ನೆನಪುಗಳ ಮಾತು ಮಧುರ…
ನೆನಪುಗಳೇ ಹಾಗೆ ಯಾವಾಗ ಬೇಕೆಂದರಲ್ಲಿ ತನ್ನ ಬುತ್ತಿ ಬಿಚ್ಚಿ ಕೂತುಬಿಡುತ್ತವೆ. ಅದಕ್ಕೆ ಯಾರ ಅಪ್ಪಣೆ ನಿರಾಕರಣೆಗಳ ಹಂಗಿಲ್ಲ. ಅದರಲ್ಲಿ ಕೆಲವು ನೆನಪುಗಳು ಖುಷಿ ಕೊಡುವುದಾದರೆ, ಕೆಲವು ನೋವು-ಹಿಂಸೆಯನ್ನು, ಇನ್ನೂ ಕೆಲವು ನಮ್ಮ ಮನಸ್ಸಿನಾಳದಲ್ಲಿ ಇತ್ತ ಸಂತೋಷದ ನೆನಪು ಆಗದೆ, ದುಃಖದ ನೆನಪು ಆಗದೆ ದ್ವಂದ್ವಾವಸ್ಥೆಯಲ್ಲೇ ಉಳಿದುಬಿಡುತ್ತವೆ. ಆ ನೆನಪುಗಳನ್ನು ಬಿಸಿತುಪ್ಪದಂತೆ ಮರೆಯುವುದು ಕಷ್ಟ ನೆನಸಿಕೊಂಡರಂತು ಇನ್ನು ಕಷ್ಟ. ಇದರಿಂದ ಮನಸ್ಸು ಒಂದು ಹುಚ್ಚು ಮನಸ್ಥಿಗೆ ಜಾರುವುದಂತು ಕಚಿತ. ಕೆಲವು ನೆನಪುಗಳನ್ನು ಯಾರೊಟ್ಟಿಗೂ ಹಂಚಿಕೊಳ್ಳಲಾಗದೆ ಇತ್ತ ಅನುಭವಿಸಲು ಆಗದೆ ಪರದಾಡುವ ಸ್ಥಿತಿ ಯಾವ ಶತ್ರುಗಳಿಗೂ ಬೇಡ.
ಹಾಗೆ ಎಲ್ಲರ ಬದುಕಲ್ಲೂ ಇಂತಹ ನೆನಪು ಇದ್ದೇ ಇರುತ್ತದೆ, ಅವು ನಮ್ಮ ಬದುಕಿನಲ್ಲಿ ಯಾರು ಉತ್ತರಿಸಲಾಗದ ಪ್ರಶ್ನೆಗಳನ್ನು ಗೊಂದಲಗಳನ್ನು ಸೃಷ್ಟಿಸಿರುತ್ತವೆ. ಅದೇ ರೀತಿ ಎಲ್ಲರ ಜೀವನದಲ್ಲೂ ಒಂದು ಹೆಸರಿಡದ ಸಂಭದ ಇರುತ್ತದೆ. ಈ ರೀತಿ ನನ್ನ ಕಾಡಿದ, ಕಾಡುತ್ತಿರುವ ಒಂದು ನೆನಪು ಇಲ್ಲಿದೆ… ನಿಮಗೆ ಉತ್ತರ ಸಿಕ್ಕರೆ ನನಗೆ ತಿಳಿಸಿ. ನನಗೆ ಮೊದಲಿನಿಂದಲು ಭಾವಗೀತೆಗಳೆಂದರೆ ಪಂಚಪ್ರಾಣ, ಪ್ರತಿ ಹೂವಿನ ಸಂಭಾಷಣೆ ಕೇಳುವುದು ಚಿಟ್ಟೆಗೆ ಮಾತ್ರ, ಪ್ರತಿ ಮೀನಿನ ಚೆಲ್ಲಾಟ ಕಾಣುವುದು ಮುಳುಗುವ ಅಲೆಗೆ ಮಾತ್ರ ಎನ್ನುವ ಹಾಗೆ ಪ್ರತಿ ಭಾವಗೀತೆಯ ಭಾವ ಅರಿಯುವುದು ಅದನ್ನು ಅನುಭವಿಸುವವರಿಗೆ ಮಾತ್ರ.
