ಮನಸು ಮನಸುಗಳ ನಡುವೆ
ಭಾವನೆಗಳ ಸುತ್ತ ತಿಕ್ಕಾಟ
ಅರಿಯಲಾರದೆ ಹೋಗುವವು
ಆತ್ಮೀಯತೆಯ ಒಲವ ಒಡನಾಟ
ಇರುವುದು ನಮ್ಮೆಲ್ಲರೊಳಗೂ
ಒಂದಿಷ್ಟು ಮಾಹಿತಿಯ ಕೊರತೆ
ಆದರೂ ಕಡಿಮೆ ಆಗಬಾರದು
ಪ್ರೀತಿ ವಿಶ್ವಾಸದ ಬಂದದಿ ಕೊರತೆ
ನಮ್ಮೊಳಗಿರಲಿ ಎಷ್ಟೇ ದೂರದ ಅಂತರ
ಹರಿಯುತ್ತಿರಲಿ ಪ್ರೀತಿ ಪ್ರೇಮ ನಿರಂತರ
ಮೂಡದಿರಲಿ ಮನಸ್ಸಿನೊಳಗೆ ಕಂದರ
ಕಳಚದಿರಲಿ ಪ್ರೀತಿಯ ಬೆಸುಗೆಯ ಹಂದರ
ನಗುತಲಿರಲಿ ಎಂದೆಂದೂ ಒಲವ ಚಂದಿರ
ಅರಳಿ ಕಂಗೊಳಿಸಲಿ ಈ ಬದುಕು ಸುಂದರ
ನಕ್ಕು ನಲಿಯುತಿರಲಿ ನಮ್ಮೊಲವ ಮಂದಿರ
ಪ್ರೀತಿ ಅಕ್ಕರೆಯ ನುಡಿಯದು ಸುಮಧುರ
ನಾಗರಾಜ ಜಿ.ಎನ್.ಬಾಡ, ಕುಮಟ


ಕವನದ ಆಶಯ ಚೆನ್ನಾಗಿದೆ…ಪಡಿಮೂಡಿಸುವಿಕೆ ಹೆಚ್ಚು ವಾಚ್ಯ ಎನಿಸಿತು.. ಸಾರ್
ಚಂದದ ಕವಿತೆ ಸದಾಶಯದಿಂದ ಕೂಡಿದೆ
ಸರಳವಾದ ಕವಿತೆ ಚೆನ್ನಾಗಿದೆ.