ಆರ್ಟಿಚೋಕ್ ತರಕಾರಿ
ರಸ್ತೆಯೊಂದರಲ್ಲಿ ನಡೆಯುತಿದ್ದಾಗ ತರಕಾರಿ ಅಂಗಡಿಯೊಂದರಲ್ಲಿ ಬುಟ್ಟಿಯಲ್ಲಿ ಜೋಡಿಸಿಟ್ಟಿದ್ದ, ಹೂವಿನಂತೆ ಕಾಣುವ ತರಕಾರಿ ಗಮನ ಸೆಳೆಯಿತು. ಸಾಮಾನ್ಯವಾಗಿ ಹೂವು ತರಕಾರಿಗಳಲ್ಲಿ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೋಲಿ ಗೊತ್ತು. ಸಾಂಪ್ರದಾಯಿಕ ಅಡುಗೆಗೆ ಬಳಸುವ ಹಿತ್ತಲಿನ ನುಗ್ಗೆ ಹೂ, ಬಾಳೆ ಹೂ, ಕುಂಬಳಕಾಯಿ ಹೂ ಇತ್ಯಾದಿಗಳೂ ಗೊತ್ತು.
ಆದರೆ ಗುಲಾಬಿ ಹೂವಿನಂತೆ ಕಾಣುವ, ತುಸು ಒರಟಾದ ಈ ತರಕಾರಿ ಏನೆಂದು ಗೊತ್ತಾಗಲಿಲ್ಲ.
ಅಂಗಡಿಯಾತನನ್ನು ಕೇಳಿದಾಗ ಗೊತ್ತಾದುದೇನೆಂದರೆ “ಇದು ಆರ್ಟಿಚೋಕ್’ಎಂಬ ತರಕಾರಿ. ಹಸಿ ಸಲಾಡಿನಂತೆಯೂ ಬಳಸಬಹುದು, ಒಲಿವ್ ಎಣ್ಣೆಯ ಜತೆ ಸೇರಿಸಿ ಹುರಿದು ತಿನ್ನಬಹುದು. ಅಥವಾ ಬೇಯಿಸಿ ತಿನ್ನಬಹುದು. ಬೆಂದಾಗ ಹೂವಿನ ದಳಗಳ ಹೊರಭಾಗ ಗಟ್ಟಿಯಾಗುತ್ತದೆ. ನುಗ್ಗೆಕಾಯಿ ತಿಂದಂತೆ ತಿನ್ನಬಹುದು”. ಇದು ಪಾಶ್ಚಿಮಾತ್ಯ ದೇಶಗಳಲ್ಲಿ ಬಳಕೆಯಲ್ಲಿರುವ ತರಕಾರಿ.
– ಹೇಮಮಾಲಾ.ಬಿ
Wow!
Nice. Artichoke ತರಕಾರಿಯ ರುಚಿ ಕಂಡವರಲ್ಲಿ ನಾನು ಒಬ್ಬಳು. ನುಗ್ಗಿ ಕಾಯಿಯ ರುಚಿಯನ್ನು ಹೊಂದಿರುವ ಇದರ ಹಾರ್ಟ್ ಅಂದರೆ ಮಧ್ಯದ ಖಂಡವನ್ನು ಕ್ಯಾನ್ ಗಳಲ್ಲಿ preserve ಮಾಡಿಯೂ ಅಡಿಗೆಗೆ ಉಪಯೋಗಿಸುತ್ತಾರೆ.