ಅಂದು ಸಾಯಂಕಾಲ ಸುಮಾರು ಐದೂವರೆ ಸಮಯ, ಮಳೆ ಜುಯ್ಯೆಂದು ಸುರಿಯುತ್ತಿತ್ತು. ನಾನು ಒಬ್ಬಳೆ ನನ್ನ ರೊಮಿನ ಬಾಲ್ಕನಿಯಲ್ಲಿ ಕುಳಿತು ಎಂದಿನಂತೆ ಟೀ ಹೀರುತ್ತ ನನ್ನಿಷ್ಟದ ಭಾವಗೀತೆಗಳನ್ನು ಕೇಳುತ್ತಿದ್ದೆ. ರೆಕಾರ್ಡಿನಲ್ಲಿರುವ ಸರದಿಯಂತೆ ನಮ್ಮ ಹೆಮ್ಮೆಯ ಕವಿ ಹೆಚ್.ಎಸ್. ವೆಂಕಟೇಶಮೂರ್ತಿರವರು ಬರೆದಿರುವ ಹೆಸರು ಕೂಡ ತಿಳಿಯಲಿಲ್ಲ ಎಂಬ ಗೀತೆಯನ್ನು ನನ್ನ ಮೊಬೈಲ್ ಹಾಡತೊಡಗಿತು. ಆ ಮಳೆಯ ತಂಪಿಗೊ ನನ್ನ ಹೃದಯದ ಬಿಸಿಗೊ, ಆ ಭಾವಗೀತೆಯ ಭಾವಕ್ಕೊ ನನ್ನ ಮನಸ್ಸು ಸುಮಾರು ಎರಡು ವರ್ಷ ಹಿಂದಕ್ಕೆ ಒರಗಿತು.
ಹೆಸರು ಕೂಡ ತಿಳಿಯಲಿಲ್ಲ
ಅವನ ಒಲಿದೆನೋ
ಯಾವ ನೆಲೆಯೋ ಯಾವ ಕುಲವೋ
ಒಂದು ತಿಳಿಯೆನು||
ಅಂದು 15/01/2013 ನಾನು ಮೂರನೇ ಸೆಮಿಸ್ಟರ್ ಪುಸ್ತಕಗಳನ್ನು ಕೊಳ್ಳಲು ಇಂದ್ರನಗರದಲ್ಲಿರುವ ಸ್ವಪ್ನ ಬುಕ್ ಹೌಸ್‌ಗೆ ಹೊಗಿದ್ದೆ. ಅಲ್ಲಿ ನನಗೆ ಬೇಕಾದ ಪುಸ್ತಕಗಳನ್ನು ಕೊಂಡು ಆಚೆ ಬರುವುದರಲ್ಲಿ ಕತ್ತಲಾಗಿತ್ತು. ನಂತರ ನನ್ನ ಅಣ್ಣನ ಮನೆಗೆ ಹಿಂತಿರುಗಲು ಟಾಕ್ಸಿ ಬುಕ್ ಮಾಡಲು ನನ್ನ ಮೊಬೈಲ್ ತೆಗೆಯ ಹೊದರೆ ಅದು ಜೇಬಿನಲ್ಲಿರಲಿಲ್ಲ. ಸ್ವಲ್ಪ ಗಾಬರಿಗೊಂಡು ಮತ್ತೆ ಒಳಗೆ ಹೋಗಿ ನಾನು ಓಡಾಡಿದ ಜಾಗವನ್ನೆಲ್ಲ ಮತ್ತೆ ಪರಿಶೀಲಿಸಿದೆ ಆದರೆ ಮೊಬೈಲ್ ಪತ್ತೆ ಇರಲಿಲ್ಲ. ಆದಷೆ ಭಾರಿ ಮಳೆ ಬಂದು ನಿಂತಿತ್ತು, ಟ್ರಾಫಿಕ್ ಬಟ್ಟಣೆಯು ಹೆಚ್ಚಿತ್ತಲ್ಲದೆ ಮತ್ತೆ ಮಳೆ ಬರುವುದರಲ್ಲತ್ತು. ಸರಿ ಇನ್ನೇನು ಮಾಡೊದು ಆಟೋನಲ್ಲೇ ಮನೆ ಸೇರೋಣ ಎಂದರೆ ಯಾವ ಆಟೋ ಕೂಡ ಸಿಕ್ಕಲಿಲ್ಲ, ಕೊನೆಗೆ ಅಣ್ಣನಿಗೆ ಫೋನ್ ಮಾಡೊಣವೆಂದರೆ ನಂಬರ್ ನೆನಪಿಲ್ಲ. ಟೆಕ್ನಾಲಜಿ ಬಂದು ಮನುಷ್ಯನ ನೆನಪು ಕಮ್ಮಿಯಾಗುತ್ತಿದೆ ಎಂದು ಅಪ್ಪ ಹೇಳಿದ ಮಾತು ನಿಜ ಎನ್ನಿಸಿತು. ಬರಬರುತ್ತ ತುಂಬ ಕತ್ತಲಾವರೆಸಿತು, ಮಳೆ ಕೂಡ ಹನಿಯಲು ಶುರುವಾಗಿತ್ತು, ನಾನು ಮುಂದೆಲ್ಲಾದರು ಆಟೋ ಸಿಗಬಹುದೆಂಬ ನಂಬಿಕೆಯಲ್ಲಿ ಮುಂದೆ ಹೆಜ್ಜೆ ಹಾಕಿದೆ, ಆದರೆ ನನ್ನ ಅರ್ಧಷ್ಟಕ್ಕೆ ಯಾವ ಆಟೋನು ಸಿಗಲಿಲ್ಲ, ಆದರೆ ದೂರದಲ್ಲಿ ಒಂದು ಬಸ್ ಸ್ಟಾಪ್ ಕಾಣಿಸಿತು, ನಿಟ್ಟುಸಿರು ಬಿಟ್ಟು ಅಲ್ಲಿಗೆ ಹೋಗಿ ನಿಂತೆ, ಮಳೆ ಅದರ ರಬಸ ಹೆಚ್ಚಿಸುತ್ತಿತ್ತು ಹಾಗಾಗಿ ಜನಸಮದಣಿಯು ಕಮ್ಮಿಯಾಗ ತೊಡಗಿತು, ನನ್ನ ದುಗುಡ ಹೆಚ್ಚಾಗ ತೊಡಗಿತು. ದೇವರ ಮೇಲೆ ಭಾರ ಹಾಕಿ ಅಲ್ಲೇ ನಿಂತೆ. ಅಷ್ಟರಲ್ಲಿ ದೇವರಿಗೆ ನನ್ನ ಕೊರಿಕೆ ಕೇಳಿಸಿತು ಎಂಬಂತೆ ಒಂದು ಕೆಂಪು ಕಾರು ನನ್ನ ಬಳಿ ಬಂದು ನಿಂತಿತು. ನನ್ನ ಎಲ್ಲಾ ತೊಂದರೆಗಳಿಗೆ ಪರಿಹಾರ ಎಂಬಂತೆ ಕಾರಿನ ಗ್ಲಾಸನ್ನಿಳಿಸಿ shall I help you ಎಂದು ಸುಮಾರು 25-27 ವಯಸ್ಸಿನ ನೋಡಲು ಸಾದಾತಣವೆನಿಸುವಂತಹ ಹುಡುಗ ನನ್ನ ಕೇಳಿದ್ದ. ನಾನು ಬೇರೆ ದಾರಿ ಇಲ್ಲದೆ ಕಾರು ಹತ್ತದೆ, ದಾರಿಯಲ್ಲಿ ನಮ್ಮಿಬ್ಬರ ಪರಿಚಯ ಮಾಡಿಕೊಂಡೆವು. ಆತನು ನನ್ನ ಬಳಿ ಹೇಳಿದ ಪರಿಚಯದ ಪ್ರಕಾರ ಆತನ ಹೆಸರು ಅಮಿತ್, ಬೆಂಗಳೂರಿನ ವಿಪ್ರೋದಲ್ಲಿ ಕೆಲಸ ಮಾಡುತ್ತಿರುವುದಾಗಿತ್ತು. ಮಳೆ ನಿಲ್ಲುವುದರಲ್ಲಿತ್ತು, ನಮ್ಮ ಮಾತು ನಿಂತಿತ್ತು ಹಾಗೆ ನಾನು ಕ್ಷೇಮವಾಗಿ ಮನೆ ಕೂಡ ಸೇರಿದ್ದೆ.
