ಕಾವ್ಯ ಭಾಗವತ 48 : ಮತ್ಸಾವತಾರ – 1

ಅಷ್ಟಮ ಸ್ಕಂದ – ಅಧ್ಯಾಯ 4
ಮತ್ಸಾವತಾರ – 1
ಈ ಜಗದ ಸಕಲ ಗೋಬ್ರಾಹ್ಮಣ ಸಾಧುಸಂತರ
ಧರ್ಮಾರ್ಥ ಕಾಮ ಮೋಕ್ಷಗಳೆಂಬ
ಚತುರ್ವಿಧ ಪುರುಷಾರ್ಥಗಳ
ಸಾಧನೆಗೆ ಆ ಭಗವಂತನವತಾರ ಕೇವಲ
ಮಾನವ ರೂಪದಲ್ಲಿರಬೇಕೆಂಬ
ನಿಯಮವಿಲ್ಲವೆಂಬುದರ ಕುರುಹಾಗಿ ಆ ಭಗವಂತ
ಮತ್ಸಾವತಾರದಲಿ
ಈ ಜಗವನುದ್ಧರಿಸುದುದು
ಒಂದು ಸೃಷ್ಟಿ ನಿಯಮ
ಹಿಂದಿನ ಕಲ್ಪದ ಅವಸಾನಕಾಲದಿ
ಉಂಟಾದ
ಮಹಾಪ್ರಳಯದಿ
ಮೂರು ಲೋಕಗಳೂ ಮುಳುಗೆ
ಜಗದ ಸೃಷ್ಟಿಕಾರ್ಯ ನಿರ್ವಹಿಪ ಬ್ರಹ್ಮನ
ಒಂದು ಹಗಲು ಮುಗಿದು ರಾತ್ರಿಯ ಆರಂಭದಲಿ
ತನ್ನ ಸೃಷ್ಟಾಧಿಕಾರ್ಯಗಳ ನಿಲ್ಲಿಸಿ
ವಿಶ್ರಮಿಸೆ
ಚತುರ್ವೇದಗಳೂ ಬಹಿರ್ತಗವಾದ ಸಮಯದಲಿ
ಹಯಗ್ರೀವ ದೈತ್ಯನ ಅಪಹರಣಕ್ಕೊಳಗಾಗಿ
ಸಮುದ್ರವ ಹೊಕ್ಕ ರಕ್ಕಸನ ವಧಿಸಿ
ಪ್ರಳಯಾಂತ್ಯದವರೆಗೂ
ವೇದಗಳ ರಕ್ಷಿಪ
ಬ್ರಹ್ಮದೇವನ ಸೃಷ್ಟಿಕ್ರಿಯೆಗಳ
ಪುನರರಾಂಭಕೆ
ಭಗವಂತನವತರಿಸಿದ
ಮತ್ಸಾವತಾರ
ಈ ಜಗದೆಲ್ಲ ಸೃಷ್ಟಿ
ವಿನಾಶ, ಮರುಸೃಷ್ಟಿಗಳ
ಕೊನೆಯಿಲ್ಲದ ವರ್ತುಲದ
ಒಂದು ಭಾಗವಷ್ಟೇ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=42831
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಎಂದಿನಂತೆ ಕಾವ್ಯ ಭಾಗವತ ಓದಿಸಿಕೊಂಡುಹೋಯಿತು…ಸಾರ್
ಧನ್ಯವಾದಗಳು.
ಮತ್ಸ್ಯಾವತಾರದ ಆರಂಭ ಕುತೂಹಲಕಾರಿಯಾಗಿದೆ.
ಧನ್ಯವಾದಗಳು.
ಭಗವಂತನ ಮೊದಲನೇ ಅವತಾರವಾದ ಮತ್ಸ್ಯಾವತಾರದ ಕಾವ್ಯ ಭಾಗವತ ರೂಪ ಬಹಳ ಚೆನ್ನಾಗಿದೆ ಸರ್
ವಂದನೆಗಳು.
ಪ್ರಕಟಿಸಿದ “ಸುರಹೊನ್ನೆ” ಗೆ ತುಂಬು ಮನದ ಧನ್ಯವಾದಗಳು.