ಕಾವ್ಯ ಭಾಗವತ 28: ವೇನನ ಪೃಥು-1
28.ಚತುರ್ಥ ಸ್ಕಂದ
ಅಧ್ಯಾಯ – 3
ವೇನನ ಪೃಥು-1
ಪುತ್ರಕಾಮೇಷ್ಠಿ ಯಾಗವಂ ಮಾಡಿ
ಪಡೆದ
ಮಗನಾದರೇನು,
ಕರ್ಮಫಲದಿಂ ಬಿಡುಗಡೆಯುಂಟೆ?
ಮಗ ದುರುಳನಾಗಿ
ಅಧರ್ಮಿಯಾಗಿ
ಲೋಕಕಂಠಕನಾಗಿರೆ
ತಂದೆ ಅಂಗರಾಜನಿಗೆ
ಜೀವನ ವಿರಕ್ತಿ,
ಅರಣ್ಯ ವಾಸ
ದುರುಳನಾದರೇನ್
ರಾಜನಮಗ, ರಾಜಂಗೆ,
ದೈವಾಂಶಸಂಭೂತನೆ
ಎಂಬ ನಂಬುಗೆಗೆ
ಜೋತು ಬಿದ್ದು
ವೇನನನಿಗೆ ರಾಜ್ಯವಂ ಒಪ್ಪಿಸಿ
ನಿರಾಳನಾದ.
ಗುರು ಪುಂಗವರಿಗೆ,
ಮಂತ್ರಿ ಮಾಗಧರಿಗೆ
ಭ್ರಮ ನಿರಸನ
ಹಾವಿಗೆ ಹಾಲೆರೆದಂತೆ
ವೇನನ
ಸಕಲ ಪ್ರಜೆಗಳಿಗೆ
ಬ್ರಹ್ಮಗೆ, ಋಷಿ ಪುಂಗವರಿಗೆ
ಅನ್ನ ಬೆಳೆವ ಭೂತಾಯಿಗೆ
ಉಣ್ಣಿಸುದುದು
ಬರೀ ಹಾಲಾಹಲವನ್ನೆ.
ಭೂತಾಯಿ ಬಂಜೆಯಾದಳು
ಕಳ್ಳಕಾಕರು ವಿಜೃಂಭಿಸಿ,
ದೈವತ್ವವನ್ನೆಲ್ಲಾ ನಂಬದ ರಾಜಂಗೆ
ಈ ಭುವಿಯೆಲೆಲ್ಲಿ ಸ್ಥಾನ
ಅಧರ್ಮಕೆ ಧರ್ಮದೇಟು,
ಸಾತ್ವಿಕ ಕೋಪಕ್ಕೆ
ಉಳಿಯುವರೆ ನಾಸ್ತಿಕರು
ಋಷಿ ಮುನಿಗಳ
ಮಹರ್ಷಿಗಳ
ಅಸಹನೆಯ
ಶಾಪ, ಹೂಂಕಾರಗಳು
ದಹಿಸಿದವು
ಅಧರ್ಮದ ಪ್ರತಿನಿಧಿ
ವೇನನನ,
ಮತ್ತೆ ರಾಜನಿಲ್ಲದೆ
ರಾಜ್ಯ ಅನಾಯಕ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41806
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತದ ಈ ಭಾಗ, ಅಪಾತ್ರರಿಗೆ ಅಧಿಕಾರ, ದಾನ ನೀಡಿದರೆ ಉಂಟಾಗಬಹುದಾದ ಅನಾಹುತಗಳ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ.
ಕಾವ್ಯ ಭಾಗವತದಲ್ಲಿ ಇವತ್ತಿನ ಪ್ರಕರಣ ತುಂಬಾ ಚಿಂತಿಸುವಂತಿದೆ.. ಎಂತವರಿಗೆ ದಾನ ಮಾಡಬೇಕು ಎಂಥವರಿಗೆ ಅಧಿಕಾರಕೊಡಬೇಕು ಎನ್ನುವ ಅಂಶದ ಬಗ್ಗೆ ಬೆಳಕು ಚೆಲ್ಲುವಂತಿದೆ..ಹಾಗೇ ನಾವು ಮಾಡಿದ ಕರ್ಮಫಲ ಬಿಡುವುದಿಲ್ಲ ಅನುಭವಿಸಲೇ ತೀರಬೇಕೆಂಬ ಸಂದೇಶ ವೂ ಇದೆ.
ಬಹಳ ಚೆನ್ನಾಗಿದೆ
ಪ್ರಕಟಿಸಿದ “ಸುರಹೊನ್ನೆ” ಗೂ, ಓದಿ ಪ್ರತಿಕ್ರಿಯೆಯನ್ನು ನೀಡುವ ಸಹೃದಯರಿಗೂ ಧನ್ಯವಾದಗಳು.
ಈ ಪೌರಾಣಿಕ ಕತೆ ನನಗೆ ಗೊತ್ತಿರಲಿಲ್ಲ..ಸರಳವಾಗಿ ಕಥೆಯನ್ನು ಬಿಂಬಿಸಿದ ತಮಗೆ ಧನ್ಯವಾದಗಳು .
ಕಾವ್ಯ ಭಾಗವತವು ಎಂದಿನಂತೆ ಆಸಕ್ತಿಕರವಾಗಿದೆ. ವೇನನ ಕಥೆ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಬಹಳ ಕುತೂಹಲದಾಯಕವಾಗಿದೆ. ಧನ್ಯವಾದಗಳು ಸರ್.