ನನ್ನ ಮನಸ್ಸಿನಲ್ಲಿ ಆತನ ಮೇಲೆ ಒಂದು ಒಳ್ಳೆ ಭಾವನೆ ಮೂಡಿತ್ತು, ಆತನು ನನಗೆ ಸಹಾಯ ಮಾಡಿದ್ದು, ನಾನು ಹೆದರಿದ್ದಾಗ ನನ್ನ ಸಂತೈಸಿದ್ದು ನನಗೆ ಇಷ್ಟಾವಾಗಿತ್ತು. ಆ ಘಟನೆಯಾದ ಮೇಲೆ ನನಗೆ ಆತನ ನೆನಪಾಗಿರಲಿಲ್ಲ. ಆದರೆ ವಿಧಿ ಎಂಬಂತೆ ಬೆಂಗಳೂರಿನ ಪ್ರತಿಷ್ಠಿತ ಶಾಪಿಂಗ್ ಕಾಂಪ್ಲೆಕ್ಸ್ ಒಂದರಲ್ಲಿ ನನ್ನ ಅವನ ಭೇಟಿಯಾಗಿತ್ತು ಅಲ್ಲಿ ಆತನನ್ನು ನಾನೇ ಮಾತಾಡಿಸಿದೆ, ಒಂದು ಕಾಫಿ ಶಾಪಿನಲ್ಲಿ ಕೂತು ಬಹಳ ಹೊತ್ತು ಕಾಲ ಕಳೆದೆವು, ಪರಿಚಯ ಹೆಚ್ಚಿದಂತೆ ಹಾಗೆ ಅದನ್ನು ಬೆಳೆಸುವ ಉದ್ದೇಶದಿಂದ ನಂದರ್ ಕೂಡ ಎಕ್ಸಚೇಂಜ್ ಆಗಿತ್ತು, ಅಷ್ಟರಲ್ಲಿ ನನಗೆ ಆತನಲ್ಲಿ ಏನೊ ಒಂಥರ ಆಸಕ್ತಿ ಆರಂಭವಾಗಿತ್ತು.
ನನ್ನ ಕಾಲೇಜು ಶುರುವಾದ ಕಾರಣ ನಾನು ಹಾಸನಕ್ಕೆ ಹಿಂತಿರುಗಿದೆ, ಅಷ್ಟರಲ್ಲಾಗಲೇ ಕಾಫಿ ಶಾಪಿನ ಭೇಟಿಯಲ್ಲದೇ 3 ಬಾರಿ ನಾವು ಭೇಟಿಯಾಗಿದ್ದೆವು(ನಿನ್ನಡೆಗೆ ಬರುವಾಗ ಸಿಂಗರದ ಹೊರೆಯೇಕೆ ಸಡಗರದ ಮಾತುಗಳ ಬಿಂಕವೇಕೆ) ಹಾಸನಕ್ಕೆ ಹಿಂತಿರುಗಿದ ಮೇಲು ಆಧುನಿಕ ಕಾಲದ ಎಲ್ಲಾ ತಂತ್ರಾಂಶಗಳ ಸಹಾಯದಿಂದ ನಮ್ಮ ಸ್ನೇಹ ಯಾವುದೆ ಅಡ್ಡಿ ಇಲ್ಲದಂತೆ ೪ ತಿಂಗಳು ಪೂರ್ಣಗೊಳಿಸಿತ್ತು. ಈ ಸಮಯದಲ್ಲಿ ನಾನು ಆತನನ್ನು ಬಹಳವಾಗಿ ಹಚ್ಚಿಕೊಂಡಿದ್ದೆ, ನನ್ನ ದಿನಚರರಿಯಲ್ಲಿ ಬಹುಪಾಲು ಆತನಿಗಾಗಿಯೇ ಮೀಸಲಿಟ್ಟಿದ್ದೆ.I just wanted him more than a friend. And he was.
ಕಂಡೊಡನೆ ಸೋತೆ ನಾನು ಏನೂ ನೋಡದೆ
ಮಾಯದಿರುಳ ಮರುಳಿನಲ್ಲಿ ಮನವ ನೀಡಿದೆ
ನಿನ್ನ ವಿನಾ ಬಾಳೆನು ನಾ ಎಂದು ನುಡಿವೆನು||
ಆದರೆ ಅವನ ಬದುಕಿನಲ್ಲಿ ನನ್ನ ಸ್ಥಾನ ಏನೆಂಬುದು ನನಗೆ ಅಸ್ಪಷ್ಟ. ಆತನ ಬಳಿ ಆ ವಿಷಯ ಮಾತಾಡಿದಾಗಲೆಲ್ಲ ಅವನು ಕೊಡುತಿದ್ದದು (Don’t be so close to me and don’t expect anything from me ) ಅರ್ಥವಾಗದ ಉತ್ತರಗಳು.
ಪ್ರತಿ ದಿನ ಆತನೇ ನನಗೆ ಫೋನ್ ಮಾಡಿ ಎಬ್ಬಿಸುತ್ತಿದ್ದ ಆದರೆ ಅಂದು ಆತನ ಫೋನ್ ಬಂದಿರಲಿಲ್ಲ, ಆತ ಬ್ಯುಸಿ ಇರಬಹುದೆಂದು ನಾನು ಸುಮ್ಮನಾದೆ, ಆದರೆ ಒಂದು ವಾರ ಕಳೆದರು ಆತನ ಸಿಳಿವೇ ಇರಲಿಲ್ಲ ನಾನು ಫೋನ್ ಮಾಡಿದರೆ switch off ಬರುತ್ತಿತ್ತು. ಹೀಗೆ ಒಂದು ತಿಂಗಳು ಕಳೆದಿತ್ತು. ನಾನು ಪ್ರತಿ ದಿನ ನೂರಾರು ಸತಿ ಆತನಿ ಫೋನ್ ಮಾಡುತ್ತಿದ್ದೆ ಆದರೆ ಅದು switch off. ಫೇಸ್ ಬುಕ್ ಅಕೌಂಟ್ ಕೂಡ deactivate ಆಗಿತ್ತು. ಆತನಿಗೆ ಒಂದು ನೂರು ಮೇಲ್ ಮಾಡಿದರು ಉತ್ತರ ಇಲ್ಲ. ನನಗಂತು ಏನೊ ಕಳೆದುಕೊಂಡ ಅನುಭವ, ಕೊನೆಗೆ ಆತನ ಕಂಪನಿಯಲ್ಲಿ ವಿಚಾರಿಸಿದಾಗ ತಿಳಿಯಿತು ಆತನ ಫೋನ್ switch off ಆದ ದಿನವೇ ಆತ ತನ್ನ ಕೆಲಸಕ್ಕೆ resign ಮಾಡಿದ್ದ. ಆತನ ಸಹೋದ್ಯಗಿಗಳಿಗೂ ಕಾರಣ ತಿಳಿಸಿರಲಿಲ್ಲ. ಆ ಸಮಯದಲ್ಲಿ ನನಗೆ ಮನುಷ್ಯರ ಮೇಲಿರುವ ಭರವಸೆಯೇ ಹೋಗಿತ್ತು.
