ಹುಟ್ಟು ಸಾವಿನ ನಡುವಿನ ಜೀವನ
ಸುಖ ದುಃಖಗಳ ಜೊತೆಗಿನ ಪಯಣ
ಹೋರಾಡುತ್ತಿರಬೇಕು ನಾವು ಅನುಕ್ಷಣ
ಹಿತವೆನಿಸುವುದು ನೋವನ್ನು ಮರೆತಕ್ಷಣ
ಏನೇ ಬರಲಿ ಏನೇ ಇರಲಿ ಏನೇ ಆಗಲಿ
ಏನೂ ಇಲ್ಲದೇ ಇರಲಿ ಬದುಕು ನಿತ್ಯ ಸಾಗಲಿ
ಹಿಂಜರಿಕೆಯು ನಮ್ಮ ಹತ್ತಿರ ಸುಳಿಯದಿರಲಿ
ಎದುರಿಸಿ ನಿಲ್ಲುವ ಗುಂಡಿಗೆ ಗಟ್ಟಿಯಾಗಿರಲಿ
ಯಾರ ಬಾಳು ಇಲ್ಲಿ ನಿತ್ಯ ನರಕವಲ್ಲ
ನಿರಂತರ ಸ್ವರ್ಗ ಸುಖವೂ ಯಾರಿಗಿಲ್ಲ
ಎಲ್ಲವನ್ನೂ ಇಲ್ಲಿ ಅನುಭವಿಸಲೇ ಬೇಕಿಲ್ಲಿ
ನಿತ್ಯ ನಿರಂತರ ಹುಡುಕಾಟವು ಸಹಜವಿಲ್ಲಿ
ಎಸ್ಟೊಂದು ಸಮಸ್ಯೆಗಳಿವೆ ನಮಗಿಲ್ಲಿ
ಎಲ್ಲವನ್ನೂ ನಗುನಗುತಾ ಎದುರಿಸಬೇಕಿಲ್ಲಿ
ಒಂದೊಂದೇ ಹೆಜ್ಜೆ ಮುಂದಿಡುತ ಸಾಗಬೇಕಿಲ್ಲಿ
ಕಷ್ಟನಷ್ಟಗಳ ಮರೆತು ಭರವಸೆಯ ಹೊಂದಬೇಕಿಲ್ಲಿ

–ನಾಗರಾಜ ಜಿ.ಎನ್.ಬಾಡ,ಕುಮಟ

ಸರಳ ಸುಂದರ ಕವನ… ಸಾರ್
ಭರವಸೆಯ ಬೆಳಕು ತುಂಬುವ ಸೊಗಸಾದ ಕವನ.
ಸಮಸ್ಥಿತಿ ಸಾಧಿಸಲು ಕಿವಿಮಾತುಗಳನ್ನೊಳಗೊಂಡ ಚಂದದ ಕವನ.
ಅರ್ಥ ಗರ್ಬಿತವಾದ. ಕವನ
ಚೆನ್ನಾಗಿದೆ ಕವನ