ಕನ್ನಡದ ಬಗ್ಗೆ ಒಂದಿಷ್ಟು ಪ್ರಶ್ನೆಗಳು
ಶ್ರಾವಣದ ಹಬ್ಬಗಳ ಸಾಲು ಸಾಲಿನೊಂದಿಗೆಯೇ ದಸರಾ ಮುಂತಾಗಿ ಸಂಸ್ಕೃತಿ ಹಬ್ಬಗಳು ಮೊದಲುಗೊಳ್ಳುತ್ತವೆ. ಸಂಸ್ಕೃತಿ, ಭಾಷೆ, ಜನಪದ, ಧರ್ಮ, ಆಚರಣೆ ಎಲ್ಲವೂ ಒಂದಕ್ಕೊಂದು ಮಿಳಿತವಾಗಿರುವ ಕಾರಣವೇ ಇವೆಲ್ಲ ನಾಡು ನುಡಿಯ ಹಬ್ಬಗಳು.
ಈ ನಿಟ್ಟಿನಲ್ಲಿ ಕೆಲವು ಪ್ರಶ್ನೆಗಳು: ಜಾಗತೀಕರಣಗೊಂಡ ಈ ತಲೆಮಾರಿಗೆ ಕನ್ನಡ ಎಷ್ಟು ಪ್ರಸ್ತುತ? ಈ ಭಾಷೆಗೆ ಉದ್ಯೋಗ ದೊರಕಿಸುವ ಶಕ್ತಿ ಇದೆಯೇ? ಇಲ್ಲವಾದಲ್ಲಿ ಅದು ಕೂಡ ಒಂದು ಜನಪದದಂತೆ ಮರೆಯಾಗುವ ಸಾಧ್ಯತೆ ಇದೆಯೇ? ಶಿಷ್ಟ ಕನ್ನಡ ಹಾಗೂ ಆಡು ಕನ್ನಡ ಇವೆರಡರಲ್ಲಿ ಯಾವುದು ಉಳಿಯುವ ಸಾಧ್ಯತೆ ಜಾಸ್ತಿ? ಇಂಗ್ಲಿಷ್ ಭಾಷೆಯನ್ನು ಕಲಿಯುವುದು ಆಯ್ಕೆಯೇ, ಅನಿವಾರ್ಯತೆಯೇ , ಹಕ್ಕೇ? ಸಂವಹನಕ್ಕಿರುವ ಭಾಷೆ ಅಧಿಕಾರದ ಮಾಧ್ಯಮವಾಗುವುದು ಯಾವ ಮಜಲಿನಲ್ಲಿ? ಭಾಷೆಯ ರಾಜಕಾರಣಕ್ಕೂ ಜನಜೀವನಕ್ಕೂ ಎಷ್ಟರ ಮಟ್ಟಿಗೆ ಸಂಬಂಧವಿದೆ? ಧರ್ಮಕ್ಕೆ, ಕಲೆಗಳಿಗೆ ಭಾಷೆಯನ್ನು ಉಳಿಸುವ ಸಾಮರ್ಥ್ಯ ಇದೆಯೇ? ಉಳ್ಳವರ ಭಾಷೆಗೂ ಬಡವರ ಭಾಷೆಯ ಬಳಕೆಗೂ ವ್ಯತ್ಯಾಸವೇನು? ಭಾಷೆಯ ಮಹತ್ವ ಅದನ್ನು ಬಳಸುವವರನ್ನು ಅವಲಂಬಿಸಿದೆಯೆ? ಭಾಷೆಯ ಒನಪು, ವಯ್ಯಾರ, ನುಡಿಗಟ್ಟುಗಳನ್ನು ಸರಿಯಾಗಿ ಬಳಸಿಕೊಂಡಾಗ ಅದನ್ನು ಉಳಿಸಲು ಸಾಧ್ಯವಿದೆಯೆ?
ದೈನಂದಿನ ಭಾಷೆ ಸಾಹಿತ್ಯವಾಗಬಹುದೆ? ಸಾಹಿತ್ಯಕ್ಕೆ ಜನಜೀವನವನ್ನು ಪ್ರಭಾವಿಸುವ ಶಕ್ತಿ ಇದೆಯೇ? ಕಥನ ಕಲೆ ಎಂದರೇನು? ಕೇವಲ ಸಾಹಿತಿಗೆ ಮಾತ್ರ ಕಥನ ಕಲೆ ಒಲಿದಿದೆಯೆ? ಒಂದು ಕಥೆಗೆ, ಒಂದು ಪದ್ಯಕ್ಕೆ ಮಾನವ ಪ್ರಜ್ನೆಯನ್ನು ವಿಸ್ತರಿಸುವ ಸಾಮರ್ಥ್ಯ ಇದೆಯೇ? ಬರಹವೆಂದರೆ ಬದುಕೆ? ಬದುಕೇ ಬರಹವೆ? ಬರಹದಿಂದ ಬದುಕು ಕಟ್ಟಲು ಸಾಧ್ಯವೇ?
