ಗ್ರಾಮೀಣ ಸೊಗಡು ಸಂಸ್ಕೃತಿ ಕ್ಷೀಣಿಸುತ್ತಿದೆ..!

Share Button

 

K.B Veeralinganagoudar

ವೀರಲಿಂಗನಗೌಡ್ರ. ಬಾದಾಮಿ.

 

ವಿಚಿತ್ರ ಬೆಳವಣಿಗೆ ಏನೆಂದರೆ ನನ್ನ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈಗೀಗ ಚಹಾದ ಅಂಗಡಿಗಳಿಗಿಂತ ಚಿಕನ್, ಫಿಶ್, ಎಗ್‌ಪಕೊಡಾ, ಎಗ್‌ರೈಸ್ ಸೆಂಟರ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಸಂಜೆಯಾಗುತ್ತಿದ್ದಂತೆ ಇವು ಊರಿನ ಮುಖ್ಯರಸ್ತೆಯ ಎಡಬಲದಲ್ಲಿ ಗರಿಗೆದರಿ ನಿಲ್ಲುತ್ತವೆ. ಇನ್ನೊಂದಡೆ ಊರ ಹೊರವಲಯದಲ್ಲಿ ನಸುಗೆಂಪಿನ ಬೆಳಕಿನಲಿ ಮಾಂಸಹಾರಿ (ಸಾವಜಿ) ಹೊಟೆಲ್‌ಗಳು ರಾತ್ರಿಯುದ್ದಕ್ಕೂ ಕಾರ್ಯಾರಂಭ ಮಾಡಲು ಅಣಿಯಾಗುತ್ತಿವೆ. ಇಂಥ ‘ನಾನ್ ವೆಜ್’ ಖಾನಾವಳಿಗಳಲ್ಲಿ ಕಾನೂನುಬಾಹಿರವಾಗಿ ಎಲ್ಲಾ ನಮೂನೆಯ ಮದ್ಯದ ಬಾಟಲ್‌ಗಳು ಯಥೇಚ್ಛವಾಗಿ ದೊರೆಯುತ್ತಿವೆ. ಹೀಗೆ ಅನಧಿಕೃತವಾಗಿ ಸರಬುರಾಜಾಗುವ ಮದ್ಯದ ಹಿಂದೆ ಸ್ಥಳಿಯ ಅಬಕಾರಿ ಇಲಾಖೆಯವರ ಸ್ವಾರ್ಥ ಮತ್ತು ಬೇಜಾವಬ್ದಾರಿಯೂ ಕೂಡಾ ಸಾಕಷ್ಟು ಮಡುಗಟ್ಟಿದೆ. ಗ್ರಾಮೀಣ ಯುವಜನಾಂಗಕ್ಕೆ ಮನೆಯಲ್ಲಿ ತಾಯಿ ಪ್ರೀತಿಯಿಂದ ಮಾಡುವ ಸಾಂಬಾರಗಿಂತ, ನಾನ್‌ವೆಜ್ ಖಾನಾವಳಿಗಳಲ್ಲಿರುವ ಸಾಕಷ್ಟು ಮಸಾಲೆ ಮತ್ತು ಬಣ್ಣಮಿಶ್ರಿತ ಚಿಕನ್/ಮಟನ್ ಸಾಂಬರ್ರೆ ಹೆಚ್ಚು ರುಚಿಯಾಗುತ್ತಿರುವದು ತೀರಾ ಶೋಚನೀಯ..!

 

roadsite eating

ಗ್ರಾಮಗಳಲ್ಲಿ ಹೆಚ್ಚುತ್ತಿರುವ ಮಾಂಸಹಾರಿ ಖಾನಾವಳಿಗಳ ಸಂಸ್ಕೃತಿಯಿಂದ ತಾಯಿ-ಮಗನ ಹಾಗೂ ಗಂಡ-ಹೆಂಡತಿಯ ಬಾಂಧವ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ‘ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ’ ಅನ್ನೊ ಗಾದೆಮಾತು ಈಗೀಗ ತಿರುವು ಮುರುವಾಗಿದೆ, ಗಂಡ ಹೊರಗಡೆ ಉಂಡು ಬಂದರೆ ಹೆಂಡತಿ ಮುನಿಸಿಕೊಂಡು ಮೌನದಿಂದ ಪ್ರತಿಭಟಿಸುತ್ತಿದ್ದಾಳೆ. ಕಲ್ಲುಸಕ್ಕರೆಯಂತಿರುವ ಕೌಟುಂಬಿಕ ಸಾಮರಸ್ಯ ಮೆಲ್ಲಗೆ ಕಲ್ಲಾಗುತ್ತ್ತಿದೆ. ಒಟ್ಟಾರೆ ದಾರಿಗೊಂದು ದಾಬಾ, ಆರು ತಿಂಗಳಿಗೊಂದು ಚುನಾವಣೆ, ಗೆದ್ದಲು ಹೂಳುವಿನಂತೆ ಪ್ರತಿ ಮನೆಗಳಲ್ಲೂ ಮನೆಮಾಡಿಕೊಂಡಿರುವ ಜಾತಿಯತೆ ಈ ಎಲ್ಲವುಗಳ ಹೊಡೆತದಿಂದ ಗ್ರಾಮೀಣ ಸೊಗಡು, ಸಂಸ್ಕೃತಿ, ಪ್ರೀತಿ ಎಲ್ಲವೂ ಕ್ಷೀಣಿಸುತ್ತಿರುವದು ನಿಜಕ್ಕೂ ವಿಷಾದನೀಯ.

ಹಳ್ಳಿಗಳು ಹಾಳಾದರೆ ದೇಶವೇ ದಿವಾಳಿಯಾದಿತನ್ನೊ ಭಯ ನನ್ನನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ದೃಶ್ಯ ಮಾಧ್ಯಮದವರು ಕೂಡಲೆ ಎಚ್ಚತ್ತುಕೊಂಡು ಕೇವಲ ನಗರ ಕೇಂದ್ರಿತ ಸುದ್ದಿಗಳತ್ತ ಗಮನಹರಿಸುವುದನ್ನು ಕೈ ಬಿಟ್ಟು, ಹಾಳಾಗುತ್ತಿರುವ ನಮ್ಮ ಹಳ್ಳಿಗಳತ್ತ ಧಾವಿಸಿ ಈ ಕೂಡಲೇ ವಾಸ್ತವ ಸ್ಥಿತಿಗತಿಯನ್ನು ವರದಿಮಾಡಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಅಧಿಕಾರಿ, ರಾಜಕಾರಣಿ, ಹೋರಾಟಗಾರರ ಗಮನಸೆಳೆಯಬೇಕಿದೆ.

 

– ವೀರಲಿಂಗನಗೌಡ್ರ. ಬಾದಾಮಿ.

4 Responses

  1. Pushpa Nagathihalli says:

    ಗೌಡ್ರ ಹೇಳಿರುವುದು ಸತ್ಯ. ಹಳ್ಳಿಗಳ ಸೊಗಡು ಮಾಯವಾಗಿದೆ

  2. Sathishms Praya says:

    Tinnalu comuter, mobilgale saku, adee jevana emba brmeyalliruva egina generationge grmina sogadu, mahatva, adu nashisuttirudarinda bhvishyadallina anahuthada arivellide heli ?

  3. Jayananda Kumar says:

    yes

  4. Dinesh Naik says:

    FACT

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: