ಬೆಳಕು-ಬಳ್ಳಿ

ಮನೆ…ಮನ…ತುಂಬಿದಾಗ

Share Button

ಮನೆಯ ಗೇಟ್ ತೆರೆದು ಹಾಗೇ ಬಿಟ್ಟಿದೆ…..
ಬಾಗಿಲ ಮುಂದೆ ಅಡ್ಡಾದಿಡ್ಡಿಯಾಗಿ ಬಿಟ್ಟ ಚಪ್ಪಲಿ…..ಶೂಗಳಿವೆ….

ಮನೆಯೊಳಗೆ ಸೋಫದ ಮೇಲಿನ ಬಟ್ಟೆ ಅಸ್ತವ್ಯಸ್ತವಾಗಿದೆ…..
ಅಡುಗೆ ಮನೆಯಿಂದ ಕರಿಯುವ ವಾಸನೆ ಬರುತ್ತಿದೆ…

ಮಗನ ಮಲುಗುವ ಕೋಣೆಯಲ್ಲಿ …..ಬ್ಯಾಗ್ ಗಳ ಸಾಲಿದೆ…..
ಸಿಂಕ್ ನಲ್ಲಿ ತೊಳೆಯುವ ಪಾತ್ರೆಗಳ ರಾಶಿಯಿದೆ……

ಇದೆಲ್ಲಾ ಗಾಬರಿಯಾಗುವ ವಿಷಯವಲ್ಲ…
ಮನೆಗೆ ಆತ್ಮೀಯ ಬಂಧುಗಳು ಬಂದಿರುವರು….

ಮನದ ಭಾರ ಇಳಿಸಲು ಖುಷಿ ತಂದಿಹರು……
ಆನಂದ ತುಂಬಿದ ಕ್ಷಣಗಳಿಗೆ ಸಾಕ್ಷಿಯಾಗಲು ಕರೆದಿಹರು….

ಈ ನಂಟಿನ ಅಂಟೇ ಮುಂದಿನ ಬಾಳಿಗೆ ಬಲ ಎಂದು ಸಾರಿಹರು…
ಶುರುವಾಗುವ ಸುದಿನಗಳಿಗೆ ನಾಂದಿ ಹಾಡಿಹರು…..

-ಶರಣಬಸವೇಶ ಕೆ.ಎಂ

-ಜೆಫ್ ಮೂರೆ ಅವರ ಸಾಲುಗಳಿಂದ ಸ್ಪೂರ್ತಿ ಪಡೆದು ಬರೆದಿದ್ದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *