ಏನೆನ್ನಲಿ ?
ನಿನ್ನ ಅವ್ವಾ ಎನ್ನಲೆ ,
ಬಾಯಿತುಂಬಾ, ಅಮ್ಮಾ.. ಎನ್ನಲೆ ?
ನಿನ್ನ ಅಜ್ಜಿಯೆನ್ನಲೆ,..
ಪ್ರೀತಿಯಿಂದ ತಾತಿಯಿನ್ನಲೆ ?
ದೊಡ್ಡಮ್ಮ ಎನ್ನಲೆ,
ದೊಡ್ಡವ್ವಾ ..ಎಂದು ಕರೆಯಲೆ ?
ಚಿಕ್ಕಮ್ಮನೆನ್ನಲೆ,
ಚಿಕ್ಕಿ ..ಎನ್ನಲೆ ?
ನಿನ್ನ ಅತ್ತೆ ಯೆನ್ನಲೆ,
ಅತ್ತಿ..ಎಂದು ಕರೆಯಲೆ ?
.
ಅಕ್ಕನೆನ್ನಲೆ, .
.ಅಕ್ಕಮ್ಮ…ಎಂದು ಪ್ರೀತಿ ಬೆರಿಸಲೆ ?
ನಿನ್ನ ತಂಗಿಯೆನ್ನಲೆ,
ತಂಗ್ಯಾವ್ವ..ಎನ್ನಲೆ ?
ಅತ್ತಿಗೆ ಯೆನ್ನಲೆ …
ವೈನಿ …ಎಂದು ಕರೆಯಲೆ ?
ನಿನ್ನ ಲೇ…ಎನ್ನಲೆ,.
.ನಿನ್ನ ಹೆಸರಿಡಿದು ಉಲಿಯಲೆ ?
ಗೆಳತಿಯೆನ್ನಲೆ,…
ಒಲವಿನ ಮನದಮಿಡಿತವೆನ್ನಲೆ ?
.
ನಿನ್ನ ವೀರವನಿತೆಯೆನ್ನಲೆ,
ಧೀರ ಮಹಿಳೆಯೆನ್ನಲೆ ?
ಪ್ರೀತಿಯ ರೂಪವೆನ್ನಲೆ,
ಸಂಸಾರದ ದೀಪವೆನ್ನಲೆ ?
ನಿನ್ನ ನಮ್ಮೆಲ್ಲರ ಕಣ್ಣುಯೆನ್ನಲೆ,
ದಾರಿತೋರಿ..ನಡೆಸುವ
ಹೆಣ್ಣು ಎನ್ನಲೆ ?
ಪ್ರೀತಿ,ವಾತ್ಸಲ್ಯ,ಮಮತೆಯ ಸಾಕ್ಷಿಯೆನ್ನಲೆ,
ಇಲ್ಲವೇ..ನಿನ್ನ. ಬರಿಯ. ಸ್ತ್ರೀ ಎನ್ನಲೆ ?
– ಎಚ್ ಆರ್ ಕೃಷ್ಣಮೂರ್ತಿ
ಕವನ ಸೊಗಸಾಗಿದೆ ..
ತುಂಬ ಉತ್ತಮವಾಗಿದೆ 🙂
ಉತ್ತಮ ಕವನ