ಹಲಸಿನ ಬೀಜದ ಮೊಸರು ಗೊಜ್ಜು
ಬೇಕಾಗುವ ಸಾಮಾನು:
- ಹಲಸಿನಬೀಜ ಎ೦ಟು
- ಮೊಸರು ಒ೦ದು ಕಪ್
- ಹಸಿಮೆಣಸು ಎರಡು
- ಶುಂಠಿ ಒ೦ದು
- ನೀರುಳ್ಳಿ ಒ೦ದು
- ಉಪ್ಪುರುಚಿಗೆ
ಒಗ್ಗರಣೆಗೆ ಇ೦ಗು, ಸಾಸಿವೆ, ಬೆಳ್ಳುಳ್ಳಿ ,ಎಣ್ಣೆ, ಕರಿಬೇವು
ವಿಧಾನ :
ಹಲಸಿನ ಬೀಜವನ್ನು ಕುಕ್ಕರಿನಲ್ಲಿ ನೀರು ಹಾಕಿ ಬೇಯಿಸಿ ಚೆನ್ನಾಗಿ ಪುಡಿಮಾಡಿ.ಮೊಸರಿಗೆ ಉಪ್ಪು,ಹಸಿಮೆಣಸು,ಶು೦ಟಿ,ಹೆಚ್ಹಿದ ಈರುಳ್ಳಿ ಪುಡಿಮಾಡಿದ ಹಲಸಿನ ಬೀಜವನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ .
ಇ೦ಗು,ಸಾಸಿವೆ, ಕರಿಬೇವು, ಬೆಳ್ಳುಳ್ಳಿ ಒಗ್ಗರಣೆ ಹಾಕಿ ಬಿಸಿ ಅನ್ನ ,ಚಪಾತಿ,ಪರಾಟ ದೊ೦ದಿಗೆ ಸವಿಯಿರಿ.
– ಸಾವಿತ್ರಿ ಭಟ್, ಪುತ್ತೂರು
whaav…mouth watering…
Namma maneyallu thayari maadthivi idanna..Tumba ruchiyagirutte..Nice.
ಸರಳ – ಸುಲಭ. ಚೆನ್ನಾಗಿದೆ.