ಕಳಚಿಡದ ಮುಖವಾಡ
ಎಲ್ಲರ ನೋವಿನಲಿ
ಇವರದೆ ಮುತುವರ್ಜಿ.
ಅಯ್ಯಯ್ಯೋ ಅನ್ಯಾಯ ಎಂದು
ಬೊಬ್ಬಿಡುವ ಮೋಡಿ.
ಹೋರಾಟದ ನೆಪದಲ್ಲಿ
ಬೆಕ್ಕಿನಾಟದ ನೋಟ.
ಕಿಚ್ಚಿನಲಿ ಅವರಿವರು ಕುದಿವಾಗ,
ಏನೋ ಮಂದಹಾಸ.
ಸಂಚಿಗೆ ಇನ್ನಷ್ಟು ಕನಸು ಕಾಣುವ
ಇವರದು
ಕಳಚಿಡದ ಮುಖವಾಡ.
– ಉಮೇಶ ಮುಂಡಳ್ಳಿ ಭಟ್ಕಳ
ಅರ್ಥ ಪೂರ್ಣ ಕವನ
Thank u madam