ಭಣಭಣ

Spread the love
Share Button
Mohini Damle (Bhavana)

ಮೋಹಿನಿ ದಾಮ್ಲೆ (ಭಾವನಾ)

ಇದು ಕಾಲೇಜು ದಿನಗಳ ನೆನಪು. ಬಿ.ಕಾಂ. ಅಂತಿಮ ವರ್ಷದಲ್ಲಿ ನಮಗೆ ಕಮರ್ಷಿಯಲ್ ಲಾ ( ಮರ್ಕೆಂಟೈಲ್ ಲಾ ) ಅನ್ನುವ ಸಬ್ಜೆಕ್ಟ್ ಇತ್ತು.  ಇದನ್ನು ಪಾಠ ಮಾಡಲು ಒಬ್ಬರು ಹಿರಿಯ ವಕೀಲರು ಬರುತ್ತಿದ್ದರು. ಯಾರು ಕೇಳಲಿ ಬಿಡಲಿ ಅವರು ತಮ್ಮ ಪಾಡಿಗೆ ಒಂದೇ ಶೃತಿಯಲ್ಲಿ ಲೆಕ್ಚರ್ ಕೊಟ್ಟು ಹೋಗಿಬಿಡುತ್ತಿದ್ದರು. ಹುಡುಗರು ಏನು ಚೇಷ್ಠೆ ಮಾಡಿದರೂ ತಲೆಕೆಡಿಸಿಕೊಳ್ಳದ ಸ್ಥಿತಪ್ರಜ್ಞ ವ್ಯಕ್ತಿ ಅವರು. ನನಗೋ ಈ ಸಬ್ಜೆಕ್ಟ್ ಬಹಳ ಬೋರಿಂಗ್. ಕ್ಲಾಸ್ ನಲ್ಲಿ ನಿದ್ದೆ ತಡೆಯೋಕೇ ಆಗ್ತಿರಲಿಲ್ಲ. ಯಾವಾಗ ಬೆಲ್ ಆಗತ್ತಪ್ಪಾ ಅಂತ ಕಾಯ್ತಾ ಇರುತ್ತಿದ್ದೆ. ಕ್ಲಾಸ್ ಮುಗಿಸಿ ಹೊರಬಂದರೆ ತಲೆಯೊಳಗೆ ಏನಿಲ್ಲ…ಖಾಲಿ. ( ಸದ್ಯ ಫ಼ೈನಲ್ ಎಕ್ಸಾಮ್ ನಲ್ಲಿ ಫೇಲ್ ಆಗಲಿಲ್ಲ ; ಅದೇ ಪುಣ್ಯ ) ಆಗ ಹೊಳೆದ, ಬರೆದ 25 ವರ್ಷಗಳ ಹಿಂದಿನ ಕವನ ಇದು.

ಅಣುಅಣುವೊಳು ಆ ಕೋಣೆಯ

ಕಣಕಣದಲು ಮೆಲ್ಗೊಣಗಿನ

ಗುಣುಗುಣು ರಿಂಗಣಿಸಿರಲು

ಹಣಹಣಿಸುತ ಕುಣಿಕುಣಿಯುತ

ಮನೆಮಣ್ಣಂಗಣ ಕಾಣಲು

ಮಿದುಳೊಳಗಿನ ಭಣಭಣಭಣ

ಏನಿದಕೆ ಕಾರಣ?

question mark1

– ಮೋಹಿನಿ ದಾಮ್ಲೆ (ಭಾವನಾ) 

 

4 Responses

  1. ತುಂಬಾ ಚೆನ್ನಾಗಿದೆ 🙂 ಬೋರಿಂಗ್ ಪ್ರೊಫೆಸರರ ಕೊರೆತ ನಿಮ್ಮೀ ಕಾವ್ಯ ಸೃಷ್ಟಿಗೆ ಕಾರಣ!

  2. Hema says:

    ‘ಬೋರ್’ ಆದಾಗ ಈ ಕವನದಲ್ಲಿ ‘ಣ’ ಎಷ್ಟು ಸಲ ಬಂಡಿದೆ ಎಂದು ಹುಡುಕಿ…
    ಣ – 12 ಸಲ, ಣಿ – 4 ಸಲ, ಣು – 4 ಸಲ, ಣೆ – 1 ಸಲ , ಣ್ಣಂ – 1 ಸಲ 🙂

  3. ಪಾಠ ಹೇಳಿಕೊಟ್ಟಿದ್ದು ಕಮರ್ಶಿಯಲ್ ಲಾ, ಆದರೆ ಕಲಿತಿದ್ದು ಮಾತ್ರ ಕನ್ನಡ ಲಿಟರೇಚರು! ತಾಳ ಮೇಳ ಚೆನ್ನಾಗಿದೆ; ಅದಕ್ಕೆ ಇರಬೇಕು ಕಾ’ಣೂ’ನು ಬದ್ಧ ಕಾವ್ಯ ರಚಿಸಿದ್ದೀರಾ 🙂

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: