ಚಂಚಲ…ಮಾಯ…ಕಿಚ್ಚು
ಚಂಚಲ
ವಯಸು ಮಾಗಿದರೂ
ಚೆಲುವೆಯ ನೋಡಿದಾಕ್ಷಣ
ಕೋತಿಯ ಶಿಶುವಾಗುವೆ
ಮಾಯ
ಕರಿಕತ್ತಲಲಿ ಕಾಮನಬಿಲ್ಲು
ಕಂಡರೂ
ಕಾಡುಬೆಕ್ಕು ಕಾಣಿಸದೆ
ಮರೆಯಾಯಿತು
ಕಿಚ್ಚು
ರಾತ್ರಿಯ ಕಿಚ್ಚು ಹೆಚ್ಚಾಗಿ
ಹೊದಿಕೆ ತೂತಾಗಿದೆ
ಕಾಲು ಸೇರದೆ
ಕೈ ಮೀರಿದೆ
– ಅಕ್ಷಯ ಕಾಂತಬೈಲು, ಕೊಡಗು
ಸೂಪರ್!
ಥ್ಯಾಂಕ್ಸ್ Jennifer