ದಿನಮಣಿ
ನವಯುಗದ ಆಚಾರ್ಯನೇ
ರಾಮಕೃಷ್ಣರ ಶಿಷ್ಯನೇ
ಭಾರತಾಂಬೆಯ ವೀರಪುತ್ರನೇ
ಅಂಬುಧಿಯ ದಾಟಿ
ಸಹೋದರತ್ವವ ಮೆರೆದೆ
ಜಗವ ಬೆಳಗುವ ದಿನಮಣಿಯಂತೆ
ಭ್ರಾತೃತ್ವವ ಸಾರಿದೆ
ಕಾರ್ಮೋಡ ಕವಿದ ಹೃದಯದಿ
ಒಲುಮೆ ಸಿಂಚನಗೈದೆ
ದೇಶದ ಕೀರ್ತಿಪತಾಕೆಯ
ಮುಗಿಲೆತ್ತರಕ್ಕೇರಿಸಿದೆ
ಯುವ ಸಮೂಹಕ್ಕೆ ಸಿಂಹ ಶಕ್ತಿ ನೀಡಿ
ಕುಟಿಲದಾರಿ ತುಳಿದವರೆದುರು
ಎದೆಯುಬ್ಬಿಸಿ ನಿಂತೆ.
ವಿವೇಕದ ಕಣ್ಮಣಿಯಾಗಿ
ಯುವಶಕ್ತಿಗೆ ಮಾಧರಿಯಾಗಿ
ಜಗವ ಬೆಳಗುವ ದಿನಕರನಾದೆ.
– ರೇಷ್ಮಾ ಉಮೇಶ, ಭಟ್ಕಳ
ಶ್ರೀವಲಿ ಪ್ರೌಢಶಾಲೆ ,ಚಿತ್ರಾಪುರ.
Tumba chennagi kavana moodibandide. Yuvashaktiya chetanavada vivekanandara kuritu atyutama kavana needidiri.
ಕವನ ಚೆನ್ನಾಗಿದೆ.
ಧನ್ಯವಾದಗಳು