್ತಲ ನಿವಾಸಿಗಳಲ್ಲಿ ಮಲ್ಲೇಶ್ವರಂ ನ ಎಂಟನೇ ಕ್ರಾಸ್ ಗೆ ಹೋಗದವರು ವಿರಳ. ತಿಂಡಿ ಪ್ರಿಯರು, ಶಾಪಿಂಗ್ ಪ್ರಿಯರು, ಭಕ್ತರು, ಕಲಾರಾಧಕರು ಎಲ್ಲರಿಗೂ ಮಲ್ಲೇಶ್ವರಂ ಎಂಬ ಸ್ಥಳದ ಜೊತೆ ಅದೇನೋ ಒಂದು ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ. ಹೀಗೆ ಮಲ್ಲೇಶ್ವರಂ ಎಂಟನೇ ಕ್ರಾಸ್ ನಲ್ಲಿ...
ನಾನು ಭೇಟಿ ನೀಡಿದ ಚೆಂದದ ಸ್ಥಳಗಳಲ್ಲೊಂದು ಕೋಲ್ಕತಾದಲ್ಲಿರುವ ಬೇಲೂರು ಮಠ. ಕೋಲ್ಕತಾದಲ್ಲಿನ ಹೆಚ್ಚಿನ ಎಲ್ಲಾ ಪ್ರವಾಸೀ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಕಡೆಯದಾಗಿ ಬೇಲೂರು ಮಠಕ್ಕೆ ಹೋದಾಗ ನಿಜಕ್ಕೂ ಆ ಪ್ರಯಾಣ ಸಾರ್ಥಕವಾದ ಅನುಭವ. ಮಠದ ಗೇಟು ದಾಟಿ ಆವರಣ ಪ್ರವೇಶಿಸುತ್ತಿದ್ದಂತೆ, ಕೋಲ್ಕತಾದ ಧಗೆಯಲ್ಲೂ ತಂಪು ಗಾಳಿ...
ಆ ಮಗು ಈಗ ಎಲ್ ಕೆ ಜಿ. ಬೆಂಗಳೂರಿನ “ಪ್ರತಿಷ್ಟಿತ” ಶಾಲೆಯಲ್ಲಿ ಓದು. ಮೊನ್ನೆ ಅವರಮ್ಮ ತುಂಬ ಖುಷಿಯಿಂದ ಸಂಡಿಗೆಯಂತೆ ಮುಖ ಅರಳಿಸಿಕೊಂಡು ಹೇಳುತ್ತಿದ್ದರು. “ನಮ್ಮಗ ತುಂಬಾ ಜಾಣ! ಥರ್ಟಿಫ಼ೈವ್ ಔಟ್ ಆಫ಼್ ಥರ್ಟಿಫ಼ೈವ್ ತಗೊಂಡಿದಾನೆ ಎಗ್ಸಾಮ್ಸ್ನಲ್ಲಿ, ಟೀಚರ್ ಮೀಟಿಂಗ್ ನಲ್ಲಿ ಹೊಗಳ್ತಾ ಇದ್ರು ಇವ್ನನ್ನ! ಇವ್ರಿಗೆ...
ಮೊನ್ನೆ ಫ಼ೇಸ್ ಬುಕ್ ತೆರೆದಾಗ ಕಾಣಸಿಕ್ಕ ಗೆಳತಿಯೊಬ್ಬಳ ಫೋಟೋಕ್ಕೆ ಲೈಕ್ ಕೊಟ್ಟು ಕಮೆಂಟಿಸಿದೆ. ಮೇಲೆ ಯಾರೋ ಒಬ್ಬಾತ ಹಾಕಿದ್ದ ಕಮೆಂಟೊಂದು ಗಮನ ಸೆಳೆಯಿತು. ಆತ “ಮನೆಯಲ್ಲಿನ ಅನ್ನವನ್ನೆಲ್ಲಾ ನೀನೇ ಖಾಲಿ ಮಾಡುತ್ತೀಯೇನೇ?” ಎಂದು ಅತ್ಯಂತ ಅನಾಗರಿಕವಾಗಿ ಬರೆದಿದ್ದ. ಈತನೂ ನನ್ನ ಪರಿಚಿತನೇ. ಕಾಲೇಜು ಸಮಯದಲ್ಲಿ ಹಾದಿಯಲ್ಲಿ ಸಿಗುವ...
