ವಿದಿಶೆ

Share Button
Mohini Damle (Bhavana)

ಮೋಹಿನಿ ದಾಮ್ಲೆ ( ಭಾವನಾ )

ಕಳೆದೆ ಇಲ್ಲ ಇನ್ನು ನಿಶೆ
ಬೆಳೆದೆ ಇಲ್ಲ ಇನ್ನು ಉಷೆ
ಹೊಳೆ‌ದೆ ಇಲ್ಲ ಎಂಟು ದಿಶೆ
ಇಳೆಗೆ ಎಲ್ಲ ನಿದ್ದೆ ನಶೆ.

ನೆರಳು  ಬೆಳಕಿನಾ ತಮಾಷೆ
ರೇಖೆಗಳಲಿ ನವ ನಕಾಶೆ
ಬಿಡಿಸುತಿಹಳು ನಮ್ಮ ವಿದಿಶೆ
ಬಾಗಿಲಲ್ಲಿ ಚುಕ್ಕಿ ಪರಿಷೆ.

 

Vidishe

.

ತೊರೆದು ಎಲ್ಲ ಚಿಂತೆ ಕ್ಲೀಷೆ
ಒದಗಿ ಬರಲು ಭಾಗ್ಯದ ದಶೆ
ತನ್ಮಯದಲಿ ಮನದ ಭಾಷೆ
ಹೊಸೆಯುತಿಹುದು ರೂಪುರೇಷೆ.

ಫಲಿಸಲಿ ನಿನ್ನೆಲ್ಲ ಆಶೆ
ಹರಸಲಿ ನಿನ್ನನ್ನು ಈಶೆ
ನೆಲೆಸುತ ವರರತ್ನಕೋಶೆ
ಇರಿಸಲಿ ಅನವರತ ರಕ್ಷೆ.

 ,
– ಮೋಹಿನಿ ದಾಮ್ಲೆ ( ಭಾವನಾ )

 

 

4 Responses

  1. Nishkala Gorur says:

    channagide

  2. Niharika says:

    ಕವನ ಚೆನ್ನಾಗಿದೆ.. ವಿದಿಶೆ ಅನ್ನೋ ಪದನ ನಾನು ಇದುವರೆಗೆ ಕೇಳಿರಲಿಲ್ಲ..

  3. Divakara Dongre M says:

    ಕವಿತೆ ಆರ್ಥಪೂರ್ಣವಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: