ದೈತ್ಯೆ
ಸಹಜವಾದ ಬದುಕಿನಲ್ಲಿ ಕತ್ತಲೆಂಬ ದೈತ್ಯೆ,
ನುಗ್ಗಿ ಹತ್ತುತಿರುವ ಮಟ್ಟಿಲುಗಳನ್ನು
ಹತ್ತಲಾಗದಂತೆ ಎಡವಿಸಿ ಕೆಡವಿಬಿಟ್ಟರೆ
ನಾ ಸೋಲನ್ನು ಒಪ್ಪಲಾರೆ.
ನಾ ಎದ್ದು ಬಂದೆ ಬರುವೆ.
ನಾ ನಿನಾಗಾಗಿ ಕತ್ತುಬಗ್ಗಿಸಲಾರೆ
ಹೆದರಿ ಪಿಸುಗುಟ್ಟಿ ನಿಟ್ಟುಸಿರು ಬಿಡಲಾರೆ
ಕತ್ತಲಲ್ಲಿ ಕತ್ತುಹಿಸುಕಿ ಓಡುವ ಕತ್ತಲೆಂಬ ದೈತ್ಯೆ,
ಗಹಗಹಿಸಿ ನಗುವ ನಿನ್ನ ಮಖವನ್ನು ನಾ ಹೇಗೆ ಮರೆಯಲಿ ?
ನಿನ್ನ ಬುಡ ಕಳಚುವ ಮುನ್ನವೆ ಎಚ್ಚೆತ್ತುಕೊ ರಕ್ಕಸಿ
ಹೋದಲೆಲ್ಲಾ ಸುಮ್ಮನೆ ಸಮ್ಮನೆ ಅಳುವೆ, ನಟಿಸಿ ನರ್ತಿಸುವೆ.
ಅವರಂದು ಕೊಂಡಿರುವರು ನೀನು ದಯಾಮಯಿ ಹೆಣ್ಣು..
ಆದರೆ ನನಗೆ ಗೊತ್ತು ನೀನು ಯಾರು ಎಂದು.
– ಶೋಬಿತ ನಾಗತಿಹಳ್ಳಿ