ಸಾಹಿತ್ಯವನ್ನು. ಜಗತ್ತನ್ನು, ಕುತೂಹಲದ ಕಣ್ಣುಗಳಿಂದ ಪರಿಭಾವಿಸುತ್ತಿರುವ ನಮಗೆ ಹೀಗೆ ಪ್ರಶ್ನೆಗಳೇ ಜಾಸ್ತಿ.
.
– ಜಯಶ್ರೀ ಬಿ ಕದ್ರಿ
ಉತ್ತರಗಳೂ ನಮ್ಮಲ್ಲಿಯೇ ಇವೆ.
ಜಪಾನೀ, ಜರ್ಮನ್ , ಸ್ಪ್ಯಾನಿಶ್ , ಮೊದಲಾದ ಭಾಷೆಗಳೂ ಕೈ ಚೆಲ್ಲಿ ಕುಳಿತಿದ್ದರೆ, ಅವರಿಗೂ ಆಂಗ್ಲ ಭಾಷೆ ಅನಿವಾರ್ಯವಾಗುತ್ತಿತ್ತೇನೋ!
ತಂತ್ರಗ್ನಾನಕ್ಕಂತೂ ಭಾಷೆಯ ಅವಲಂಬನೆ ಇಲ್ಲ. ಗಣಕಯಂತ್ರಗಳಲ್ಲಿ ಕನ್ನಡ ಕೀಲಿಮಣೆ ಬಳಕೆಗೆ ಬರುತ್ತಾ ಇಲ್ಲಿಯೂ ಅವಲಂಬನೆಯನ್ನು ತಗೆದೊಗೆಯಬಹುದು.
ಇನ್ನು ಧರ್ಮದ ವಿಚಾರಕ್ಕೆ ಬಂದರೆ, ಅದೂ ಕೂಡ ಸ್ವಾವಲಂಬಿ. ಕರ್ನಾಟಕವನ್ನಾಳಿದ ಕೆಲ ಮತಾಂಧರಿಂದ ನಮ್ಮಲ್ಲಿ ಇಂತಹ ಪ್ರಶ್ನೆಗಳು ಮೂಡುತ್ತವೆ.
ಇನ್ನು ಸಾಹಿತ್ಯದ ಪಾತ್ರ ನನಗಿಂತಲೂ ನಿಮಗೇ ಹೆಚ್ಚು ತಿಳಿದಿದೆ. 🙂
ನನ್ನ ನೆಚ್ಚಿನ ಸಾಲುಗಳು – ‘ಭಾಷೆಯ ಒನಪು, ವಯ್ಯಾರ, ನುಡಿಗಟ್ಟುಗಳನ್ನು ಸರಿಯಾಗಿ ಬಳಸಿಕೊಂಡಾಗ ಅದನ್ನು ಉಳಿಸಲು ಸಾಧ್ಯವಿದೆಯೆ?’
ಖಂಡಿತಾ ಸಾಧ್ಯ. ಅದೇ ಭಾಷೆಯ ಸೌಂದರ್ಯ! 🙂
ತುಂಬಾ ಚಂದದ ವಿಮರ್ಶೆ ವಿನಯ್.
Kannadigas should learn to love their language like tulu, Konkani, kodavas, byaaris who work for their languages silently, without any govt. support, sheer out of love and affection. See the success of tulu films in Mangaluru
Nimma Prashnegala Saramale channagide,Aadu kannada ,Ondondu Jilleyalli Bere bere iddu, Aya Jilleya Sthalleyarinda. Idu Kayammagi Uliyuttade. shishta Kannada Shalegalalli Bodhisuwadarind Idannu Shikshanarthigalu Matra UPayogisbahudu , adoo saha Sahitya chintakaru, Lekhakaru Matra( udaharanege Neewe Iddrrri) Nanna alpamatige Toriddannu tilisiruwe, Dhanyawadagalu.
ಪ್ರಸ್ತುತ ಅರ್ಥಪೂರ್ಣ ಪ್ರಶ್ನೆಗಳನ್ನ ಕೇಳಿದ್ದಕ್ಕೆ ಧನ್ಯವಾದಗಳು, ಆದರೂ ನಾವು ನಿರಾಶೆ ಹೊಂದಬಾರದು ಭಾಷೆಯ ಉಳುವಿಗಾಗಿ ಕೈಲಾದಮಟ್ಟಿಗೆ ಹೋರಟ ಮಾಡೋಣ.