ಬೇಕು ಬೇಕು ಬೇಕೆಂಬ ಈ ಜೀವನದಲ್ಲಿ
ಸಾಕು ಸಾಕೆಂಬ ಭಾವನೆಯೊಂದು ಬೇಕು
ನೆಮ್ಮದಿಯ ಜೀವನಕ್ಕೆ ಏನೇನು ಬೇಕೋ
ನಮ್ಮ ಪ್ರೀತಿಯ ಬದುಕಿಗೆ ಅಷ್ಟಿದ್ದರೆ ಸಾಕು
ನಮ್ಮ ಆಸೆ ಆಕಾಂಕ್ಷೆಗಳಿಗೆ ಕೊನೆಯಿಲ್ಲ
ಯಾವುದು ಎಷ್ಟಿದ್ದರೂ ನಮಗೆ ಸಾಲುವುದಿಲ್ಲ
ನಮ್ಮ ಸಾಧ್ಯ ಸಾಧ್ಯತೆಯನ್ನ ನೋಡುವುದಿಲ್ಲ
ಇನ್ನೊಬ್ಬರನ್ನು ಅನುಸರಿಸುವುದ ಬಿಡುವುದಿಲ್ಲ
ಅವರವರ ಸಾಮರ್ಥ್ಯಗಳು ಬೇರೆ ಬೇರೆ
ನಮ್ಮ ಸಾಮರ್ಥ್ಯ ಮೀರಿ ಬಯಸುವುದು ಹೊರೆ
ಆದ್ದರಿಂದ ಬೇಕುಬೇಡದ ಅವುಗಳನ್ನೆಲ್ಲ ತೊರೆ
ನಮ್ಮ ಅಗತ್ಯತೆಗಳಿಗೆ ಎಳೆದುಕೊಳ್ಳಬೇಕು ಗೆರೆ
ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು
ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು
ಸ್ವಾರ್ಥದ ಗೂಡಿಂದ ಜಿಗಿದು ಹೊರ ಬರಬೇಕು
ಅಗತ್ಯಕ್ಕೆ ಮೀರಿದ್ದನ್ನ ಬೇರೆಯವರಿಗೆ ಕೊಟ್ಟು ಬಿಡಬೇಕು
ನಾನು ನನ್ನದಷ್ಟೇ ಅಂದುಕೊಂಡರೆ ಮುಗಿಯದು ಸ್ವಾರ್ಥ
ಹಾಗೆ ಬದುಕುವುದಕ್ಕಿಲ್ಲ ಯಾವುದೇ ಅರ್ಥ
ನಮ್ಮವರ ಬಗ್ಗೆಯೂ ಯೋಚಿಸದೆ ಹೋದರೆ ವ್ಯರ್ಥ
ನಾವು ನಮ್ಮವರಿಗಾಗಿ ಬದುಕುವುದರಲ್ಲಿದೆ ಕೃತಾರ್ಥ
ನಾಗರಾಜ್ ಜಿ.ಎನ್.ಬಾಡ,ಕುಮಟ
