ಪೌರಾಣಿಕ ಕತೆ

ಕಾವ್ಯ ಭಾಗವತ 110 : ಮೃತ ದೇವಕೀ ಶಿಶುಗಳ ಪುನರ್ಮಿಲನ

Share Button

ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 13
ಮೃತ ದೇವಕೀ ಶಿಶುಗಳ ಪುನರ್ಮಿಲನ

ಗುರುಗಳಾದ ಸಂದೀಪಿನ್ಯಾಚಾರ್ಯರಿಗೆ ಕೃಷ್ಣ
ಹಿಂದೆ ಮೃತಪಟ್ಟ ಅವರ ಪುತ್ರನ
ತಂದುಕೊಟ್ಟ ವೃತ್ತಾಂತವ ಕೇಳಿ
ದೇವಕಿ ಅವನ ಕುರಿತು
ನೀನು ಅಪ್ರಮೇಯಪವೆಭಾವವುಳ್ಳವನು
ಸೃಷ್ಠಿ ಸ್ಥಿತ್ಯಾದಿ ಕಾರ್ಯಗಳು ನಿನ್ನೊಂದು
ಅಂಶದ ಶಕ್ತಿಯಲ್ಲೇ ನಡೆಯುವುದು
ಇದನ್ನನರಿತು ನಿನ್ನಲ್ಲೊಂದು ಕೋರಿಕೆ
ನಿನಗೆ ಪೂರ್ವದಲಿ, ಎನ್ನ ಉದರದಿ
ಜನಿಸಿ ಕಂಸಹತ್ಯೆಗೀಡಾದ
ಆರು ಮಂದಿ ಶಿಶುಗಳ ನೋಡಲು
ಹೃದಯ ಹಂಬಲಿಸುತಿದೆ
ಎಂದು ಕಣ್ಣಿರಿಡಲು
ಯೋಗೀಶ್ವರನವಳ ಸಮಾಧಾನಿಸಿ
ಬಲರಾಮನೊಡಗೂಡಿ
ಯೋಗಮಾಯೆಯಲಿ ಸುತಲೋಕವ ಸೇರಿ
ಸುರಲೋಕದಧಿಪತಿ ಬಲಿಯ ಆತಿಥ್ಯವನು ಸ್ವೀಕರಿಸಿ
ಹಿಂದೆ ಮರೀಚಿ ಮಹರ್ಷಿಗೆ
ಆರು ಮಂದಿ ಪುತ್ರರು ಜನಿಸಿ ನಂತರದಿ
ಯೋಗಮಾಯೆಯ ಪ್ರಭಾವದಿ
ದೇವಕಿಯ ಗರ್ಭದಲಿ ಶಿಶುಗಳಾಗಿ ಜನಿಸಿ
ಕಂಸನಿಂದ ಹತರಾದರು
ಹತರಾದ ಮಕ್ಕಳ ಶೋಕದಿ ಮಾತೆ
ದೇವಕಿ ದುಃಖಿಸುತಿಹಳು ಎಂದರುಹಿದನು

ಈಗ ಮರುಜನ್ಮದಿ ಆ ಆರುಮಂದಿ ಬಲಿಯ
ವಶದಲ್ಲಿರಲು ಅವರ ಮರಳಿ ಪಡೆದು
ದೇವಕಿಗೆ ತಂದು ಒಪ್ಪಿಸಲು
ದೇವಕಿಗೆ ಪುತ್ರವ್ಯಾಮೋಹದಿ
ಸ್ತನಗಳಲಿ ಹಾಲುಕ್ಕಿಬರಲು
ಅವರನ್ನಪ್ಪಿ ಶಿರಸ್ಸಾನಾಘ್ರಾಣಿಸುತ್ತ
ಸ್ತನಪಾನ ಮಾಡಿಸಿ ಸಂತುಷ್ಟಳಾದಳು

ಆರುಮಕ್ಕಳೂ ಬಲರಾಮಕೃಷ್ಣರಿಗೆ ನಮಿಸೆ
ಜನ್ಮಾಂತಾರ್ಜಿತ ಪಾಪವೆಲ್ಲ ನಿರ್ಮೂಲವಾಗಿ
ಸದ್ಗತಿಯವನರು ಹೊಂದಿದರು

ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
  https://surahonne.com/?p=45723

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *