ಯೋಚಿಸು ಒಮ್ಮೆ..
ನೀ ಮೌನದಲ್ಲಿ ಯಾಕೆ ಬೇಯುವೆ
ಮಾತನಾಡದೆ ಏತಕೆ ಸೋಲುವೆ
ಯೋಚಿಸು ಒಮ್ಮೆ..
ಮಾತಿನಲ್ಲೇಕೆ ಕಿಡಿಯ ಸುರಿಸುವೆ
ಪ್ರೀತಿಯ ನುಡಿಯ ಏಕೆ ಮರೆಯುವೆ
ಯೋಚಿಸು ಒಮ್ಮೆ..
ನಕ್ಕು ಹಗುರಾಗುವುದವುದ ಬಿಟ್ಟು
ಸಿಟ್ಟಿನಲ್ಲಿ ಯಾಕೆ ಸಿಡಿಮಿಡಿಗೊಳ್ಳುವೆ
ಯೋಚಿಸು ಒಮ್ಮೆ..
ತಿಂದುಂಡು ಹಾಯಾಗಿರುವುದ ಬಿಟ್ಟು
ಸುಮ್ಮನೆ ಚಿಂತೆಯಲ್ಲೇಕೆ ಕೊರಗುವೆ
ಯೋಚಿಸು ಒಮ್ಮೆ..
ಯಾರ್ಯಾರದೋ ಸಮಸ್ಯೆಗಳ ನಡುವೆ
ನೀನ್ಯಾಕೆ ಸಿಲುಕಿಕೊಂಡು ಒದ್ದಾಡುವೆ
ಒಮ್ಮೆ ಎಲ್ಲ ಮರೆತುಬಿಡು..
ನಿನಗಾಗಿ ನೀನು ಬದುಕಿಬಿಡು
ಅವರಿವರ ಬಗ್ಗೆ ಯೋಚಿಸುವುದ ಬಿಟ್ಟುಬಿಡು
ಒಮ್ಮೆ ನಗು…
ಮತ್ತೆ… ಮತ್ತೆ.. ಮತ್ತೆ.. ಮನಸಾರೆ ನಗು
ಬಿಗುಮಾನವ ಬಿಟ್ಟು ಆಗು ನೀ ಜಗದಿ ಮಗು
–ನಾಗರಾಜ್ ಜಿ.ಎನ್.ಬಾಡ ,ಕುಮಟ

