ಗೆಳೆತನ ಎಂದರೇನು…….?
ಜೊತೆಯಾಗಿಯೇ ಇರುವುದೇ….ಜೊತೆಯಾಗಿಯೇ ಹೋಗುವುದೇ…..?
ಅಥವಾ ಅವರ ಜೊತೆಗೆ ಕಳೆಯಲು ನಮ್ಮ ಅಮೂಲ್ಯ ಸಮಯ ಮೀಸಲಿಡುವುದೇ…?
ಹುಸಿಮುನಿಸಿನಿಂದ ಅವರ ಜೊತೆ ಜಗಳ ಕಾಯುವುದೇ….?
ಆಸರೆ ಬೇಕಾದಾಗ…. ಭರವಸೆ ಕುಸಿದಾಗ….. ಅವರ ಕಡೆಯಿಂದ ಸಿಗುವ ಭೇಷರತ್ತು ಬೆಂಬಲವ
ಬಯಸುವುದೇ…?
ಕಣ್ಮುಚ್ಚಿ ಚಿಂತಿಸುವೆ ಗೆಳೆತನ ಬಗ್ಗೆ….ಆಗ
ವಿಷಾದ ದುಃಖಗಳು ಗಂಟು ಮೂಟೆ ಕಟ್ಟಿಕೊಂಡು ಹೊರಡುವವು…
ನಗೆ…..ಖುಷಿಗಳು ಕೂಡಲೇ ಬಾಗಿಲ ತಟ್ಟುವವು…
ಆತ್ಮವಿಶ್ವಾಸ ದಿಟ್ಟ ನಿಲುವು ಎದೆ ತುಂಬಾ ಹರಡುವುದು…..
ಕಾಣದ ಪರಿಹಾರ ಬಿಡದೆ ಎಡತಾಕುವುದು…..
ಮೋಸವಿಲ್ಲ ಸ್ಪರ್ಧೆಯಿಲ್ಲ ಈ ಬಂಧನದಲಿ…..
ವ್ಯಂಗ್ಯವಿಲ್ಲ ಅಪಹಾಸ್ಯವಿಲ್ಲ ಈ ಒಡನಾಟದಲಿ….
ನಿರೀಕ್ಷೆ ಮಾಡದ ನಿಜ ಒಲವು ಮೊಗೆದಷ್ಟು ಬೊಗಸೆ ತುಂಬಾ ದೊರೆಯುತ್ತಿದೆ….
ಸತ್ವ ಪರೀಕ್ಷೆಯ ಸಮಯದಲಿ ಬೆನ್ನೆಲುಬಾಗಿ ನಿಂತಿದೆ….

ಶರಣಬಸವೇಶ ಕೆ.ಎಂ


ಗೆಳೆತನದ ಸವಿಯನ್ನು ನೀಡಿದ್ದೀರಿ
ವಂದನೆಗಳು
ನೖಸ್..ಗೆಳತನದ… ಬಂಧನ ಅದರ ಅನಾವರಣ… ಚನ್ನಾಗಿ ದೆ ಸಾರ್
ಗೆಳೆತನದ ಅಭೇದ್ಯ ಬಂಧವನ್ನು ಬಿಂಬಿಸುವ ಚಂದದ ಕವನ
ಗೆಳೆತನವನ್ನು ಈ ಘಳಿಗೆ ತಮ್ಮ ಪದಗಳಿಂದ ಘಮಿಸುವಂತೆ ಮಾಡಿರುವಿರಿ ಅಣ್ಣಾ….,
ಜೀವನದ ಅತ್ಯಂತ ಪವಿತ್ರ ಮತ್ತು ಸಿಹಿ ಬಂಧನವಾದ ಗೆಳೆತನದ ಕುರಿತಾದ ಕವಿತೆ ಚೆನ್ನಾಗಿದೆ
ಸ್ನೇಹ ಪರಿಶುದ್ಧ