ಹಾರುವ ಮುನ್ನ……

ತಾ ಹಾರುವ ಮುನ್ನ
ಎಲ್ಲಿಗೆ ಹಾರುವೆ
ಎಂಬ ಅರಿವಿಲ್ಲ ಹಕ್ಕಿಗೆ
ಪಯಣದ ಗುರಿ
ಮಾತ್ರ ಗಮ್ಯಕೆ
ಕುಳಿತು ಹಾರುವ
ಪ್ರಯತ್ನಕೆ ನೋಟದ
ಪರಿಚಿತ ನಡೆಯ
ಗುರುತಾಗಿಸಿ ಸಾಗಿದರೆ
ಮತ್ತೊಂದು ದೂರ
ಸಿಗುವ ಭರವಸೆ ಹಕ್ಕಿಗೆ
ಚಿಕ್ಕ ಗೂಡು
ಚೊಕ್ಕ ಬಾನು ಬಯಲು
ಬೆಳಕು ನೆರಳು ಬೊಗಸೆಯಲ್ಲಿ
ಬದುಕುವ ಖುಷಿ
ರೆಕ್ಕೆಗಳ ಮೇಲೆ ಜೀವ
ಇರುವಿಕೆಯ ಭಾವ
ಹಕ್ಕಿಯಂತೆ ಜೀವಂತ
ಬದುಕಿನ ಧಾವಂತ
ಪುಟ್ಟ ಹಣತೆಯ ಬೆಳಕು
ನಮ್ಮ ಉಸಿರಿನ ಅಳತೆ
ಗಾಳಿ ತಂಗಾಳಿ ಬೀಸಿ
ಹೋದರೂ ಉರಿವ ಹಣತೆ
ಸದಾ ಉಳಿವಂತೆ
ಒಲವು ಉಸಿರಾಗಲಿ
–ನಾಗರಾಜ ಬಿ.ನಾಯ್ಕ,ಕುಮಟಾ.
ಚೆನ್ನಾದ ಕವನ..ಸಾರ್
ಧನ್ಯವಾದಗಳು
ಚೆನ್ನಾಗಿದೆ
ಸೊಗಸಾದ ಭಾವಪೂರ್ಣ ಕವನ.
ಅರ್ಥಪೂರ್ಣ ಕವಿತೆ ಬಾಳಿಗೆ ಬೆಳಕಾಗುವಂತಿದೆ.
ಚೆನ್ನಾಗಿದೆ ಕವಿತೆ.
ಸುಂದರವಾಗಿದೆ ಸರ್.