ಅದ್ಯಾವುದೋ ಕೆಲಸ ನಿಮಿತ್ತ ಎರಡು ದಿನಗಳು ಪ್ರವಾಸದಲ್ಲಿದ್ದು ಅಂದು ಬೆಳಗ್ಗೆಯಷ್ಟೇ ಮನೆ ತಲುಪಿದ್ದೆವು. ಮನೆಯಲ್ಲೇ ಇದ್ದೆ. ಮಟ ಮಟ ಮಧ್ಯಾಹ್ನ ಒಂದೂ ಮೂವತ್ತರ ಹೊತ್ತು. ಸೆಖೆಗಾಲ ಬೇರೆ, ಸೂರ್ಯ ನೆತ್ತಿಗೇರಿ ಉಗ್ರ ರೂಪ ತಾಳಿ ಉರಿದು ಬೀಳುತ್ತಿದ್ದ. ಮನೆಯೊಳಗಿದ್ದರೂ ತಡೆಯದ ಆಸರು, ಬಿಸಿಲಿಗೋ ಪ್ರಯಾಣದ ಆಯಸಕ್ಕೋ ಇನ್ನಿಲ್ಲದ...
ಕಾಫಿ ಪ್ರಿಯರ ಮಧ್ಯೆ ಹುಟ್ಟಿ ಬೆಳೆದು ಕಾಫಿ ಪ್ರಿಯರ ಮಧ್ಯೆಯೇ ವಾಸಿಸುತ್ತಿರುವ ನನಗೆ ಒಳ್ಳೆ ಕಾಫಿಯ ಪರಿಮಳ ಬಹಳ ಪ್ರೀತಿಯದು. ಇಲ್ಲಿ “ಒಳ್ಳೆ” ಎಂಬ ಪದಕ್ಕೆ ನನ್ನದೇ ಆದ, ಪದಗಳಲ್ಲಿ ವಿವರಿಸಲಾಗದ ಅರ್ಥ, ವ್ಯಾಖ್ಯಾನಗಳಿವೆ. ಎಲ್ಲರಿಗೂ ಬೆಳಗು ಬೆಳಗೆನಿಸಬೇಕಾದರೆ ಕಾಫಿ ಹೀರಬೇಕಾದಲ್ಲಿ ನನಗೆ ಕಾಫಿ ಅಷ್ಟು ಅಗತ್ಯ...
ಬೆಂಗಳೂರಿನ ಮಲ್ಲೇಶ್ವರಂನ ತಿರುವುಗಳಲ್ಲಿ ನಡೆಯುತ್ತಾ ವಾಪಸು ಮೆಟ್ರೋ ನಿಲ್ದಾಣಕ್ಕೆ ಬಂದಾಗ ಯಾವತ್ತೂ ಸುಸ್ತೆನಿಸಿದ ನೆನಪಿಲ್ಲ. ಲೆಕ್ಕ ಹಾಕಿ ನೋಡಿದರೆ ಎನಿಲ್ಲವೆಂದರೂ ಒಟ್ಟು ಮೂರೂಮುಕ್ಕಾಲು ಕಿಲೋಮೀಟರ್ ಸುತ್ತು ಹೊಡೆದಿದ್ದರೂ ಸುಸ್ತೇ ಆಗಿಲ್ಲವಲ್ಲಾ ಎಂದು ಅಚ್ಚರಿಪಡುತ್ತೇನೆ. ಅಲ್ಲಿನ ಬೀದಿಗಳ ಗಮ್ಮತ್ತು ಸವಿಯುತ್ತಿದ್ದರೆ ಅದು ಆಯಾಸದ ನೆನಪು ಕೂಡಾ ಬರಗೊಡುವುದಿಲ್ಲ. ಹಳೆ...
