ಅಭಿಮಾನ

ಇರಬೇಕು ಅಭಿಮಾನ ಮನಸ್ಸಿನೊಳಗೆ
ಕುಣಿದುಕುಪ್ಪಳಿಸಿ ಮನೆ ಮನದೊಳಗೆ
ಹೇಗಿರಬೇಕು ಹಾಗಿದ್ದರೆ ಚಂದ ಹೊರಗೆ
ಮಿತಿಮೀರಿದರೆ ಅನಾಹುತ ಈ ಬಾಳಿಗೆ
ಜಾಗೃತವಾಗಿರಬೇಕು ನಮ್ಮೊಳಗಿನ ವಿವೇಕ
ಹುಚ್ಚು ಆವೇಶಕ್ಕೆ ಬಿದ್ದು ಮಾಡಬಾರದು ಅತಿರೇಕ
ನಿರ್ದಿಷ್ಟ ಗೆರೆಯೊಳಗೆ ಇದ್ದರಷ್ಟೇನೇ ಬಂಧ
ಇಲ್ಲದೇ ಹೋದರೆ ತಪ್ಪಿಸಿಕೊಳ್ಳಲಾಗದು ದುರಂತದಿಂದ
ಯಾರಿಗಿಲ್ಲಿ ಯಾರು ಇಲ್ಲ ಸಮಸ್ಯೆಗಳಿಗೆ ಕೊನೆಯಿಲ್ಲ
ಒಂದು ಕ್ಷಣ ಬಂದು ಹೋಗುವವರೆಲ್ಲ
ನಮ್ಮವರ ಪಾಲಿಗೆ ಮಾತ್ರ ನಾವೇ ಎಲ್ಲಾ
ಅವರ ಕಣ್ಣೀರಿಗೆ ಕಾರಣ ನಾವಾಗಬಾರದಲ್ಲ
ಅವರವರ ಪಾಲಿನ ಜವಾಬ್ದಾರಿ ಅವರವರಿಗೆ
ಮಾಡಿಕೊಳ್ಳಬೇಕು ನಾವು ನಮ್ಮದೇ ಬೆಳವಣಿಗೆ
ದೂರದಿಂದಲೇ ಸಂಭ್ರಮಿಸೋಣ ಮೆರವಣಿಗೆ
ಯಾರು ಬರುವುದಿಲ್ಲ ನಮ್ಮೊಂದಿಗೆ ಕೊನೆಗಳಿಗೆ
ಅತಿರೇಕ ಆಗಬಾರದು ಯಾವುದೂ ಈ ಜಗದೊಳಗೆ
ಜವಾಬ್ದಾರಿಯುತ ವರ್ತನೆ ಇರಬೇಕು ನಮ್ಮೊಳಗೆ
ವಿಶ್ಲೇಷಣೆಯನ್ನು ಮಾಡಿಕೊಳ್ಳಬೇಕು ಅರೆಗಳಿಗೆ
ಹಾಕಿಕೊಳ್ಳಬೇಕು ಕಡಿವಾಣ ನಮ್ಮ ವರ್ತನೆಗಳಿಗೆ
ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.
ಅರ್ಥಪೂರ್ಣ ಕವನ ಸರ್, ಸಕಾಲಿಕ. ” ಯಾರಿಗೆ ಯಾರೂ ಇಲ್ಲ” ನಮ್ಮ ನಮ್ಮ ವರ್ತನೆಗಳಿಗೆ ಕಡಿವಾಣ ಹಾಕಿಕೊಳ್ಳಬೇಕು. ಮೌಲ್ಯಯುತ ಸಾಲುಗಳು..
……….ಶುಭಲಕ್ಷ್ಮಿ ನಾಯಕ
ಅರ್ಥಪೂರ್ಣ ಸಾಲು ಗಳು ಸಕಾಲಿಕ ಸರ್.
ನಮ್ಮ ನಮ್ಮ ವರ್ತನೆಗಳಿಗೆ ಕಡಿವಾಣವಿರಬೇಕು. ಮೌಲ್ಯಯುತ ಕವನ.
ಶುಭಲಕ್ಷ್ಮಿ ನಾಯಕ
ಹೌದು ಯವುದೇ ಯಾವುದಕ್ಕಾದರೂ ಸರಿ ಅಭಿಮಾನ ಸೀಮಿತವಾಗಿದ್ದರೆ ಸರಿ ಮಿತಿ ಮೀರಿದರೆ ಅಪಾಯ ತಪ್ಪದು…ಇತ್ತೀಚಿಗೆ ನೆಡೆದ ಘಟನೆಯೇ ಸಾಕ್ಷಿ..ಅದನ್ನು ನೆನಪುಸುವಂತಹ ಅರ್ಥ ಪೂರ್ಣ ಕವನ ಸಾರ್..
ನಮ್ಮ ಬದುಕಿನಲ್ಲಿ ಮೌಲ್ಯಗಳ ಬೇಲಿ ಹೀಗೆ ಹಾಕಿಕೊಳ್ಳಬೇಕು ಅನ್ನುವುದನ್ನು ವಿವರಿಸುತ್ತದೆ ಕವನ. Very nice.
ವಿವೇಚನೆ, ವಿವೇಕಯುತ ಬಾಳಿನ ಮರ್ಮವನ್ನು ತಿಳಿಸುವ ಸೊಗಸಾದ ಕವನ
ಅಂಧಾಭಿಮಾನದ ಬಗ್ಗೆ ಸರಿಯಾಗಿ ಎಚ್ಚರಿಸಿ ಬರೆದಿದ್ದೀರಿ ಸರಿ…ಪ್ರಸ್ತುತಕ್ಕೆ ಇದು ಅವಶ್ಯ
ಪ್ರಸ್ತುತ ಪರಿಸ್ಥಿತಿಗೆ ಕನ್ನಡಿ ಸರ್ ನಿಮ್ಮ ಕವನ.. ಚೆನ್ನಾಗಿದೆ
ಅಂತರಂಗವನ್ನು ಶೋಧಿಸಿಕೊಳ್ಳುತ್ತಲೇ ಮನಸ್ಸಿಗೆ ಕಡಿವಾಣ ಹಾಕಿಕೊಳ್ಳಲು ಪ್ರೇರೇಪಿಸುವ ಕವನ ಸೊಗಸಾಗಿ ಮೂಡಿ ಬಂದಿದೆ.