ನನ್ನದೊಂದು ಪುಟ್ಟ ಪ್ರಪಂಚ ಸುರಹೊನ್ನೆಯೊಂದಿಗೆ..
ಬರವಣಿಗೆ ನನ್ನ ಆಸಕ್ತಿಯ ಕ್ಷೇತ್ರ. ಪದವಿಯಲ್ಲಿದ್ದಾಗಿನಿಂದಲೂ ಸಣ್ಣ ಪುಟ್ಟ ಲೇಖನ, ಕವನ ಬರೆಯುತ್ತಿದ್ದವನು ಮುಂದೆ ಪತ್ರಿಕೆಗಳಲ್ಲಿ ಬರೆದೆ. ಆದರೆ, ವೆಬ್ ಸೈಟ್ ಗಳಿಗೆ ಬರೆಯೋದು ವಿಶೇಷ ಅನುಭವ. ಅನೇಕ ವೆಬ್ ಸೈಟ್ ಗಳು ಗೊತ್ತಿದ್ದರೂ ಬರೆಯೋಕೆ ಏನೋ ಹಿಂಜರಿಕೆ.
ಆಗ ನನಗೆ ವರವಾಗಿ ಕಂಡಿದ್ದು ಸುರಹೊನ್ನೆ.ಕಾಮ್. ಕಳೆದ ವರುಷ ನನಗೆ ಬರವಣಿಗೆ ಬೆಳೆಸಿಕೊಟ್ಟ ವರುಷ. ಸುರಹೊನ್ನೆ ಪರಿಚಯವಾಗಿದ್ದು ನನ್ನ ಸಹುದ್ಯೋಗಿ ಸ್ನೇಹಿತರಾದ ಶ್ರೀಮತಿ. ಜಯಶ್ರೀ ಬಿ. ಕದ್ರಿಯವರಿಂದ. ನಾನು ಈ ಸುರಹೊನ್ನೆಯನ್ನು ಬಹಳ ಹತ್ತಿರದಿಂದ ಕಂಡವನು. ಮೊತ್ತ ಮೊದಲು ಇದು ನನಗೆ ಇಷ್ಟವಾಗಿದ್ದು ಹೇಮಮಾಲಾ ಬಿ. ಅವರಿಂದ. ಅದಕ್ಕೆ ಕಾರಣ ಅವರ ಆಸಕ್ತಿ ಮತ್ತು ಸುರಹೊನ್ನೆಯನ್ನು ನಡೆಸಿಕೊಂಡು ಬಂದ ರೀತಿ. ಎಷ್ಟೇ ಏಳು ಬೀಳುಗಳು ಬಂದರೂ ತುಂಬಾ ಸೂಕ್ಷ್ಮವಾಗಿ ಗಮನಿಸಿ ಎಲ್ಲೂ ಹಿಂಜರಿಯದೆ ಬರವಣಿಗೆದಾರರ ಒಂದು ಬಳಗವನ್ನೇ ಹುಟ್ಟು ಹಾಕಿಸಿಬಿಟ್ಟರು.ಆಮೇಲೆ ನಾನು ಇಲ್ಲಿ ಬರೆದ ಕಥೆ, ಕವನ, ಹನಿಗವನ, ನ್ಯಾನೋ ಕಥೆಗಳು ಹೀಗೆ ಎಲ್ಲದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು.
ಹಾಗಾಗಿ ನಾನು ನನ್ನಷ್ಟಕ್ಕೇ ಒಂದು ನಿರ್ಧಾರಕ್ಕೆ ಬಂದೆ. ನಾನು ಸುರಹೊನ್ನೆಗೆ ಮಾತ್ರ ಬರೆಯುತ್ತೇನೆ ಎಂದು. ಬೇರೆ ಜಾಲತಾಣಗಳ ಪರಿಚಯವಾದರೂ, ಅವಕಾಶಗಳಿದ್ದರೂ ಬರೆಯಲಿಲ್ಲ.
‘
– ಅಶೋಕ್ ಕೆ.ಜಿ.ಮಿಜಾರು