ತುಂಬಾ ದಿನಗಳಿಂದ ನಮಗೆ ಚಿಕ್ಕಮಗಳೂರಿಗೆ ಹೋಗಬೇಕೆಂಬ ಆಲೋಚನೆ ಇತ್ತು. ಹಾಗೆಯೇ ಜುಲೈ ತಿಂಗಳ ಹವಾಮಾನಕ್ಕೂ ನಮ್ಮ ಲಿಸ್ಟ್ನಲ್ಲಿ ಬಹಳ ದಿನದಿಂದ ಇದ್ದ ಚಿಕ್ಕಮಗಳೂರಿಗೂ ಚೆನ್ನಾಗಿ ತಾಳೆಯಾದಾಗ ಸಿಕ್ಕಾಪಟ್ಟೆ ಖುಶಿ ಆಗಿತ್ತು. ಯೋಚನೆ ಕಾರ್ಯರೂಪಕ್ಕೆ ಬರಲು ಒಂದು ಸೋಮವಾರ ರಜೆ ಹಾಕಿದ್ದೂ ಆಯಿತು. ಶನಿವಾರ ಬೆಳಗ್ಗೆಯೇ ಬೆಂಗಳೂರು ಬಿಟ್ಟ...
ಇವತ್ತು ಸುಖಾಸುಮ್ಮನೆ ಗೂಗಲ್ ಜಾಲಾಡುತ್ತಿದ್ದಾಗ ಕಂಡ ಹಣ್ಣು ಗೊಂಚಲಿನ ಚಿತ್ರವೊಂದು ಹಾಗೇ ಯೋಚನೆಗಳನ್ನು ಹಿಂದಕ್ಕೋಡಿಸಿತು. ಇಂದಿಗೆ ಹೆಚ್ಚೂಕಡಿಮೆ ಹತ್ತು ವರ್ಷಗಳ ಹಿಂದಿನವರೆಗೂ ಸಂಜೆ ಶಾಲೆಯಿಂದ ಬಂದಾಕ್ಷಣ ಅಜ್ಜಿ ಇರುವಲ್ಲಿಗೇ ಹುಡುಕಿಕೊಂಡು ಹೋಗಿ ಹಲ್ಲು ಗಿಂಜುತ್ತಿದ್ದೆ. ಕತ್ತಲು-ಬೆಳಕಿನ ಅಡುಗೆ ಮನೆಯಲ್ಲಿದ್ದರೂ, ಕಣ್ಣು ದೃಷ್ಟಿ ಮಂದವಿದ್ದರೂ ನಾನೇನನ್ನು ತೋರಿಸುತ್ತ್ತಿದ್ದೇನೆಂಬ ಸ್ಪಷ್ಟವಾದ ಅರಿವಿದ್ದ...
ಮಹಾಭಾರತದಲ್ಲಿ ದ್ರೌಪದಿಯನ್ನು ಅತ್ಯಂತ ಸುಂದರಿ ಎಂದು ವರ್ಣಿಸಲಾಗುತ್ತದೆ. ಆಕೆಗೆ “ಕೃಷ್ಣೆ” ಎಂಬ ಹೆಸರೂ ಇತ್ತು. ಕಥೆಯ ಪ್ರಕಾರ ಆಕೆಯ ಮೈಬಣ್ಣ ಕಪ್ಪಾಗಿದ್ದುದಕ್ಕೆ “ಕೃಷ್ಣೆ” ಎಂಬ ಹೆಸರಿತ್ತಂತೆ. ಭಾರತೀಯರಲ್ಲಿ ಸುಂದರಿಯರು ಎಂದು ಅರಿಯಲ್ಪಡುವ ಕೇರಳದ ಹೆಣ್ಣುಮಕ್ಕಳ ಬಣ್ಣವೂ ಸಾಧಾರಣವಾಗಿ ಉತ್ತರದವರಿಗೆ ಹೋಲಿಕೆ ಮಾಡಿದರೆ ಕಪ್ಪು-ನಸುಗಪ್ಪು. ಆದರೆ ಆಫ಼್ರಿಕನ್ನರಿಗೆ ಹೋಲಿಸಿದರೆ...
ನಿಮ್ಮ ಅನಿಸಿಕೆಗಳು…