ನೋಟ ಮರೆಯಾದರೇನು
ಮಾತು ಮೌನವಾದರೇನು,
ಕರ್ಣ ಕಿವುಡಾದರೇನು
ಈ ದಿನದ ಅಕ್ಷರ ಕೋಶ ಮಿಡಿಯುವುದಿಲ್ಲವೆ.
ಮಾತು ಮೌನವಾದರೇನು,
ಕರ್ಣ ಕಿವುಡಾದರೇನು
ಈ ದಿನದ ಅಕ್ಷರ ಕೋಶ ಮಿಡಿಯುವುದಿಲ್ಲವೆ.
…
ನೋಡಿ ನಿನ್ನ ದಶಕಗಳೇ ಕಳದಿವೆ
ನುಡಿಯ ಕೇಳಿ ಋತುಗಳೆ ಮರೆತಿವೆ,
ಮದುರ ಬಾಲ್ಯ ನೆನಪುಗಳ ಕಾಡುತಿವೆ
ಇಂದಿಗೂ ನೆನಪುಗಳ ಒಡನಾಟ ಮಿಡಿಯುತಿವೆ.
ನುಡಿಯ ಕೇಳಿ ಋತುಗಳೆ ಮರೆತಿವೆ,
ಮದುರ ಬಾಲ್ಯ ನೆನಪುಗಳ ಕಾಡುತಿವೆ
ಇಂದಿಗೂ ನೆನಪುಗಳ ಒಡನಾಟ ಮಿಡಿಯುತಿವೆ.
”’
ಬಾಲ್ಯದ ಪುಟಗಳು ಸದಾ ಅಮರ
ಶಾಲೆಯ ಪುಸ್ತಕಗಳು ಮಹಾ ಸಾಗರ,
ಕಳೆದ ಕ್ಷಣಗಳು ದಿನಗಳ ಕ್ಷೀರ
ಬರೆದ ಪ್ರತಿಜ್ಞೆ ಬಾಳಿಗೆ ಪುರ .
ಶಾಲೆಯ ಪುಸ್ತಕಗಳು ಮಹಾ ಸಾಗರ,
ಕಳೆದ ಕ್ಷಣಗಳು ದಿನಗಳ ಕ್ಷೀರ
ಬರೆದ ಪ್ರತಿಜ್ಞೆ ಬಾಳಿಗೆ ಪುರ .
…
ಹಿನ್ನೋಟ ಪಯಣ ಇಂದಿಗೆ ಗ್ರಂಥಾಲಯ
ಮೊನ್ನೋಟ ಬರಹ ಬವಿಷ್ಯ ವಿಶ್ವಾಲಯ
ಅಕ್ಷರ ಕೋಶವೇ ಜಗತ್ತಿನ ಚಿತ್ರಾಲಯ
ಸಂಖ್ಯೆಗಳ ಕೇಂದ್ರವೇ ಮಾನವನ ಮಿತ್ರಾಲಯ .
ಮೊನ್ನೋಟ ಬರಹ ಬವಿಷ್ಯ ವಿಶ್ವಾಲಯ
ಅಕ್ಷರ ಕೋಶವೇ ಜಗತ್ತಿನ ಚಿತ್ರಾಲಯ
ಸಂಖ್ಯೆಗಳ ಕೇಂದ್ರವೇ ಮಾನವನ ಮಿತ್ರಾಲಯ .
….
ಫೇಸ್ ಬುಕ್ ಪ್ರಿಯರಿಗೇ ಪ್ರಣಾಮದ ಸಂದೇಶ.
ಎಸ್.ಎಂ.ಎಸ್. ಸ್ನೇಹಿತರಿಗೇ ಶರಣು ಸಂದೇಶ,
ಟ್ವೀಟರ್ಸ್ ತರುಣರಿಗೇ ಮಮತೆಯ ಸಂದೇಶ
ವಾಟ್ಸ್ ಆಪ್ ವನಿತೆಯರಿಗೇ ವಂದನೆಗಳೇ ಸಂದೇಶ .
ಎಸ್.ಎಂ.ಎಸ್. ಸ್ನೇಹಿತರಿಗೇ ಶರಣು ಸಂದೇಶ,
ಟ್ವೀಟರ್ಸ್ ತರುಣರಿಗೇ ಮಮತೆಯ ಸಂದೇಶ
ವಾಟ್ಸ್ ಆಪ್ ವನಿತೆಯರಿಗೇ ವಂದನೆಗಳೇ ಸಂದೇಶ .
…..
ಗೆಳೆಯರ ಬಳಗ ಒಂದಾಗುವ ದಿನ
ನುಡಿ ಸಂತೋಷದಿ ಹಂಚುವ ಕ್ಷಣ,
ನಲಿಯಿಸಿ ನಲಿದಾಡಲು ಈ ಕವನ
ವಂದನೆಗಳೊಂದಿಗೆ ನನ್ನ ನಮನ.…
ಸ್ನೇಹ ಚಿರಾಯು.!
– ಚಂದ್ರಶೇಖರ.ಎಸ್. ರೆಡ್ಡಿ
..
ಕವನ ಚೆನ್ನಾಗಿದೆ. 🙂
ವೆರಿ ನೈಸ್.ಅಭಿನಂದನೆಗಳು
ಉತ್ತಮ ಕವಿತೆ
ನಮನಕೆ ನಮನವು ನಿಮ್ಮ ಈ ಕವಿತೆಯ ಸರಮಾಲೆಗೆ
ಸ್ನೇಹ ಜೀವಿಯಾಗಿರದ ಬದುಕೇಕೆ ಬಾಳಿಗೆ…