‘ಪೆದ್ದ’ರಾಮನ ಬುದ್ದಿವಂತಿಕೆ..
ಮದುವೆ ಮುಂಜಿ ಜವಾಬ್ದಾರಿ
ಮಕ್ಕಳ ಬದುಕಿಗೊಂದೊಂದು ದಾರಿ
ಮುಗಿಸಿದ ಸಂತೃಪ್ತಿಗೆ ರಾಮ
ಕಲಿತ ಚಟ ಕುಡಿತದ ಬ್ರಹ್ಮ..
ಯಾಕೊ ಅತಿಯಾಯ್ತೆಂದು ಸತಿ
ಜಾಡಿಸಿಬಿಟ್ಟಳು ಆ ರಾತ್ರಿ
ಕುಡಿದು ಬಂದವನ ಮೇಲೆ
ಕಾರುತ್ತ ಮೊನೆಚಿನ ವಾಗ್ದಾಳಿ..
‘ನೀವೊಬ್ಬರೆ ಏನು ನಿರಾಳ ?
ಮುಗಿದಿದೆ ನನದೂ ಹೊರೆಯಾಳ
ಕಳೆದಿದೆ ಹೊಣೆಗಾರಿಕೆ ಮೊತ್ತ
ನಾನು ಜತೆ ಕುಡಿಯುವುದೆ ಸೂಕ್ತ..!
ನಡೆಯಿರಿ ಈಗಲೆ ಬಾರಿಗೆ
ಕುಡುಕ ದಂಪತಿ ದರಬಾರಿಗೆ’
ಮಿಕಮಿಕ ಕಣ್ಬಿಟ್ಟ ರಾಮ
ಮುಗ್ದ ನೋಡುತ್ತ ಸತಿವ್ರತೆಯ
‘ನಿಜ ನಿರಾಳದೆ ಕುಡಿತ ಚೆನ್ನ
ನೆಮ್ಮದಿಯನುಭವಿಸೊ ಪರಮ..
ನಿನಗೇನೊ ಕುಡಿವ ಹಂಬಲ
ನಿನ್ನಾಸೆ ತೀರಿಸೆ ಸಕಾಲ –
ಹೇಳು ಪೂರೈಸೆ ನಿನ್ನಾ ಛಲ
ನಾ ಕುಡಿಯಬೇಕೆ ಮೊದಲ ಸಲ ?
ನನ್ನೂ ಕುಡುಕನ ಪಟ್ಟಕೆ ನೂಕಲಾ??’
ಎಂದವನ ನೋಡುತ ಗರ
ಬಡಿದಂತೆ ಕೂತಳಾ ಸರಳ..!
– ಮೈನಂನಾಗೇಶ
Suuuuper
ಧನ್ಯವಾದಗಳು ಆರಾಧ್ಯರೆ 🙂
ಚೆನ್ನಾಗಿದೆ….:)
ಧನ್ಯವಾದಗಳು ಹೇಮಾರವರೆ. ಅಂದಹಾಗೆ ಇದು ಮೂಲತಃ ಬರಿಯ ಕಲ್ಪನೆಯಲ್ಲ. ಚತುರ ವಾಗ್ಮಿಯೊಬ್ಬರ ನಿಜ ಜೀವನದ ಸಂಧರ್ಭವೊಂದನ್ನು ಕವನಕ್ಕಿಳಿಸಿದ್ದೇನೆ ಅಷ್ಟೆ 🙂
ಚೆನ್ನಾಗಿದೆ …ಸರ್ ಇಷ್ಟವಾಯಿತು..
ತುಂಬಾ ಧನ್ಯವಾದಗಳು ಸ್ನೇಹಾ ಪ್ರಸನ್ನಾರವರೆ 🙂
ಚೆನ್ನಾಗಿದೆ
ಸಾವಿತ್ರಿ ಭಟ್ ರವರೆ, ಮೆಚ್ಚುಗೆಗೆ ಧನ್ಯವಾದಗಳು 🙂