ಅದಾಗಿ ಒಂದು ವಾರಕ್ಕೆ ಸರಿಯಾಗಿ ನನಗೆ ಆತನಿಂದ ಒಂದು ಇ-ಮೇಲ್ ಬಂತು ಏನ್ ತುಂಬ ಹುಡುಕ್ತಿದಿಯ ನನ್ನ? ಕಳೆದಿರುವ ವಸ್ತು ಅದಾಗದೆ ಸಿಗ್ಬೇಕು ಜಾಸ್ತಿ ಹುಡ್ಕಕ್ಕೆ ಹೋಗ್ಬಾರ್‍ದು. ನೀನ್ ಯಾವಾಗ್ಲು “I love your heart” ಅಂತಿದ್ದೆ ಅಲ್ವ ನೋಡು ಈಗ ಅದಕ್ಕೆ ತುಕ್ಕು ಹಿಡಿದಿದ್ಯಂತೆ ಅದಕ್ಕೆ ಕಲಾಯಿ ಹಾಕ್ಸಕ್ಕೆ ಹೋಕ್ತಿದಿನಿ, ಕಲಾಯಿ ಸರಿಯಾಗಿ ಕೂತ್ರೆ ಮತ್ತೆ ಫೋನ್ ಮಾಡ್ತೀನಿ. You have special place in my heart and you deserve it. I am getting late bye. ನನ್ಗೋಸ್ಕರ ಕಾಯ್ಬೇಡ.“Don’t wait for me”
ಈ ಮೇಲ್ ಬಂದು ಇಂದಿಗೆ 2 ವರ್ಷ ಕೆಳೆದಿದೆ, ಆದರೂ ಇನ್ನು ಆತ ಫೋನ್ ಮಾಡಿಲ್ಲ. ಆತ ಎಲ್ಲಿಹೋದ? ಗೊತ್ತಿಲ್ಲ, ಏನಾದ? ಗೊತ್ತಲ್ಲ, ಬರ್‍ತಾನಾ? ಗೊತ್ತಿಲ್ಲ. ಆತ ನೆನಪಾದಗಲೆಲ್ಲ ಅವನಿಗೆ ಫೋನ್ ಮಾಡ್ತೇನೆ ಇಂದಿನವರೆಗೂ ಅವನ ಫೋನ್ ಕೂಡ ಆನ್ ಅಗಿಲ್ಲ, ಹಂಗಂತ ನಾನು ಫೋನ್ ಮಾಡೋದನ್ನು ನಿಲ್ಸಲ್ಲ.
ಮೊರೆವ ತೊರೆವ ಸೆಳೆವಿನಲ್ಲಿ ಕೈಯ ಹಿಡಿದೆನು
ತುಟಿಯ ಬಿಸಿ ಹಾಗೆ ಇದೆ ತುಸುವು ಆರದೇ
ಎದೆಯೊಳೆನೋ ಉರಿಯುತಿದೆ ಹೊರಗೆ ತೋರದೆ
ಪ್ರೇಮ ಪತ್ರ ಬರೆದು ಕಳಿಸಿ ಪ್ರಿಯನಿಗೆ
ಕಾಯುತ್ತಿರುವೆ ಉತ್ತರ ವಿಳಾಸ ಬರೆಯದೆ
ವೆಳಾಸ ಬರೆಯದೆ||
I don’t know what kind of relation we had but still I feel something special about him.
ಹಣತೆ ಹಚ್ಚುತ್ತೇನೆ ನಾನು
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುಚಷ್ಟು ಹೋತ್ತು ನಿನ್ನ ಮುಖ ನಾನು
ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು
ಆಸೆಯಿಂದ, ಹಣತೆ ಆರಿದ ಮೇಲೆ, ನೀನು ಯಾರೋ
ಮತ್ತೆ ನಾನು ಯಾರೋ
– ನಿಷ್ಕಲಾ ಗೊರೂರು
ಮನಸ್ಸಿಗೆ ಆಪ್ತವೆನ್ನಿಸುವ ಹಾಗಿದೆ ನಿಮ್ಮ ಬರಹ. ಇನ್ನೂ ನಿರೀಕ್ಷಿಸಬಹುದಾ?
ಕಂಡಿತ ಸರ್
ತುಂಬಾ ಚನಾಗಿದೆ ಕಥೆ… All ದ ಬೆಸ್ಟ್
ವಂದನೆಗಳು
Nice nishkala
ಹೈ..
ನಿಮ್ ಬರವಣಿಗೆ ನನ್ ಭಾವನೆಗೆ, ಅನುಭವಕ್ಕೆ ತುಂಬಾ ಹತ್ತಿರವಾಗಿದೆ.. ಕ್ಯಾನ್ ಐ ಗೆಟ್ ಯೂವರ್ ನಂಬರ್ ಪ್ಲೀಸ್..
ನನ್ ಹೆಸರು ಪ್ರಿಯಾ, priya.dore8484@gmail.com.. plz do mail me madam..